ಶಿಕ್ಷಣಕ್ಷೇತ್ರಕ್ಕೆ ಸಿಂದಗಿ ತಾಲೂಕು ಶಿಕ್ಷಣಕಾಶಿ: ಶಾಸಕ ರಮೇಶ ಭೂಸನೂರ
ಸಿಂದಗಿ: ಶಿಕ್ಷಣಕ್ಷೇತ್ರಕ್ಕೆ ಸಿಂದಗಿ ತಾಲೂಕು ತನ್ನದೇಯಾದ ಕೊಡುಗೆ ನೀಡುವ ಮೂಲಕ ಶಿಕ್ಷಣಕಾಶಿಯಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಅಂಜುಮನ್ ಕಾಲೇಜಿನ ಆವರಣದಲ್ಲಿ ಶನಿವಾರ ಹಮ್ಮಿಕೊಂಡ ಫಾಲ್ಕಾನ್ ನ್ಯೂ ಎರಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ಉದ್ಘಾಟನೆ ಮತ್ತು ಎಪಿಜೆ ಅಬ್ದುಲ್ ಕಲಾಂ ಟಾಪರ್ಸ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ಥಳಿಯ ಅಂಜುಮನ್-ಇ-ಇಸ್ಲಾಂ ಶಿಕ್ಷಣ ಸಂಸ್ಥೆಯು ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ತನ್ನದೆಯಾದ ಕೊಡುಗೆ ನೀಡಿದೆ. ಈ ಸಂಸ್ಥೆಯಲ್ಲಿ ತಾಲೂಕಿನ ಗ್ರಾಮೀಣ ಬಡ ವಿದ್ಯಾರ್ಥಿಗಳು ವ್ಯಾಸಂಗಮಾಡಿ ಉತ್ತಮ ಸಾಧೆನ ಮಾಡಿದ್ದಾರೆ. ಸಂಸ್ಥೆಯ ಪ್ರಧಾನಕಾರ್ಯದರ್ಶಿ ಎಸ್.ಎಂ. ಪಾಟೀಲ ಗಣಿಹಾರ ಅವರು ತಮ್ಮ ಶ್ರಮದಿಂದ ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಸಿದ್ದಾರೆ. ಫಾಲ್ಕಾನ್ ನ್ಯೂ ಎರಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ನೂತನವಾಗಿ ಪ್ರಾರಂಭಿಸುವ ಮೂಲಕ ಸಂಸ್ಥೆ ಅಭಿವೃದ್ಧಿಯತ್ತ ಸಾಗುತ್ತಿದೆ. ವಿದ್ಯಾರ್ಥಿಗಳು ಸಂಸ್ಥೆಯ ಸದುಪಯೋಗ ಪಡೆದುಕೊಂಡು ಶಿಕ್ಷಣವಂತರಾಗಿ ದೇಶಕ್ಕೆ ಒಳ್ಳೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಬೆಂಗಳೂರಿನ ಫಾಲ್ಕಾನ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಸುಬ್ಹಾನ ಮಾತನಾಡಿ, ಗ್ರಾಮೀಣ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಸಿಂದಗಿ ಪಟ್ಟಣದಲ್ಲಿರುವ ಅಂಜುಮನ್-ಇ-ಇಸ್ಲಾಂ ಶಿಕ್ಷಣ ಸಂಸ್ಥೆಯು ಒಂದು ಒಳ್ಳೆಯ ಸಂಸ್ಥೆಯಾಗಿದ್ದು ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ಧೇಶಹೊಂದಿದೆ. ಆದ್ದರಿಂದ ಈ ಸಂಸ್ಥೆಯಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಫಾಲ್ಕಾನ್ ನ್ಯೂ ಎರಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅನುಭವಿ ಉಪನ್ಯಾಸಕರ ಮೂಲಕ ನೀಟ್, ಸಿಇಟಿ ತರಬೇತಿ ನೀಡಲಾಗುವುದು. ಇದರ ಸದುಪಯೋಗ ವಿದ್ಯಾರ್ಥಿಗಳು ಸದುಪಯೋಗ ಪಡೆಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಸ್ಥಳಿಯ ಸಿ.ಎಂ. ಮನಗೂಳಿ ಕಾಲೇಜಿನ ಪ್ರಧ್ಯಾಪಕ ಡಾ.