ಚಿಕ್ಕಪಡಸಲಗಿ ಬ್ಯಾರೇಜ ಹತ್ತಿರ ಭದ್ರತೆ ಅಗತ್ಯ
ಲೋಕದರ್ಶನ ವರದಿ,
ಜಮಖಂಡಿ 25: ತಾಲೂಕಿನ ಚಿಕ್ಕಪಡಸಲಗಿಯ ಶ್ರಮಬಿಂದು ಸಾಗರಕ್ಕೆ ಹಿಪ್ಪರಗಿ ಜಲಾಶಯದಿಂದ 1ಲಕ್ಷ ಕ್ಯೂಸೆಕ್ಸ್ ನೀರು ಹೊರಹರಿಬಿಡಲಾಗಿದ್ದು ಶ್ರಮಬಿಂದು ಸಾಗರ ಮುಳುಗಿದೆ. ಅದನ್ನು ವಿಕ್ಷೀಸಲೆಂದು ಬರುವ ಯುವಕರು ಪ್ರಾಣದ ಹಂಗು ತೊರೆದು ನೀರಿನ ಜೊತೆ ಸೆಲ್ಫೀ, ರೀಲ್ಸ್ ಮಾಡುತ್ತಾ ಚಲ್ಲಾಟವಾಡುತ್ತಿರುವ ಘಟನೆಗಳು ಕಂಡು ಬರುತ್ತಿವೆ.
ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾನದಿಗೆ ಪ್ರವಾಹಭೀತಿ ಸಾಧ್ಯತೆ ಇದ್ದು ನದಿತೀರದ ಜನ ಎಚ್ಚರಿಕೆ ವಹಿಸಬೇಕು ಎಂದು ತಾಲೂಕಾಡಳಿತ ಸೂಚನೆ ನೀಡಿದೆ. ಅದನ್ನು ಉಲ್ಲಂಘಿಸಿ ಯುವಕರು ಅಪಾಯದ ನದಿತೀರದಲ್ಲಿ ಸೆಲ್ಫಿ ಮತ್ತು ಜೀವಕ್ಕೆ ಅಪಾಯ ತರುವ ರೀತಿಯಲ್ಲಿ ಹುಡುಗಾಟದಲ್ಲಿ ತೊಡಗಿಕೊಂಡಿದ್ದಾರೆ. ಉಡಪಿ ಅರಿಶಿನಗುಂಡಿ ಗ್ರಾಮದಲ್ಲಿ ಯುವಕನೊಬ್ಬ ಜಲಪಾತದಲ್ಲಿ ಹುಡುಗಾಟದ ಸಂದರ್ಭದಲ್ಲಿ ಕಾಲುಜಾರಿಬಿದ್ದ ಘಟನೆ ಕಣ್ಮುಂದೆ ಇದ್ದರು ಚಿಕ್ಕಪಡಸಲಗಿ ಬ್ಯಾರೇಜ ಹತ್ತಿರ ಯಾವುದೇ ರೀತಿಯ ಭದ್ರತೆ ಇಲ್ಲವಾಗಿದೆ.
ಸುರಕ್ಷಿತ ಸ್ಥಳಕ್ಕೆ ತೆರಳಲು ಮನವಿ,
ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ರಾಜಾಪುರ ಡ್ಯಾಂ, ಕಲ್ಲೋಳ್ಳಿ ಬ್ಯಾರೇಜ್, ದೂಧಗಂಗಾ ನದಿಗಳಿಂದ ಹಿಪ್ಪರಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರಲಾಗುತ್ತಿದ್ದು. ಜಲಾಶಯದಿಂದ 1 ಲಕ್ಷ ಕೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಅಂದಾಜು 3 ಲಕ್ಷ ಕ್ಯೂಸೆಕ್ ನೀರು ಹರಿದು ಬರುವವರೆಗೆ ಮುಳಗಡೆ ಭೀತಿ ಇರುವುದಿಲ್ಲ. 3 ಲಕ್ಷ ಕ್ಯೂಸೆಕಗಿಂತ ಹೆಚ್ಚು ನೀರು ಹರಿದು ಬಂದರೆ ತಾಲೂಕಿನ 13ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇದೆ. ತಾಲೂಕಿನ ನದಿತೀರದ ಜನರಿಗೆ ನೀರಿಗೆ ಇಳಿಯದಂತೆ ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಗ್ರಾಮದಲ್ಲಿ ಡಂಗುರ ಸಾರುತ್ತಿದ್ದಾರೆ.
-ಜಮಖಂಡಿ ತಹಶೀಲ್ದಾರ ಸದಾಶೀವ ಮಕ್ಕೋಜಿ,