ಅಥಣಿ

ಕೋವಿಡ್ ನಿಯಮ ಪಾಲಿಸದ ಸಚಿವ ಶ್ರೀಮಂತ ಪಾಟೀಲ !

ಕೋವಿಡ್ ನಿಯಮ ಪಾಲಿಸದ ಸಚಿವ ಶ್ರೀಮಂತ ಪಾಟೀಲ !
ಸಾಮಾಜಿಕ ಅಂತರವನ್ನೇ ಮರೆತ ಸಚಿವ ಶ್ರೀಮಂತ ಪಾಟೀಲ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು

ಅಥಣಿ 21: ಖಿಳೆಗಾಂವ ಶ್ರೀ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಬರುವ ಜೂನ 15 ರ ಒಳಗೆ ಪೂರ್ಣಗೊಳ್ಳಬೇಕು ಎಂದು ಜವಳಿ ಮತ್ತು ಅಲ್ಪ ಸಂಖ್ಯಾತ ಸಚಿವ ಶ್ರೀಮಂತ ಪಾಟೀಲ ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶನಿವಾರ ದಿನ ಅಥಣಿಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯನ್ನು ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಾ ಯೋಜನೆಯ ಕಾಮಗಾರಿ ಕಳಪೆಮಟ್ಟದಾಗಿದೆ ಎಂದು ದೂರುಗಳು ಬಂದಿರುವದು ಸತ್ಯ. ನಾನು ಸಹ ಇದನ್ನು ಗಮನಿಸಿದ್ದೇನೆ. ಈ ಕುರಿತು ಗುತ್ತಿಗೆದಾರನ ಜೊತೆ ಚರ್ಚೆ ಮಾಡಿದ್ದೇನೆ ಅಧಿಕಾರಿಗಳು ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ಸೂಚನೆ ನೀಡಿದ್ದೆನೆ ಹಾಗೂ ಕೆಲಸದ ವಿಳಂಬಕ್ಕೆ ಕೆಲವು ರೈತರ ಚಿಕ್ಕ ಪುಟ್ಟ ಸಮಸ್ಯಗಳು ಇವೆ. ಅಂಥ ರೈತರ ಜೊತೆ ನಾನು ಖದ್ದಾಗಿ ಚರ್ಚೆ ಮಾಡಿ ಸಮಸ್ಯ ಬಗೆಹರಿಸಿದ್ದೇನೆ ಎಂದು ಹೇಳಿದರು.

ನಿನ್ನೆ ನಡೆದ ನೀರವಾರಿ ಅಧಿಕಾರಿಗಳ ಸಭೆಯಲ್ಲಿ ಕೋವ್ಹಿಡ್-19 ನಿಯಮ ಸಚಿವರೆ ಪಾಲನೆ ಮಾಡಿಲ್ಲ. ಸಚಿವರು ಮತ್ತು ಅಧಿಕಾರಿಗಳು ಸಭೆಯಲ್ಲಿ ಮಾಸ್ಕ ಧರಿಸಿಲ್ಲ. ಸಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಈ ಸಭೆಯು ಅಥಣಿ ನೀರಾವರಿ ಅಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಕೋವಿಡ್ ನಿಯಮ ಕುರಿತಾಗಿ ಇದು ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈಗಾಗಲೆ ತಾಲೂಕಿನಲ್ಲಿ ಸುಮಾರು 6 ಪ್ರಕರಣಗಳು ಪತ್ತೆಯಾಗಿ ಚಿಕಿತ್ಸೆ ಪಡೆಯುತ್ತಿವೆ. ಇವುಗಳಲ್ಲಿ ಬಹುತೇಕ ಅವರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚು ಪ್ರಕರಣಗಳಾಗಿವೆ. ಆದರೂ ಕೂಡ ಸ್ವತ ಸಚಿವರೆ ನಿರ್ಲಕ್ಷ್ಯ ತೋರಿರುವದು ಅವರ ಬೇಜವಾಬ್ದಾರಿ ತೋರಿಸುತ್ತದೆ. ಸಭೆಯಲ್ಲಿ ಯಾರೋಬ್ಬ ಅಧಿಕಾರಿಯೂ ಸಹ ಮಾಸ್ಕ ಧರಿಸಿರಲಿಲ್ಲ ಹಾಗೂ ಈ ಸಭೆಗೆ ಮಾಧ್ಯಮದವರನ್ನು ಕರೆಯದೆ ಇರುವದು ಇನ್ನಷ್ಟು ಸಂಶಯಕ್ಕೆ ಕಾರಣವಾಗಿದೆ. ನಿಯಮ ಪಾಲಸಿ ಬೇಕಾದ ಸಚಿವರುಗಳೆ ನಿಯಮವನ್ನು ಗಾಳಿಗೆ ತೂರಿದರೆ ಇನ್ನೂ ಸಾಮಾನ್ಯ ಪ್ರಜೆಗಳೆನು ಪಾಲಿಸುತ್ತಾರೆ.

ಸುದ್ದಿ ಓದಿ