ಅರವಿಂದ ಮನಗೂಳಿ ಮಾತನಾಡಿ, ಅಂಜುಮನ್-ಇ-ಇಸ್ಲಾಂ ಶಿಕ್ಷಣ ಸಂಸ್ಥೆಯು ಒಂದು ಸೌಹಾರ್ದಯುತ ಶಿಕ್ಷಣ ಸಂಸ್ಥೆಯಾಗಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಅಧ್ಯಯನಮಾಡುತ್ತಿದ್ದಾರೆ ಎಂದು ಹೇಳಿ ನೂತನವಾಗಿ ಪ್ರಾರಂಭಗೊಂಡ ಫಾಲ್ಕಾನ್ ನ್ಯೂ ಎರಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಗ್ರಂಥಾಲಯಕ್ಕೆ 25 ಸಾವಿರ ರೂ. ದೇಣಿಗೆ ನೀಡಿದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಧಾನಕಾರ್ಯದರ್ಶಿ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಸಂಸ್ಥೆಯಲ್ಲಿ ಕಲಿತಂತ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ವಾಣಿಜ್ಯ ಶಿಕ್ಷಣ ನೀಡುವ ಉದ್ದೇಶದಿಂದ ಕಾಲೇಜು ಪ್ರಾರಂಭವಾಗಿದೆ. ರಾಜ್ಯದಲ್ಲಿ ಉನ್ನತ ಸಂಸ್ಥೆಯಾದ ಬೆಂಗಳೂರಿನ ಫಾಲ್ಕಾನ್ ಶಿಕ್ಷಣ ಸಂಸ್ಥೆಯ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಕಾಲೇಜು ಪ್ರಾರಂಭ ಮಾಡಲಾಗಿದೆ. ಪ್ರಾರಂಭದಲ್ಲಿಯೆ ಪ್ರಥಮ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶಪಡೆದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಶಸಕ್ತ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 16 ಜನ ವಿದ್ಯಾರ್ಥಿಗಳಿಗೆ ಎಪಿಜೆ ಅಬ್ದುಲ್ ಕಲಾಂ ಟಾಪರ್ಸ್ ಪ್ರಶಸ್ತಿ ಪ್ರದಾನಮಾಡಿ ಪ್ರೋತ್ಸಾಹಿಸಲಾಯಿತು. ಉತ್ತಮ ಸೆವೆ ಸಲ್ಲಿಸಿದ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಾನಿಧ್ಯ ವಹಿಸಿದ ತಾಲೂಕಿನ ರಾಂಪೂರ ಪಿ.ಎ ಗ್ರಾಮದ ಆರೋಢಮಠದ ಶ್ರೀ ನಿತ್ಯಾನಂದ ಮಹಾರಾಜರು, ವಿಶ್ರಾಂತ ಪ್ರಾಚಾರ್ಯ ಎಂ.ಡಿ. ಬಳಗಾನೂರ, ಹಿರಿಯ ಪತ್ರಕರ್ತ ರಫಿ ಭಂಡಾರಿ ಮಾತನಾಡಿದರು. ಹಿರಿಯ ಪತ್ರಕರ್ತ ರಫಿ ಭಂಡಾರಿ ಆಗಮಿಸುವರು.
ಸಂಸ್ಥೆಯ ಚೇರಮನ್ ಎ.ಎ. ದುದನಿ, ಆಢಳಿತ ಮಂಡಳಿ ಸದಸ್ಯರಾದ ಎ.ಐ. ಮುಲ್ಲಾ, ಮಹಿಬೂಬ ಹಸರಗುಂಡಗಿ, ಝಡ್.ಆಯ್. ಅಂಗಡಿ, ಗಫೂರ ಮಸಳಿ, ಶಬ್ಬೀರ ಬಾಗವಾನ, ಪ್ರಾಚಾರ್ಯೆ ಮುಬಿನಾ ಸಂಗಮ, ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ, ಎಂ.ಸಿ. ಮುಲ್ಲಾ, ಎಸ್.ಎಸ್. ಜಹಾಗೀರದಾರ, ಮುಜಾವುರ್ ಖಾಜಿ, ಐಟಿಐ ಕಾಲೇಜಿನ ಪ್ರಾಚಾರ್ಯ ಝಾಕೀರ್ ಅಂಗಡಿ ಸೇರಿದಂತೆ ಇತರರು ವೇದಿಕೆ ಮೇಲೆ ಇದ್ದರು.
ಮಹ್ಮದಲಿ ಮೌಲಾನಾ ಇಟಗಿ ಕುರಾನ್ ಪಠಣ ಮಾಡಿದರು. ನ್ಯೂ ಎರಾ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಥಿಗಳು ಸ್ವಾಗತ ನೃತ್ಯ ಮಾಡಿದರು. ಪ್ರಾಚಾರ್ಯೆ ಮುಬಿನಾ ಸಂಗಮ ಸ್ವಾಗತಿಸಿದರು. ಪ್ರಭುಲಿಂಗ ಲೋಣಿ ನಿರೂಪಿಸಿದರು. ಇನಾಯತ್ ವಂದಿಸಿದರು.