ಜಮಖಂಡಿ

ಟಿಕೆಟ್ ನೀಡಿದ ಕಾರಣ ಸದಸ್ಯತ್ವಕ್ಕೆ ಸಿಂಧೂರ ರಾಜೀನಾಮೆ

ಟಿಕೆಟ್ ನೀಡಿದ ಕಾರಣ ಸದಸ್ಯತ್ವಕ್ಕೆ ಸಿಂಧೂರ ರಾಜೀನಾಮೆ

ಲೋಕದರ್ಶನ ವರದಿ

ಜಮಖಂಡಿ 18: ಬಿಜೆಪಿ ಪಕ್ಷದ ರಾಜ್ಯ ಹಾಗೂ ಕೇಂದ್ರ ನಾಯಕರು ಪಕ್ಷದ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ನಿಷ್ಠಾವಂತ ಕಾರ್ಯಕರ್ತರನ್ನು ಹಾಗೂ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಟಿಕೇಟ್ ನೀಡದೆ, ಹಣಬಲ ಇದ್ದ ವ್ಯಕ್ತಿಗಳಿಗೆ ಮಾತ್ರ ಟಿಕೆಟ್ ನೀಡಿದ ಕಾರಣ ಬಿಜೆಪಿ ಪಕ್ಷಕ್ಕೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಟಿಕೆಟ್ ಆಕಾಂಕ್ಷಿ ರೈತ ಮುಖಂಡ ಬಿ,ಎಸ್, ಸಿಂಧೂರ ಹೇಳಿದರು.

ನಗರದ ಗೃಹಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3 ದಶಕಗಳಿಂದ ಸಕ್ರೀಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡು ಪಕ್ಷದ ಬಲವರ್ಧನೆ ಜೊತೆಗೆ ಸ್ಥಳಿಯ ಸಂಘ, ಸಂಸ್ಥೆಗಳ ಚುನಾವಣೆ ಹಿಡಿದು ಸಂಸದರ ಚುನಾವಣೆಯಲ್ಲಿ ಅಭ್ಯಥರ್ಿಗಳ ಆಯ್ಕೆಗಾಗಿ ಹಗಲಿರುಳು ಪ್ರಾಮಾಣಿಕ ಕಾರ್ಯ ಮಾಡಿದರು ಸಹ, ಪಕ್ಷ ನನಗೆ ಯಾವುದೆ ಸ್ಥಾನಮಾನ ನೀಡದೆ ಕಡೆಗಣಿಸಿರುವದು ಬೇಸರ ಉಂಟು ಮಾಡಿದರಿಂದ ಮನಸಿಗೆ ಮನನೊಂದು ರಾಜೀನಾಮೆ ಸಲಿಸಿದ್ದೇನೆ ಎಂದರು.

ವ್ಯಕ್ತಿಗಿಂತ ಪಕ್ಷ ದೊಡ್ಡದು ಎನ್ನುವ ಸಿದ್ಧಾಂತ ಹೇಳುವ ಬಿಜೆಪಿಯವರು ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಶ್ರಮವಿಲ್ಲದವರಿಗೆ ಟಿಕೆಟ್ ನೀಡಿರುವದು ಯಾವ ನ್ಯಾಯ, ಬಿಜೆಪಿ ಪಕ್ಷದಲ್ಲಿ ಟಿಕೆಟ್ ಮಾರಾಟವಾಗುತ್ತಿದೆ. ಯಾರು ಹಣಬಲ ಇದ್ದಾರೆ. ಅವರಿಗೆ ಮಾತ್ರ ಟಿಕೆಟ್ ನೀಡಿದ್ದಾರೆ ಎಂದು ಆರೋಪಿಸಿದರು.

ಒಬ್ಬ ಸಾಮಾನ್ಯ ರೈತನ ಮಗನಾಗಿ ದಿ, ಜಿ,ಎಸ್, ಬಾಗಲಕೋಟ ಅವರ ಅಪ್ಪಟ ಶಿಷ್ಯನಾಗಿ ಬೆಳೆದು ಇಂದು ದೊಡಮಟ್ಟದ ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿದೆನೆ. ಮಂಡಲ ಪಂಚಾಯತಿ ಸದಸ್ಯನಾಗಿ ಆಯ್ಕೆಯಾಗಿ ಜನಪರ ಕಾರ್ಯಗಳನ್ನು ಮಾಡುತ್ತ ಜನರ ಸೇವೆಗೈದು ಗ್ರಾಮಗಳ ಅಭಿವೃದ್ಧಿ ಜೊತೆಗೆ ರೈತಪರ ಹೋರಾಟ ಮನೋಭಾವ ಇಟ್ಟುಕೊಂಡು ರಾಜಕೀಯವಾಗಿ ಬೆಳೆದು ಬಂದಿದ್ದೇನೆ ಎಂದರು.

