ಜಮಖಂಡಿ

ಮನಸ್ಸಿನ ಅನಾರೋಗ್ಯಕ್ಕೆ ದೇವರ ಹತ್ತಿರ ಹೋದಾಗ ಮಾತ್ರ ವಾಸಿಯಾಗುತ್ತದೆ: ಚನ್ನಬಸವಶ್ರೀಗಳು

ಮನಸ್ಸಿನ ಅನಾರೋಗ್ಯಕ್ಕೆ ದೇವರ ಹತ್ತಿರ ಹೋದಾಗ ಮಾತ್ರ ವಾಸಿಯಾಗುತ್ತದೆ: ಚನ್ನಬಸವಶ್ರೀಗಳು

ಜಮಖಂಡಿ 25:  ದೇಹಕ್ಕೆ ಅನಾರೋಗ್ಯವಾದರೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುತ್ತೆವೆ, ಆದರೆ ಮನಸ್ಸಿಗೆ ಅನಾರೋಗ್ಯ ಬಂದರೆ ನಾವು ದೇವರ ಹತ್ತಿರ ಹೋದಾಗ ಮಾತ್ರ ವಾಸಿಯಾಗುತ್ತದೆ ಎಂದು ಶ್ರೀಶೈಲ ಜಗದ್ಗುರು ಚನ್ನಬಸವ ಸಿದ್ಧರಾಮ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು. 

ತಾಲೂಕಿನ ಸಾವಳಗಿ ಸಮೀಪದ ಗುಡ್ಡದ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಅಭಿಷೇಕ ಬಿಲ್ವಾರ್ಚಣೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಕ್ತಿ, ಭಾವದಿಂದ ದೇವರಲ್ಲಿ ಪ್ರಾರ್ಥನೆ ಮಾಡಿದರೆ ಮನಸ್ಸು ಸ್ವಚ್ಚವಾಗುತ್ತದೆ, ಜೀವನಕ್ಕೆ ನೆಮ್ಮದಿ ಬಹಳ ಮುಖ್ಯವಾಗಿದೆ. ನೆಮ್ಮದಿಯ ಜೀವನವನ್ನು ಪ್ರತಿಯೊಬ್ಬರು ಮಾಡಬೇಕು ಎಂದರು. 

ಈ ಶಿವಲಿಂಗೇಶ್ವರ ಗುಡ್ಡ ಪುರಾತನ ಕಾಲದಿಂದ ಇದೆ, ಈ ಸ್ಥಳದಲ್ಲಿ ತಪಸ್ವಿಗಳು ಧ್ಯಾನವನ್ನು ಮಾಡಿ ಹೋಗಿದ್ದಾರೆ, ಇಲ್ಲಿಂದ ಹಲವಾರು ದೇವಸ್ಥಾನಗಳಿಗೆ ಗೂಹೆಗಳು ಇದ್ದವು, ಇಂತಹ ಪವಿತ್ರವಾದ ಸ್ಥಳದಲ್ಲಿ ತಪಸ್ವಿಗಳು ಧ್ಯಾನ ಮಾಡಲು ಬಂದರೆ ಅವರು ಉಳಿದುಕೊಳ್ಳಲು ಒಂದು ಕೊಠಡಿಯ ಅವಶ್ಯಕತೆ ಇದೆ, ಭಕ್ತರು ಕೂಡಿಕೊಂಡು ಕೊಠಡಿ ನಿರ್ಮಾಣವನ್ನು ಮಾಡಲು ಪ್ರಾರಂಭಿಸಿ. ನಾವು ಎರಡು ಲಕ್ಷ ರೂಗಳನ್ನು ನೀಡುತ್ತೆನೆ ಎಂದರು. 

ಮಾಂಜರಿ ಕಾಡಸಿದ್ದೇಶ್ವರ ಮಠದ ಗುರು ಶಾಂತಲಿಂಗ ದೇಶಿಕೇಂದ್ರ ಶ್ರೀಗಳು ಮಾತನಾಡಿ, ನಮ್ಮ ತೊಂದರೆಗಳನ್ನು ಹೋಗಲಾಡಿಸಿಕೊಳ್ಳಲು ಇಷ್ಟಲಿಂಗ ಪೂಜೆ, ಬಿಲ್ವಾರ್ಚನೆ ಮಾಡಬೇಕು ಎಂದರು. 

ಈ ಸಂದರ್ಭದಲ್ಲಿ ಬಸವರಾಜ ಪರಮಗೊಂಡ, ಭರತ ಶೇಗುಣಶಿ, ಬಸವರಾಜ ಮಾಳಿ, ವಿನೋಭಾ ನ್ಯಾಮಗೌಡ, ಜ್ಯೋತಿ ಜಾಧವ, ಶ್ರೀಕಾಂತ ಗೌಳಿ, ಪ್ರದೀಪ ಬುಲಗೌಡ, ಮಾದೇವ ಯಡವಣ್ಣವರ, ಸಿದ್ದು ಬಂಡಿವಡ್ಡರ, ಮಲ್ಲಿಕಾರ್ಜುನ ಹೊನಗೌಡ ಇದ್ದರು. 


ಸುದ್ದಿ ಓದಿ