ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಅತ್ಯವಶ್ಯ: ನಂದೇಶ
ಲೋಕದರ್ಶನ ವರದಿ,
ಜಮಖಂಡಿ 21: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡೆ ಅತ್ಯವಶ್ಯವಾಗಿಬೇಕು. ಕ್ರೀಡೆಯಿಂದ ದೈಹಿಕ, ಮಾನಸಿಕ ಮತ್ತು ಶಾರೀರಿಕವಾಗಿ ಸದೃಡರಾಗುತ್ತಾರೆಂದು ದೈಹಿಕ ಅಧೀಕ್ಷಕ ಪಂಚಾಕ್ಷರಿ ನಂದೇಶ ಹೇಳಿದರು.
ವಿಶ್ವಾರಾಧ್ಯ ಶಾಲೆಯ ಆಶ್ರಯದಲ್ಲಿ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಜಮಖಂಡಿ ಪಶ್ಚಿಮ ವಲಯ ಮಟ್ಟದ ಪ್ರೌಢ-ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪ್ರಾಮಾಣಿಕತೆಯಿಂದ ಆಟವಾಡಬೇಕು. ದ್ವೇಷ ಹಾಗೂ ಅಸೂಯೆಯಿಂದ ಆಟವಾಡಬಾರದು. ಸೋಲು-ಗೆಲುವು ಇರುತ್ತೆ ಆದರೆ ಪ್ರಯತ್ನ ಮುಖ್ಯ ವಿದ್ಯಾಥರ್ಿಗಳು ದೃತಿಗೆಡದೆ, ದೈರ್ಯದಿಂದ ಆಟವಾಡಬೇಕು ಎಂದರು.
ಒಗ್ಗಟ್ಟಿನಿಂದ ಆಟವಾಡಿ, ದೇಶವನ್ನು ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಆಟ ಎಂದ ಮೇಲೆ ಸೋಲು ಗೆಲುವು ಸಾಮಾನ್ಯ, ದ್ವೇಷ ಅಸೂಯೆಯಿಂದ ಆಟವಾಡ ಬಾರದು. ರಾಷ್ಟ್ರಗೀತೆ, ನಾಡಗೀತೆಗೆ ಗೌರವ ಸೂಚಿಸಬೇಕು. ದೈಹಿಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಕ್ಷಪಾತ, ಬೇದ ಭಾವ ಮಾಡದೆ ಸರಿಯಾದ ನಿರ್ಣಯನೀಡಬೇಕೆಂದರು.
ಮುತ್ತಿನಕಂತಿಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು. ಸಂಸ್ಥೆ ಅಧ್ಯಕ್ಷೆ ದಾನಮ್ಮ ಮಾಳಿ, ಪ್ರೌಢಶಾಲಾ ಶಿಕ್ಷಕರ ಸಂಘ ತಾಲೂಕಾಧ್ಯಕ್ಷ ನರಸಿಂಹ ಕುಲ್ಲೋಳಿ, ಶಂಭು ಕಾಯಿ, ಶಿವಾಜಿ ಶಿಂದೆ, ಚನ್ನು ಮಾಳಿ, ಬೋಸ್ಲೆ ಸೇರಿದಂತೆ ಅನೇಕರಿದ್ದರು.