ವೃತ್ತ ಪೌರಸೇವಾ ನೌಕರರಿಗೆ ಮದ್ಯಂತರ ಸೌಲಭ್ಯಕ್ಕೆ ಆದೇಶ: ಹರ್ಷ
ಸವದತ್ತಿ 26: ರಾಜ್ಯದಲ್ಲಿನ 21ಸಾವಿರ ನಿವೃತ್ತ ಪೌರಸೇವಾ ನೌಕರರಿಗೆ ಮತ್ತು ಕುಟುಂಬದ ಪಿಂಚಣಿದಾರರಿಗೆ ರಾಜ್ಯ ಸರಕಾರವು ಶೇ.17ರಷ್ಟು ಮದ್ಯಂತರ ಸೌಲಭ್ಯವನ್ನು ಕಲ್ಪಿಸಲು ಆದೇಶ ನೀಡಿರುವುದು ನಿವೃತ್ತ ಪೌರ ನೌಕರರ ಸಂಕಷ್ಟಕ್ಕೆ ಅತ್ಯಂತ ಅನುಕೂಲ ಕಲ್ಪಿಸಲಾಗಿರುವದರಿಂದ ಸರಕಾರಕ್ಕೆ ನಾವು ವಿನಮ್ರರಾಗಿದ್ದೇವೆ ಎಂದು ನಿವೃತ್ತ ಪೌರ ನೌಕರ ಹಾಗೂ ಸವದತ್ತಿಯ ರೇಣುಕಾ ಅರ್ಬನ ಸೊಸೈಟಿ ಅಧ್ಯಕ್ಷ ಬಸವಪ್ರಭು ಪ್ರಭುನವರ (ಕಾಕಾ) ಹೇಳಿದ್ದಾರೆ.
ನಗರಾಭಿವೃದ್ದಿ ಇಲಾಖೆಯ ನಗರ ಸ್ಥಳೀಯ ಸಂಸ್ಥೆಗಳ ನಿವೃತ್ತ ಪೌರ ಸೇವಾ ನೌಕರರುಗಳು ಮತ್ತು ಕುಟುಂಬ ಪಿಂಚಣಿದಾರರಿಗೆ ಏ.1ರಿಂದ ಜಾರಿ ಬರುವಂತೆ ರಾಜ್ಯ ಸಂಚಿತ ನಿಧಿಯಿಂದ ಪಾವತಿಸಲು ಆದೇಶಿಸಿ ಅದನ್ನು ಅನುಷ್ಠಾನಗೊಳಿಸಲು ಪೌರಾಢಳಿತ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿತ್ತು. ಇದನ್ನು ಒಂದೆ ದಿನದಲ್ಲಿ ಅನುಷ್ಠಾನಗೊಳಿಸಿರುವ ಪೌರಾಢಳಿತ ನಿರ್ದೇಶಕರಾದ ಮಂಜುಶ್ರೀ ಹಾಗೂ ವಿಶೇಷ ಕಾಳಜಿವಹಿಸಿದ್ದ ನಗರಾಭಿವೃದ್ದಿ ಕಾರ್ಯದರ್ಶಿಗಳಾದ ಡಾ.ಅಜಯ ನಾಗಭೂಷಣರವರಿಗೆ ಸಮಸ್ತ ನಿವೃತ್ತ ಪೌರ ನೌಕರರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ರಾಜ್ಯ ಸರಕಾರವು 7ನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಅಂಗೀಕರಿಸಿ ಸರಕಾರ ಮಂಜೂರು ಮಾಡಿದ ಮೇಲೆ ಸರಕಾರಿ ನೌಕರರು ಮತ್ತು ನಿವೃತ್ತಿ ನೌಕರರಿಗೆ ಹೊರಡಿಸುವ ಆದೇಶದಲ್ಲಿಯೇ ಪೌರ ನೌಕರರನ್ನು ಅದೇ ಆದೇಶದಲ್ಲಿ ಸೇರೆ್ಡಗೊಳಿಸುವದರ ಜೊತೆಗೆ ನೌಕರರು ಅನಗತ್ಯವಾಗಿ ರಾಜಧಾನಿಗೆ ಅಲೆದಾಡುವದಕ್ಕೆ ಕಡಿವಾಣ ಹಾಕಬೇಕೆಂದು ಸರಕಾರಕ್ಕೆ ವಿನಂತಿಸಿದ್ದಾರೆ.