ಗಂಗಾವತಿ

ಶೌರ್ಯ ಜಾಗರಣ ರಥಯಾತ್ರೆ ಯಶಸ್ವಿ

ಶೌರ್ಯ ಜಾಗರಣ ರಥಯಾತ್ರೆ ಯಶಸ್ವಿ

ಗಂಗಾವತಿ 30: ವಿಶ್ವಹಿಂದು ಪರಿಷತ್ ಹಾಗು ಭಜರಂಗದಳದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶೌರ್ಯಜಾಗರಣ ರಥಯಾತ್ರೆಯು ಶ್ರೀ ಅಂಜನಾದ್ರಿಯಲ್ಲಿ ಶನಿವಾರ ಬೆಳಗ್ಗೆ 10 ಆದಿಶಕ್ತಿ ಬೆಟ್ಟ ಬ್ರಹ್ಮನಂದಸ್ವಾಮಿಜಿಗಳು ಚಾಲನೆ ನೀಡಿದರು. ಆನೆಗೊಂದಿ, ಕೊರಂಕ್ಯಾಂಪ್, ಸಂಗಾಪುರ, ವಿರುಪಾಪುರ ಮಾರ್ಗವಾಗಿ ಗಂಗಾವತಿ ತಲುಪಿತು. ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ರಥಕ್ಕೆ ಪುಷ​‍್ಾರೆ್ಪಣ ಮಾಡುವ ಮೂಲಕ ಗಣ್ಯರು ಸ್ವಾಗತಿಸಿದರು. ನಂತರ ಶ್ರೀ ಜಗಜೀವನರಾಮ್ ವೃತ್ತ. ಅಂಬೇಡ್ಕರ್ ವೃತ್ತ, ಬಸವಣ್ಣ ಸರ್ಕಲ್, ಗಾಂಧಿ ಸರ್ಕಲ್, ಗಣೇಶ ಸರ್ಕಲ್, ಶ್ರೀ ದುರ್ಗಾದೇವಿ ದೇವಸ್ಥಾನದ ಮೂಲಕ ಶ್ರೀ ಮಲ್ಲಿಕಾರ್ಜುನ ಮಠಕ್ಕೆ ರಥಯಾತ್ರೆಯು ಆಗಮಿಸಿತು. ಶ್ರೀ ಮಠದಲ್ಲಿ ಧಾರ್ಮಿಕ ಸಭೆ ನಡೆಯಿತು.  

ಈ ಸಂದರ್ಭದಲ್ಲಿ ಬಿಜೆಪಿ ಕೊಪ್ಪಳ ಜಿಲ್ಲಾ ಮಾಜಿ ಅಧ್ಯಕ್ಷರಾದ ಸಿಂಗನಾಳ್ ವಿರುಪಾಕ್ಷಪ್ಪ, ಕಾಡಾ ಮಾಜಿ ಅಧ್ಯಕ್ಷ ತಿಪ್ಪೆರುದ್ರಸ್ವಾಮಿ, ಕೆಆರ್‌ಪಿಪಿ ಕೊಪ್ಪಳ ಜಿಲ್ಲಾಧ್ಯಕ್ಷ ಮನೋಹರಗೌಡ ಹೇರೂರು, ವಿಶ್ವಹಿಂದು ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶಿವಕುಮಾರ್, ವಿಭಾಗ ಕಾರ್ಯದರ್ಶಿಗಳು ವಿನಾಯಕ ತಳ್ಳಿಕೇರಿ, ವಿಶ್ವ ಹಿಂದು ಪರಿಷತ್ ಪ್ರಾಂತ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಹಿರೇಮಠ, ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಾಯ್ ಪಾಟೀಲ್, ಜಿಲ್ಲಾ ಬಜರಂಗದಳ ಸಂಯೋಜಕರು ದೊಡ್ಡಬಸಯ್ಯ ಸ್ವಾಮಿ, ತಾಲೂಕು ಸಂಯೊಜಕ ರಾಮಾಂಜಿನೆಯ್ಯ, ನಗರ ಸಂಯೋಜಕ ಬಸವರಾಜ್ ಹೊಸಮನಿ,  ಮುಖಂಡರಾದ ಶ್ರವಣಕುಮಾರ್ ರಾಯ್ಕರ್, ಕಾಶಿನಾಥ್, ರಮೇಶ್ ಚೌಡ್ಕಿ, ರಾಜೇಶ್ವರಿ, ಇತರರಿದ್ದರು. 


ಸುದ್ದಿ ಓದಿ