ಕಲ್ಮಠದ ಶಿವಲಿಂಗ ಶ್ರೀ ಲಿಂಗೈಕ್ಯ
ಲೋಕದರ್ಶನ ವರದಿ,
ಜಮಖಂಡಿ01: ತಾಲೂಕಿನ ಬಿದರಿ ಗ್ರಾಮದ ಕಲ್ಮಠದ ಶಿವಲಿಂಗ ಶ್ರೀಗಳಿಗೆ ಹೃದಯಾಘಾತ ರಾತ್ರಿ ಸಂಭವಿಸಿ ಲಿಂಗೈಕ್ಯರಾಗಿದ್ದಾರೆ. 62 ವಯೋಮಾನದ ಶಿವಲಿಂಗಶ್ರೀಗಳ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನ ವ್ಯವಸ್ಥೆ ಮಾಡಲಾಗಿತು.
ಬಿದರಿ ಗ್ರಾಮದಲ್ಲಿ ಕಲ್ಲೇಶ್ವರ ಮಠದಿಂದ ಮೆರವಣಿಗೆ ಕಲ್ಮೇಶ್ವರ ಶಾಲಾ ಆವರಣದಲ್ಲಿ ಸಾವಿರಾರು ಭಕ್ತರು ಸಾಲಾಗಿ ನಿಂತು ದರ್ಶನ ಪಡದು ನಮನ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತ ಸಮೂಹ ಅಗಲಿಕೆ ನೋವನ್ನು ಹಂಚಿಕೊಂಡರು.
ಸವದತ್ತಿ, ಗುಲಗಾಲಜಂಬಗಿಯಲ್ಲಿ ಶಾಖಾ ಮಠಗಳನ್ನು ಹೊಂದಿದೆ. ಬಿದರಿಯಲ್ಲಿ ಮೂಲ ಮಠವಾಗಿದ್ದು, 03-11-1986ರಲ್ಲಿ ಐದನೇಯವರಾಗಿ ಪೀಠ ಅಲಂಕರಿಸಿದ್ದರು. ಬೆಳಿಗ್ಗೆಯಿಂದ ಸಾಯಂಕಾಲ 4 ಗಂಟೆವರೆಗೆ ಅಂತಿಮ ದರ್ಶನ ಪಡೆದ ನಂತರ ಮೆರವಣಿಗೆ ಮೂಲಕ ಕಲ್ಮೇಶ್ವರ ಮಠದಲ್ಲಿ ಸಂಜೆ ವಿಧಿವಿಧಾನಗಳೊಂದಿಗೆ ಶ್ರೀಗಳ ಅಂತ್ಯಸಂಸ್ಕಾರ ನಡೆಯಿತು.