2004ರಲ್ಲಿ ಅಖಂಡ ಜಮಖಂಡಿ ಕ್ಷೇತ್ರ ಎಲ್ಲ ಜನತಾ ಪರಿವಾರದ ನಾಯಕರನ್ನು ಒಗ್ಗೂಡಿಸಿಕೊಂಡು ಬಿಜೆಪಿ ಪಕ್ಷಕ್ಕೆ ಸೇರಿಸುವಲ್ಲಿ ನನ್ನ ಪ್ರಮುಖ ಪಾತ್ರವಿದೆ. 2004, 2008 ರಲ್ಲಿ ಬಿಜೆಪಿ ಅಭ್ಯಥರ್ಿಗಳನ್ನು ಆಯ್ಕೆ ಮಾಡಲು ಒಬ್ಬ ಸಣ್ಣ ಕಾರ್ಯಕರ್ತನಂತೆ ಶ್ರಮಿಸಿದ್ದೇನೆ. 2023 ಸಾರ್ವತ್ರಿಕ ಚುನಾವಣೆಗೆ ಜಮಖಂಡಿ ಮತಕ್ಷೇತ್ರದಿಂದ 21 ಜನ ಆಕಾಂಕ್ಷಿಗಳಾಗಿದ್ದೇವು. ಯಾರಿಗೆ ಬಿಜೆಪಿ ಟಿಕೇಟ್ ಸಿಕ್ಕರೂ ಅವರ ಆಯ್ಕೆಗೆ ಎಲ್ಲರೂ ಶ್ರಮಿಸುತ್ತೇವೆ ಎಂದು ಪ್ರಮಾಣ ಮಾಡಲಾಗಿತ್ತು. ಆದರೆ ಬಿಜೆಪಿ ಘೋಷಿತ ಅಭ್ಯರ್ಥಿ ನನಗೆ ಟಿಕೆಟ್ ನೀಡಿದರೆ ನೀವು ನನಗೆ ಬೆಂಬಲ ನೀಡಬೇಕು ಆದರೆ ನಿಮ್ಮಗೆ ಟಿಕೆಟ್ ನೀಡಿದರೆ ನಾನು ಬೆಂಬಲ ನೀಡದೆ ಪಕ್ಷೇತರನಾಗಿ ಸ್ಪಧರ್ೆ ಮಾಡುತ್ತೇನೆ ಎಂದು ಖಡಾ ಖಂಡಿತವಾಗಿ ಹೇಳಿದವರಿಗೆ ನಾನು ಹೇಗೆ ಬೆಂಬಲ ನೀಡಲಿ ಎಂದರು.

ಇಂದು ಬಿಜೆಪಿಯಲ್ಲಿ ತತ್ವ ಸಿದ್ಧಾಂತಗಳು ಬಾಯಿಯಲ್ಲಿ ಮಾತ್ರ ಇದೆ. ಆದರೆ ಪಕ್ಷದಲ್ಲಿ ಎಲ್ಲವು ಮರೆಯಾಗಿದೆ, ಸಾಮಾನ್ಯ ಮನುಷ್ಯ ಮತ್ತು ನಿಷ್ಠಾವಂತ ಕಾರ್ಯಕರ್ತನಿಗೆ ಗೌರವವಿಲ್ಲ, ಪಕ್ಷ ಈ ರೀತಿ ಅನ್ಯಾಯ ಮಾಡಿದ ಹಿನ್ನೆಲೆಯಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು ಎಂದು ನಾನು ನಿಧರ್ಾರ ಮಾಡಿದ್ದೇನೆ. ನನ್ನ ಕಾರ್ಯಕರ್ತರ ಅಭಿಪ್ರಾಯ ತಿಳಿದುಕೊಳ್ಳುತ್ತೇನೆ. ಆದರೆ ಬಿಜೆಪಿ ಪಕ್ಷಕ್ಕೆ ಮಾತ್ರ ನಾನು ಮರಳಿ ಹೋಗುವದಿಲ್ಲ ಎಂದರು.

*ನಾನು ಬಿಜೆಪಿ ಪಕ್ಷಕ್ಕೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕೆಲ ಬಿಜೆಪಿ ಮುಖಂಡರು, ರಾಜ್ಯ ನಾಯಕರು ಸಂಪರ್ಕಿಸಿ ಮಾತನಾಡಿದರು ಅವರಿಗೆ ದಯವಿಟ್ಟು ಕ್ಷಮಿಸಿ ನನ್ನ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದೇನೆ. ಆದರೆ ಸದ್ಯ ಅಭಿಮಾನಿಗಳು, ಕಾರ್ಯಕರ್ತರು, ಹಿತೈಶಿಗಳು ಸತತ ಸಂಪರ್ಕದಲ್ಲಿದ್ದು ತಾವೂ ರಾಜಕೀಯ ನಿವೃತ್ತಿ ಪಡೆಯದೆ ರಾಜಕೀಯವಾಗಿ ಮುಂದುವರೆಯಬೇಕು, ಜನರ ಮಧ್ಯದಲ್ಲಿದ್ದು ಜನರ ಕಷ್ಠಗಳಿಗೆ ಧ್ವನಿಯಾಗಬೇಕು ಎಂದು ಅವರ ನಿಲುವಾಗಿದೆ. ಮತ್ತೇ ಸಭೆಯನ್ನು ಗೃಹ ಕಚೇರಿಯಲ್ಲಿ ಕರೆದು ಸುಧೀರ್ಘವಾಗಿ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪ್ಪಾಸಾಬ ಬಿರಾದಾರ, ಶಿವಲಿಂಗಪ್ಪ ಸಿಂಗಾಡೆ, ಸಂಗೊಂಡ ಪಾಟೀಲ, ಶ್ರೀಕಾಂತ ತುಬಚಿ, ಮಹಾದೇವ ಬ್ಯಾಡಗಿ, ಬಸವರಾಜ ಬಿರಾದಾರ, ಸುಭಾಸ ಪಾಟೀಲ, ಆನಂದ ಧೂಪದಾಳ, ಇತರರು ಇದ್ದರು.


ಸುದ್ದಿ ಓದಿ