ಹಿರಿಯ ನಾಗರಿಕರ ದಿನಾಚರಣೆ,ಸನ್ಮಾನ ಸಮಾರಂಭ

ಹಿರಿಯ ನಾಗರಿಕರ ದಿನಾಚರಣೆ,ಸನ್ಮಾನ ಸಮಾರಂಭ

ಬಳ್ಳಾರಿ 05:ಹಿರಿಯರು ದೇವರ ಸಮಾನ ಅವರನ್ನು ಗೌರವಾದರಗಳಿಂದ ಕಾಣಬೇಕು ಎಂದು ನಗರ ಶಾಸಕ ಸೋಮಶೇಖರರೆಡ್ಡಿ ಹೇಳಿದರು. 

ನಗರದ ರಾಘವ ಕಲಾಮಂದಿರದಲ್ಲಿ ಕನರ್ಾಟಕ ರಾಜ್ಯ ಸಕರ್ಾರಿ ನಿವೃತ್ತ ನೌಕರರ ಸಂಘ ಹಮ್ಮಿಕೊಂಡಿದ್ದ ಬುಧವಾರ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟನೆ ಮಾಡಿ ಮಾತನಾಡಿದರು. 

ಹಿರಿಯ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ನೀಡಲು ನಾನು ಬದ್ದನಾಗಿದ್ದೇನೆ. ಮಕ್ಕಳು ತಮ್ಮ ಪೋಷಕ ರನ್ನು ವೃದ್ಧಾಪ್ಯದ ಲ್ಲಿ ಚೆನ್ನಾಗಿ ನೋಡಿಡಿಕೊಳ್ಳಬೇಕು ಎಂದು ಹೇಳಿದರು. 

ಸಂಸದ ಉಗ್ರಪ್ಪ ಮಾತನಾಡಿದರು. 

ಎಸ್ಪಿ ಅರುಣ್ ರಂಗರಾಜನ್ ಮಾತನಾಡಿ, ಹಿರಿಯ ನಾಗರಿಕರಿಗೆ ತೊಂದರೆಗಳಿದ್ದಲ್ಲಿ ಮಧ್ಯಾಹ್ನ ಮೂರರ ನಂತರ ಕಚೇರಿಗೆ ಬಂದು ದೂರು ಸಲ್ಲಿಸಬಹುದು ಎಂದರು. ಇದೇ ಸಂದರ್ಭದಲ್ಲಿ 75ವರ್ಷ ಪೂರೈಸಿದ 75 ಹಿರಿಯನಾಗರಿಕರನ್ನು ಸನ್ಮಾನಿಸಲಾಯಿತು. 

ಮೋಹನ್ ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನರ್ಾಟಕ ರಾಜ್ಯ ಸಕರ್ಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಮ್.ಪಂಪಾಪತಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಹಿರಿಯ ನಾಗರಿಕರ ರಕ್ಷಣೆಗೆ ಸಂಘ ಸದಾ ಬದ್ದವಾಗಿರುತ್ತದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಎನ್.ಡಿ.ವೆಂಕಮ್ಮ, ಅಶೋಕ್ ದಿನ್ನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೆಶಕ ನಾಗೇಶ್ ಬಿಲ್ವ ಸೇರಿದಂತೆ ಮತ್ತಿತರರು ಇದ್ದರು. ಸಂಘದ ಗೌರವಾಧ್ಯಕ್ಷ ಚಂದ್ರಶೇಖರ್, ನೀಲಪ್ಪ, ಕೃಷ್ಣಪ್ಪ, ಸಿ.ಎಸ್.ಕೊಳ್ಳಿ, ಗಂಗಪ್ಪ, ರುದ್ರಣ್ಣ, ಸತ್ಯಮ್ಮ ಭಾಗವಹಿಸಿದ್ದರು.

ಸುದ್ದಿ ಓದಿ