ಜಮಖಂಡಿ

ಸಮಾಜ ಸೇವೆ ಪ್ರತಿಯೊಬ್ಬರ ಆದ್ಯ ಕರ್ತವ್ಯ: ಹುಲ್ಲೋಳ್ಳಿ

ಸಮಾಜ ಸೇವೆ ಪ್ರತಿಯೊಬ್ಬರ ಆದ್ಯ ಕರ್ತವ್ಯ: ಹುಲ್ಲೋಳ್ಳಿ

ಲೋಕದರ್ಶನ ವರದಿ,

ಜಮಖಂಡಿ  24: ಅಂದುಕೊಳ್ಳುವುದು ಜೀವನವಲ್ಲ, ಸಮಾಜದೊಂದಿಗೆ ಹೊಂದಿಕೊಳ್ಳುವುದು ಜೀವನ.ಸಮಾಜ ಸೇವೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕಾಗಿದೆಂದು ಹುಬ್ಬಳ್ಳಿಯ ಹೆಸ್ಕಾಂ ಎಂಡಿ ಡಾ. ಸಿದ್ದು ಹುಲ್ಲೋಳ್ಳಿ ಕರೆ ನೀಡಿದರು.

ತಾಲೂಕಿನ ನಾಕೂರ ಗ್ರಾಮದ ಆಲಗೂರ ತೋಟದಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ, ಲೆಕ್ಕ ಪರಿಶೋಧಕರ ದಿನಾಚರಣೆ, ಕಂದಾಯ ದಿನಾಚರಣೆ ಹಾಗೂ ಪತ್ರಕರ್ತರ ದಿನಾಚರಣೆ ಕಾರ್ಯಕರಮವನ್ನು ಉದ್ಘಾಟಿಸಿ  ಮಾತನಾಡಿದರು.

ಇಂದು ನಾವು ಸಮಾಜದ ಋಣ ತೀರಿಸಬೇಕಾದರೆ ಸಮಾಜಕ್ಕಾಗಿ ಏನನ್ನಾದರೂ ಅರ್ಪಿಸಬೇಕು.ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಸಮಾಜಮುಖಿ ಕಾರ್ಯದಲ್ಲಿ ತೊಡಗಬೇಕು. ಪ್ರತಿಯೊಬ್ಬರೂ ಯಾವುದದರೂ ಸಂಘ-ಸಂಸ್ಥೆಯೊಂದಿಗೆ ನಿಕಟ  ಸಂಪರ್ಕ ಇಟ್ಟುಕೊಂಡಿರಬೇಕು. ಅಲ್ಲಿ ನಡೆಯುವ ಚಿಂತನ-ಮಂಥನಗಳ ಬಗ್ಗೆ ಚರ್ಚೆ  ನಡೆಸಬೇಕು. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಲ್ಲಿ ಸೇವಾ ಮನೋಭಾವನೆ ಮೂಡುವಂತೆ ಪ್ರೇರಣೆ ನೀಡಬೇಕಾಗಿದೆ. ಇಂದು ನಾವುಗಳು ಕಾಲಕ್ಕೆ ತಕ್ಕಂತೆ ಇರಬೇಕು. ಅಷ್ಟೇ ತೃಪ್ತಿ ಪಡಬೇಕೆಂದರು. 

ಅತಿಥಿಗಳಾಗಿದ್ದ ತಹಸೀಲ್ದಾರ ಸದಾಶಿವ ಮಕ್ಕೋಜಿ ಮಾತನಾಡಿ, ಸಮಾಜದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರೂ ನಿಸ್ವಾರ್ಥದಿಂದ ಕಾರ್ಯ ನಡೆಸಬೇಕು. ಸರ್ಕಾರದೊಂದಿಗೆ ಸಂಘ, ಸಂಸ್ಥೆಗಳು ಕೈ ಜೋಡಿಸಿದರೆ  ಮಾತ್ರ ಸಮಾಜ ಸುಧಾರಣೆ ಮಾಡಲು ಸಾಧ್ಯವಾಗುತ್ತದೆ. ನಾವೆಲ್ಲರೂ ನಮ್ಮ ಜೊತೆಗಿರುವವರನ್ನು ಸಮಾಜಮುಖಿಗಳನ್ನಾಗಿ ಮಾಡಲು ಪ್ರಯತ್ನ ಮಾಡಬೆ ಕಾಗಿದೆಂದು ಎಂದರು.

ಸಮಾರಂಭದಲ್ಲಿ ವೈದ್ಯರುಗಳಾದ ಡಾ.ಮಹೇಶ ಪಾಟೀಲ, ಡಾ.ಮನೋಹರ ಕೊಕಟನೂರ, ಡಾ.ಕಿಶೋರ ನ್ಯಾಮಗೌಡ, ಡಾ.ಬಸವರಾಜ ಉಗ್ರಾಣ, ಲೆಕ್ಕ ಪರಿಶೋಧಕ ನಂದನ ಲೊಯಾ, ವೃಶಾಲಿ ಭೂತಡಾ, ಉಪ ತಹಸೀಲ್ದಾರ ವೈ.ಎ.ದ್ರಾಕ್ಷಿ, ತಾಲೂಕಾ ಪತ್ರಕರ್ತರ ಬಳಗ ಅಧ್ಯಕ್ಷ  ಮಲ್ಲು ಆಳಗಿ, ಅಪ್ಪು ಪೋತರಾಜ ಸಹೋದರನ್ನು ಸನ್ಮಾನಿಸಲಾಯಿತು. ಇನ್ನರ್ವ್ಹೀಲ್ನ ಮಹಾನಂದಾ ಧರಿಗೌಡರ ,ಡಾ.ಆರ್.ಎ.ದೇವರಡ್ಡಿ, ಹಿರಿಯ ಪತ್ರಕರ್ತ ಗುರುರಾಜ ವಾಳ್ವೇಕರ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ರವೀಂದ್ರ  ಗವಳಿ ಸ್ವಾಗತಿಸಿದರು. ಆರ್.ಪಿ. ನ್ಯಾಮಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು ಕೋವಳ್ಳಿ, ಪ್ರಕಾಶ ಗೌಡರ ನಿರೂಪಿಸಿದರು. ಬಸವರಾಜ ಆಲಗೂರ ವಂದಿಸಿದರು. 


ಸುದ್ದಿ ಓದಿ