ಬೈಲಹೊಂಗಲ

ಹಾರುಗೊಪ್ಪ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ

ಹಾರುಗೊಪ್ಪ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ

ವರದಿ : ಮಂಜುನಾಥ ಜ್ಯೋತಿ  

ಬೈಲಹೊಂಗಲ 19: ಮುಂಗಾರು, ಹಿಂಗಾರು ಮಳೆ ವೈಫಲ್ಯದಿಂದ ರಾಜ್ಯಾಧ್ಯಂತ ಭೀಕರ ಬರಗಾಲ ಛಾಯೆ ಆವರಿಸಿದ ಪರಿಣಾಮ ಮತಕ್ಷೇತ್ರದ ಕೆಲವು ಗ್ರಾಮಗಳಲ್ಲಿ  ಜನತೆ ಕುಡಿಯುವ ನೀರಿನ ಸಮಸ್ಯೆಯನ್ನು ತೀವೃವಾಗಿ ಎದುರಿಸುತ್ತಿದ್ದು, ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ನೀರು ತರುವುದೇ  ಮುಖ್ಯ ಕಾಯಕವಾಗಿದೆ.  

ಸಮೀಪದ ಹಾರುಗೊಪ್ಪ ಗ್ರಾಮದಲ್ಲಿ ಜನತೆ  ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಜನತೆ ತಮ್ಮ ಕೆಲಸ ಕಾರ್ಯ ಬಿಟ್ಟು, ಕೊಡ ನೀರಿಗಾಗಿ ದಿನವೀಡೀ ಅಲೆದಾಡುವ ದೃಶ್ಯ ಸಾಮಾನ್ಯವಾಗಿದೆ. ಗ್ರಾಪಂ, ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವದಕ್ಕೆ ನಳಗಳ ಮುಂದೆ ನೂರಾರು ಕೊಡಗಳನ್ನು ಸರತಿ ಸಾಲಿನಲ್ಲಿ ಇಟ್ಟಿರುವುದು ಕಂಡುಬರುತ್ತದೆ. ಈ ಸ್ಥಿತಿ ಕಂಡರೆ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.   

ನೀರಿನ ಮೂಲಗಳಾದ ಬೊರವೆಲ್,ಬಾವಿ,ಕೆರೆಯಲ್ಲಿ ಹನಿ ನೀರಿಲ್ಲದೆ ಬತ್ತಿ ಹೋಗಿವೆ. ಇದರಿಂದ ಇದ್ದ ಬೊರವೆಲ್ನ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಹೀಗಾಗಿ ಗ್ರಾಮದಿಂದ 2 ಕಿ ಮೀ ದೂರವಿರುವ ಹೊಲದಲ್ಲಿರುವ ಬೊರವೆಲ್ನಿಂದ  ನೀರು ತರಲಾಗುತ್ತಿದೆ. ನೀರಿನ ಹಾಹಾಕಾರದಿಂದ ಕೂಲಿ ಮಾಡುವ ಜನರ ಸ್ಥಿತಿ ಇತ್ತ ಕೂಲಿಯೂ ಇಲ್ಲ, ಅತ್ತ ಸಾಕಷ್ಟು ನೀರು ಸಿಗಲಿಲ್ಲ ಎಂಬಂತಾಗಿದೆ.  

ನೀರಿಗಾಗಿ ಎಲ್ಲ ಕೆಲಸ ಬಿಟ್ಟು ಮನೆ ಮಂದಿಯಲ್ಲ ಎದ್ದೊಡನೆ ನೀರು ಇದ್ದಲ್ಲಿ  ದೂಡುಗಾಡಿ, ಸೈಕಲ್,  ಸ್ಕೂಟರ್,  ವಾಹನಗಳಲ್ಲಿ  ಹೋಗಿ ನೀರು ತರುವಂತಹ  ಅನಿವಾರ್ಯತೆ ಎದುರಾಗಿದೆ.  

ಜನರಿಗೆ ಸಮರ​‍್ಕವಾಗಿ ನೀರು ದೊರೆಯದೆ ಜನರು ನಿತ್ಯ ನೀರಿನ ಭವನೆಯಿಂದ ತತ್ತರಿಸುವಂತಾಗಿದೆ. ಸರಕಾರ ಕುಡಿಯುವ ನೀರಿಗಾಗಿ ಸಾಕಷ್ಟು ಯೋಜನೆ ತಂದರೂ ಜನತೆಗೆ ಯಾವದೇ ಅನುಕೂಲಕರವಾಗಿಲ್ಲ.  

ಕುಡಿಯವ ನೀರಿನ ಶಾಶ್ವತ ಪರಿಹಾರಕ್ಕೆ ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಯಾರೂ ಖ್ಯಾರೇ ಎನ್ನುತ್ತಿಲ್ಲ.  

ಇನ್ನು ಶಾಸಕ ಮಹಾಂತೇಶ ಕೌಜಲಗಿ ಅವರು ನೀರಿನ ತೊಂದರೆ ಆಗದಂತೆ ಟ್ಯಾಂಕರ್ ಮೂಲಕ ಜನತೆಗೆ ನೀರು ಒದಗಿಸಿ ಎಂದು ಆದೇಶ ನೀಡಿದರೂ ಸಹ  ಗ್ರಾಪಂ.ನವರು ಇನ್ನೂ ಆದರೂ ನೀರಿನ ಸರಬರಾಜು ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಜಲಜೀವನ ಮಿಷನ ಯೋಜನೆ  ಕಾಮಗಾರಿ ಸಮಪರ್ಕವಾಗಿ ನಡೆಯದೇ  ಹಳ್ಳ ಹಿಡಿದಿದೆ.   

ಇನ್ನಾದರೂ ಗ್ರಾಪಂ. ಆಡಳಿತ ಸಿಬ್ಬಂದಿ ವರ್ಗದವರು ಗ್ರಾಮಸ್ಥರಿಗೆ  ನೀರಿನ ಅನಕೂಲ ಕಲ್ಪಿಸುತ್ತಾರೆಯೇ ಎಂದು ಜನತೆ ಜಾತಲ ಪಕ್ಷಿಯಂತೆ ಕಾಯುತ್ತಿದ್ದಾರೆ.  

ಇದರ ಜೊತೆಗೆ ಸಾರ್ವಜನಿಕರಿಗೆ ಸೌಚಾಲಯವನ್ನು ನಿರ್ಮಿಸಿ ಕೊಟ್ಟಿಲ್ಲ. ಗ್ರಾಮದಲ್ಲಿ ಪ್ರಮುಖ ಬೀದಿಗಳಲ್ಲಿ ಸರಿಯಾದ ಸೌರ ದೀಪದ ವೆವಸ್ಥೆ ಇಲ್ಲ, ಸ್ವಚತೆಗೆ ಆದ್ಯತೆ ನೀಡಿಲ್ಲ, ಆದರಿಂದ ಕೂಡಲೇ ನೀರು ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯ ಗಳನ್ನು  ಸಮರ​‍್ಕವಾಗಿ ಹಾಗೂ ತ್ವರಿತವಾಗಿ ಅನುಷ್ಟಾನಗೊಳಿಸುವಂತೆ ಮಂಜುನಾಥ ಹೊಸಮನಿ, ಹನಮವ್ವ ಚಚಡಿ, ಮಂಜುಳಾ ಜಕ್ಕನಟ್ಟಿ, ಹಾಗೂ ಗ್ರಾಮದ ಜನತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. 


ಸುದ್ದಿ ಓದಿ