ಜಮಖಂಡಿ

ರಾಜ್ಯಮಟ್ಟದ ಪುಟ್ಬಾಲ್ ಕ್ರೀಡಾಕೂಟಕ್ಕೆ ಆಯ್ಕೆ

ರಾಜ್ಯಮಟ್ಟದ ಪುಟ್ಬಾಲ್ ಕ್ರೀಡಾಕೂಟಕ್ಕೆ ಆಯ್ಕೆ

ಲೋಕದರ್ಶನ ವರದಿ

ಜಮಖಂಡಿ2: ವಿಜಯಪುರದ ಸೈನಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಫುಟ್ಬಾಲ್ ಪಂದ್ಯಾವಳಿಯ ಕ್ರೀಡಾಕೂಟದಲ್ಲಿ ಜಿಲ್ಲೆಯ ಶೈಕ್ಷಣಿಕ ಜಿಲ್ಲೆಯನ್ನು ಪ್ರತಿನಿಧಿಸಿದ್ದ ನಗರದ ಪ್ರತಿಷ್ಠಿತ ಶತಮಾನ ಕಂಡ ಪಿ.ಬಿ  ಸರ್ಕಾರಿ  ಪ್ರೌಢಶಾಲೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು 17 ವಯೋಮಿತಿ ಒಳಗಿನ  ಬಾಲಕರ ತಂಡಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟದ ಪುಟ್ಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ದೈಹಿಕ ಶಿಕ್ಷಕ ಸುರೇಶ ಬೋಸ್ಲೆ ಹಾಗೂ ತರಬೇತುದಾರ ಸುನಿಲ ಪವಾರ  ವಿದ್ಯಾಥರ್ಿಗಳು ಬೆಂಗಳೂರಿನ ವಿದ್ಯಾನಗರದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಬಾಗಲಕೋಟೆ ಜಿಲ್ಲೆಯಿಂದ ಪ್ರತಿನಿಧಿಸಲಿದ್ದು. ಬಾಲಕರ ವಿಭಾಗದಲ್ಲಿ ಸರ್ಕಾರಿ ಶಾಲೆ ರಾಜ್ಯ ಮಟ್ಟದ ಪುಟ್ಬಾಲ್ ಕ್ರೀಡೆಗೆ ಆಯ್ಕೆಯಾಗಿದ್ದು ಇದೇ ಮೊದಲು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ದೇಶದ ಪ್ರಗತಿಯಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದಾಗಿದೆ. ಚಹಾ ಮಾರುವ ಮೆಸ್ಸಿ ಎಂಬ ಕ್ರೀಡಾಪಟು ಅಂತಾರಾಷ್ಟ್ರೀಯ ಕ್ರೀಡಾಪಟುವಾಗಿ ಬೆಳೆದು ದೇಶಕ್ಕೆ ಕೀತರ್ಿ ತಂದಿದ್ದಾರೆ. ಇಂಥವರ ದಾರಿಯಲ್ಲಿ ನಮ್ಮ ಶಾಲೆಯ ಕ್ರೀಡಾಪಟುಗಳು ಸಾಗುವುದರ ಮೂಲಕ ಯಶಸ್ಸಿನ ಗುರಿ ತಲುಪಿ ದೇಶದ ಕೀರ್ತಿ ಬೆಳಗಿಸಬೇಕೆಂದು ವಿದ್ಯಾರ್ಥಿಗಳಿ ಪಿ.ಬಿ ಪ್ರೌಢಶಾಲೆ ಉಪಪ್ರಾಚಾರ್ಯ ನವಭಾನು ಎಂ.ಚವರ ತಿಳಿಸಿದ್ದಾರೆ.

ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲೆಯ ಕೀರ್ತಿಯನ್ನು ದೇಶದ ಮಟ್ಟಕ್ಕೆ ಕೊಂಡೊಯ್ಯಬೇಕೆಂದು ಕ್ರೀಡಾಪಟುಗಳಿಗೆ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಪುರಷೊತ್ತಮ ಗಲಗಲಿ ತಿಳಿಸಿದರು.

***

ಪಿ.ಬಿ ಶಾಲೆಯ ವಿದ್ಯಾರ್ಥಿಗಳು ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಕ್ರೀಡೆಯಲ್ಲು ಉತ್ತಮ ಮೈಲುಗಲ್ಲು ಸಾಧಿಸುತ್ತಿರುವುದು ಹೆಮ್ಮೆಯ ವಿಷಯ ಪುಟ್ಬಾಲ್ ಕ್ರೀಡೆಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾದ  ಕ್ರೀಡಾಪಟುಗಳಿಗೆ, ಉತ್ತಮ ತರಬೇತಿ ನೀಡಿದ ದೈಹಿಕ ಶಿಕ್ಷಕ ಸುರೇಶ ಬೋಸ್ಲೆ ಅವರಿಗೆ ಅಭಿನಂದನೆ

ಅಶೋಕ ಬಸಣ್ಣವರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ,


ಸುದ್ದಿ ಓದಿ