ಅಥಣಿ

ಕರ್ನಾಟಕ ಬಸ್ ಮೇಲೆ ಶಿವಸೇನೆ ವರ್ತನೆ ಖಂಡನೀಯ: ಲಕ್ಷ್ಮಣ ಸವದಿ

ಕರ್ನಾಟಕ ಬಸ್ ಮೇಲೆ ಶಿವಸೇನೆ ವರ್ತನೆ ಖಂಡನೀಯ: ಲಕ್ಷ್ಮಣ ಸವದಿ


ಅಥಣಿ 13: ಮಹಾರಾಷ್ಟ್ರದ ಶಿವಸೇನೆ ಕೆಲವು ವ್ಯಕ್ತಿಗಳಿಂದ ಪುಂಡಾಟಿಕೆ ಗಡಿ ವಿಚಾರವಾಗಿ ಪದೆ ಕ್ಯಾತೆ ಹೆಚ್ಚಿಸಿದ್ದಾರೆ , ಕೊಲ್ಲಾಪುರದಲ್ಲಿ ಕರ್ನಾಟಕ ಬಸ್ ಗಳು ಮೇಲೆ ಕಪ್ಪು ಬಣ್ಣದಿಂದ ಬಳಿದಿರುವುದು ಹಾಗೂ ನಮ್ಮ ಸಾರಿಗೆ ವಾಹನದ ಮೇಲೆ ಜೈ ಮಹಾರಾಷ್ಟ್ರದ ಎಂದು ಬರೆದಿರುವುದು ಖಂಡನಿಯ ಇದರಿಂದ ನಾವು ಪ್ರದಾನಿವರಿಗೆ ಮನವಿ ಮಡುತ್ತೇವೆ ಗಡಿ ವಿಚಾರದಲ್ಲಿ ತಾವು ಮದ್ಯ ಪ್ರವೇಶಿಸಸಬೇಕೆಂದು ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಮಹಾರಾಷ್ಟ್ರದ ಸರ್ಕಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಲವು ಪಕ್ಷಗಳು ಸೇರಿ ಸರಕಾರ ರಚಿಸಿದ್ದಾರೆ ಅವರಿಗೆ ಮಿತ್ರ ಪಕ್ಷದವರು ಆಡಳಿತ ನಡಸಲು ಬಿಡದಿರುವುದು ಮತ್ತು   ಸರಕಾರ ಆಡಳಿತ ನಡಿಸಲು ಸಂಪೂರ್ಣ ವಿಫಲವಾಗಿದರಿಂದಾಗಿ ಮಹರಾಷ್ಟ್ರದ ಜನರ ಗಮನ ಬೆರೆ ಕಡೆ ಹರಿಸಲು ಕರ್ನಾಟಕದ ಗಡಿಕ್ಯಾತೆ ತೆಗೆಯುತ್ತಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ವಿರುದ್ಧ ಸವದಿ ಹರಿಹಾಯ್ದರು.

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಅಲ್ಲಿನ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ, ಇದರಿಂದಾಗಿ ಗಡಿ ಹೊಂದಿರುವ ಕೆಲವು ಕರ್ನಾಟಕದ ಭಾಗದಲ್ಲಿ ಪರಿಣಾಮ ಬೀರುತ್ತದೆ , ಮಹರಾಷ್ಟ್ರ ಸರ್ಕಾರ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರಿಗ ಮೇಲೆ ಏನಾದರೂ ಸಮಸ್ಯೆ ಮಾಡಿದರೆ ಕರ್ನಾಟಕ ಪರವಾಗಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಈ ವಿಚಾರವನ್ನು ತೆರಬೇಕಾಗುತ್ತದೆ ಎಂದರು.

ಪಂಚರಾಜ್ಯಗಳ ಚುನಾವಣೆ ಈಗಾಗಲೇ ಘೋಷಿಸಿದ್ದಾರೆ. ನಮ್ಮ ಕರ್ನಾಟಕದ ನಾಲ್ಕು ಉಪ ಚುನಾವಣೆ ಇರುವುದರಿಂದ ಈ ತಿಂಗಳು ಕೊನೆಯಲ್ಲಿ ದಿನಾಂಕವನ್ನು ಘೋಷಿಸುವ ಸಾಧ್ಯತೆಗಳಿವೆ. ಹಾಗೂ ಬೆಳಗಾವಿ ಲೋಕಸಭೆ ಚುನಾವಣೆ ಯಾವುದೇ ವ್ಯಕ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ ಬೆಳಗಾವಿಯಲ್ಲಿ ಬಿಜೆಪಿ ಪಕ್ಷ ಪ್ರಮುಖವಾಗಿ ಇರುವುದರಿಂದ ಹಿಂದಿನ ಹಲವಾರು ಚುನಾವಣೆ ಉದಾಹರಣೆಗೆ ನೀಡಿದರು. ಬೆಳಗಾವಿಯಲ್ಲಿ ಸಾಮಾನ್ಯ ಕಾರ್ಯಕರ್ತರು ಚುನಾವಣೆ ಸ್ವರ್ಧೆ ಮಾಡಿದರು ನಾಲ್ಕು ಲಕ್ಷ ಅಧಿಕ ಮತುಗಳಿಂದ ಆಯ್ಕೆಯಾಗುತ್ತಾರೆ ಎಂದು ಹೇಳಿದರು.

ದೇಶದಲ್ಲಿ ಮೋದಿ ಅಲೆ ಇರುವುದರಿಂದ ಬೆಳಗಾವಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ. ಹಾಗೂ ಲೋಕಸಭೆ ಚುನಾವಣೆ ನಡೆಯುವುದು ನರೇಂದ್ರ ಮೋದಿ ಸರ್ಕಾರ ಆಡಳಿತ ಮೇಚ್ಚುಗೆ ಮೇಲೆ ಹಾಗೂ ವಿಧಾನಸಭಾ ಉಪಚುನಾವಣೆ ರಾಜ್ಯ ಸರ್ಕಾರ ಕೆಲಸದ ಮೇಲೆ ಇದರಿಂದಾಗಿ ಬೆಳಗಾವಿ ಚುನಾವಣೆ ಪಕ್ಷದ ಚಿಹ್ನೆ ಪ್ರಮುಖವಾಗಿದೆ. ಹಾಗೂ ಸದ್ಯದ ತೈಲ ಬೆಲೆ ಯಾವುದೇ ಬಿಜೆಪಿ ಸರ್ಕಾರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.


ಸುದ್ದಿ ಓದಿ