ಜಮಖಂಡಿ

ಶೂರ​‍್ಾಲಿ ಲಕ್ಷ್ಮೀ ನರಸಿಂಹ ದೇವಸ್ಥಾನವೊಂದು ಪುಣ್ಯಕ್ಷೇತ್ರ: ಶಾಸಕ ಎಂ. ಕೃಷ್ಣಪ್ಪ

ಶೂರ​‍್ಾಲಿ ಲಕ್ಷ್ಮೀ ನರಸಿಂಹ ದೇವಸ್ಥಾನವೊಂದು ಪುಣ್ಯಕ್ಷೇತ್ರ: ಶಾಸಕ ಎಂ. ಕೃಷ್ಣಪ್ಪ

ಜಮಖಂಡಿ 10: ತಾಲ್ಲೂಕಿನಲ್ಲಿ ಹಲವಾರು ಐತಿಹಾಸಿಕ ದೇವಾಸ್ಥಾನಗಳಿದ್ದು ಶೂರ​‍್ಾಲಿ ಲಕ್ಷ್ಮೀ ನರಸಿಂಹ ದೇವಸ್ಥಾನ ಇದೊಂದು ಪುಣ್ಯಕ್ಷೇತ್ರವಾಗಿದೆ. ರಾಜರ ಆಳ್ವಿಕೆಯಲ್ಲಿ ನಿರ್ಮಾಣವಾದ ದೇವಾಲಯದ ಸ್ಮಾರಕ ದರ್ಶನ ಮತ್ತು ದೇವರ ದರ್ಶನ ಪಡೆದು ಪುನಿತನಾದೆ ಎಂದು ಮಾಜಿ ಸಚಿವ ಬೆಂಗಳೂರಿನ ವಿಜಯನಗರದ ಹಾಲಿ ಶಾಸಕ ಎಂ ಕೃಷ್ಣಪ್ಪ ಹೇಳಿದರು. 

ತಾಲ್ಲೂಕಿನ ಶೂರ​‍್ಾಲಿ ಗ್ರಾಮದ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ರಾಜ್ಯದ ಐತಿಹಾಸಿಕ ದೇವಸ್ಥಾನಗಳನ್ನು ಗುರುತಿಸಿ ಅಭಿವೃದ್ದಿಪಡಿಸಲು ಸರ್ಕಾರ ತಿರ್ಮಾನ ಮಾಡುತ್ತಿದ್ದು. ನಮ್ಮ ಮೂಲ ಇತಿಹಾಸ ಉಳಿಯಬೇಕಾದರೆ ಇಂತಹ ದೇವಸ್ಥಾನಗಳ ಜೀರ್ಣೋದ್ಧಾರದ ಅವಶ್ಯವಾಗಿದೆ ಎಂದರು. 

ಕಳೆದ ಮೂರು ವರ್ಷಗಳಿಂದ ಬರಬೇಕೆಂದು ಪ್ರಯತ್ನಿಸಿದರು ಸಹ ಕಾರಣಾಂತರಗಳಿಂದ ಕೈಗೂಡಿರಲಿಲ್ಲ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದು. ಅಧಿವೇಶನ ಮುಗಿಸಿ ದೇವರ ದರ್ಶನ ಪಡೆಯಲು ಬಂದಿದ್ದೇನೆಂದು ತಿಳಿಸಿದರು. 

ಇಲ್ಲಿನ ಶಾಲೆಯುವ 153 ವರ್ಷ ಪೂರೈಸಿದು ಬಹಳ ಸಂತಸದ ವಿಷಯವಾಗಿದೆ. ಈ ಶಾಲೆಯ ದುರಸ್ತಿ, ಮತ್ತಿತರೆ ಸೌಲಭ್ಯ ಬಗ್ಗೆ ಹಾಗೂ ಶಾಲೆಗಳ ಅಂದ ಹೆಚ್ಚಿಸುವ ಕಾರ್ಯಕ್ಕೆ ಶೀಘ್ರ ಚಾಲನೆ ಮಾಡಿಬೇಕಾದ ಅನುದಾನವನ್ನು ನಾನೇ ಖುದ್ದಾಗಿ ಸಂಬಂಧಿಸಿದ ಸಚಿವರಿಗೆ ಹೇಳಿ ಅನುದಾನವನ್ನು ಬಿಡುಗಡೆ ಮಾಡಿಸುವೆ ಎಂದು ಗ್ರಾಮಸ್ಥರಿಗೆ ಬರವೇಶ ನೀಡಿದರು. 

ಇದೇ ಸಂದರ್ಭದಲ್ಲಿ ಕೆಪಿಸಿಸಿಯ ಮುಂಖಡರಾದ ವಿವೇಕಾನಂದ, ಎಂ.ಪಿ ಸ್ವಾಮಿ, ಗೀರೀಶ ಸರಾ ಕೃಷ್ಣಪ್ಪ, ಚಿಕ್ಕ ತಿಮ್ಮಯ್ಯ ಜಯಣ್ಣ, ಗ್ರಾಮಸ್ಥರಾದ ಮಲ್ಲಪ ಹುನ್ನೂರ, ಬಸವರಾಜ ಹುನ್ನೂರ, ಪ್ರಕಾಶ ಕಣಬೂರ, ಅರುಣ ಶೆಟ್ಟಿ, ವಿಶ್ವನಾಥ ಶೆಟ್ಟಿ, ಚನ್ಮವೀರ ಹೊಸೂರು, ಸಂಗಪ್ಪ ಹುನ್ನೂರ ಸೇರಿದಂತೆ ಅನೇಕರು ಇದ್ದರು.  ತಾಲ್ಲೂಕಿನ ಶೂರ​‍್ಾಲಿ ಗ್ರಾಮದ ಲಕ್ಷ್ಮೀ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿಜ ಮಾಜಿ ಸಚಿವ ಬೆಂಗಳೂರಿನ ವಿಜಯನಗರದ ಹಾಲಿ ಶಾಸಕ ಎಂ. ಕೃಷ್ಣಪ್ಪ ಅವರಿಗೆ ಗ್ರಾಮಸ್ಥರು ಸನ್ಮಾನಿಸಿದರು. 


ಸುದ್ದಿ ಓದಿ