ಜಮಖಂಡಿ

ತಾಲೂಕು ಮಟ್ಟದ ಸ್ಪರ್ಧೆಗೆ 6ಜನ ವಿದ್ಯಾರ್ಥಿಗಳ ಆಯ್ಕೆ

ತಾಲೂಕು ಮಟ್ಟದ ಸ್ಪರ್ಧೆಗೆ 6ಜನ ವಿದ್ಯಾರ್ಥಿಗಳ ಆಯ್ಕೆ

ಲೋಕದರ್ಶನ ವರದಿ,

ಜಮಖಂಡಿ4: ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ನಡೆದ ಜಮಖಂಡಿ ಪೂರ್ವ ವಲಯ ಮಟ್ಟದ 2023-24ನೇ ಸಾಲಿನ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಸ್ಥಳೀಯ ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 6 ಜನ ಮಕ್ಕಳು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗದ್ದಾರೆ ಎಂದು ಪ್ರಾಚಾರ್ಯಡಾ.ಟಿ.ಪಿ. ಗಿರಡ್ಡಿ ತಿಳಿಸಿದ್ದಾರೆ.

ಪ್ರಾಥಮಿಕ ಶಾಲೆಯ 5 ರಿಂದ 7ನೇ ತರಗತಿ ಮಕ್ಕಳ ಭಕ್ತಿಗೀತೆ ಸ್ಪರ್ಧೆಯಲ್ಲಿ ಶ್ರಾವಣಿ ಹಿರೇಮಠ (ಪ್ರಥಮ), ಕವನ ಪದ್ಯ ವಾಚನ ಸ್ಪರ್ಧೆಯಲ್ಲಿ ಸಿಂಧು ಬಂಗಾರಿ(ದ್ವಿತೀಯ) ತಾಲ್ಲೂಕು ಮಟ್ಟದ ಸ್ಪಧರ್ೆಗೆ ಆಯ್ಕೆಯಾಗಿದ್ದಾರೆ. ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಶ್ರುಷ್ಟಿ ಶಿರಹಟ್ಟಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಾಥಮಿಕ ಶಾಲೆಯ 1 ರಿಂದ 4ನೇ ತರಗತಿ ಮಕ್ಕಳ ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಸನ್ನಿಧಿ ಮಠಪತಿ(ಪ್ರಥಮ), ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ವಿಶ್ವನಾಥ ಹವಾಲ್ದಾರ(ದ್ವಿತೀಯ), ಚಿತ್ರಕಲೆ ಸ್ಪರ್ಧೆಯಲ್ಲಿ ಕುಲದೀಪ ವಿಷ್ಣೋಯಿ(ದ್ವಿತೀಯ) ಹಾಗೂ ಕಥೆ ಹೇಳುವುದು ಮತ್ತು ಭಕ್ತಿಗೀತೆ ಎರಡೂ ಸ್ಪರ್ಧೆಗಳಲ್ಲಿ ಪ್ರೀತಮ ಕೊಟ್ಟಲಗಿ(ದ್ವಿತೀಯ) ತಾಲ್ಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 

ಕನ್ನಡಕಂಠಪಾಠ ಸ್ಪರ್ಧೆಯಲ್ಲಿ ಶ್ರಾವಣಿ ಅಡಳ್ಳಿ ತೃತೀಯ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಗಿರೀಶ ಕಡ್ಡಿ, ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಜಮಖಂಡಿ ಪೂರ್ವ ಸಮೂಹ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ನಗರದ ಶ್ರೀನಂದಿಕೇಶ್ವರ ವಿದ್ಯಾಭವನ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಈ ಸ್ಪರ್ಧೆಗಳು ಜರುಗಿದ್ದವು ಎಂದು ವಿವರಿಸಿದ್ದಾರೆ. 


ಸುದ್ದಿ ಓದಿ