ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಪ್ರಾರಂಭ
ಲೋಕದರ್ಶನ ವರದಿ
ಬಳ್ಳಾರಿ 28: ನಾಳೆಯಿಂದ ಆರಂಭವಾಗುವ ಪ್ರಸಕ್ತ ಸಾಲಿನ ದ್ವಿತಿಯ ಪಿಯು ಪರೀಕ್ಷೆಗೆ ಜಿಲ್ಲೆಯಲ್ಲಿ ಸಂಪೂರ್ಣ ಸಿದ್ದತೆ ಕೈಗೊಂಡಿದೆ. ಪರೀಕ್ಷೆ ಬರೆಯಲು ಬಳ್ಳಾರಿ ನಗರದಲ್ಲಿ 9, ಸಿರುಗುಪ್ಪ ಮತ್ತು ಕೊಟ್ಟೂರಿನಲ್ಲಿ ತಲಾ ಎರಡು, ಕಂಪ್ಲಿ, ಕೂಡ್ಲಿಗಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಸಂಡೂರು ಮತ್ತು ವ್ಯಾಸನಕೆರೆಯಲ್ಲಿ ತಲಾ ಒಂದು ಕೇಂದ್ರಗಳನ್ನು ತೆರೆಯಲಾಗಿದೆ. ನಕಲು ತಡೆಯಲು ಎಲ್ಲಾ ಕೇಂದ್ರಗಳಲ್ಲೂ ಸಿ.ಸಿ.ಕೆಮೆರಾ ಅಳವಡಿಸಿದೆ.ಜಿಲ್ಲೆಯಲ್ಲಿ ಈ ಬಾರಿ ಹೊಸದಾಗಿ 12 ಸಾವಿರದ 698 ವಿದ್ಯಾಥರ್ಿ 12 ಸಾವಿರದ 277 ವಿದ್ಯಾಥರ್ಿನಿಯರು ಪರೀಕ್ಷೆ ಬರೆಯುತ್ತಿದ್ದು ಇದರಲ್ಲಿ 19785 ವಿದ್ಯಾಥರ್ಿಗಳು ಮೊದಲ ಬಾರಿಗೆ ಪರೀಕ್ಷೆ ಎದುರಿಸುತ್ತಿದ್ದು 3 ಸಾವಿರದ 601 ವಿದ್ಯಾಥರ್ಿಗಳು ಅನುತ್ತೀರ್ಣರಾಗಿ ಮತ್ತೆ ಪರೀಕ್ಷೆ ಬರೆಯುವವರು ಹಾಗೂ 1589 ಜನ ಖಾಸಗಿಯಾಗಿ ಸೇರಿದಂತೆ ಒಟ್ಟಾರೆ 24 ಸಾವಿರದ 975 ವಿದ್ಯಾಥರ್ಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿ ಕೊಂಡಿದ್ದಾರೆ.ಇದರಲ್ಲಿ ಕಲಾ ವಿಭಾಗದಿಂದ 9319, ವಾಣಿಜ್ಯದಿಂದ 7838, ವಿಜ್ಞಾನದಿಂದ 7818 ಹಾಗೂ ಕನ್ನಡ ಮಾಧ್ಯಮದಿಂದ 13239 ಮತ್ತು ಇಂಗ್ಲೀಷ್ನಿಂದ 11736 ವಿದ್ಯಾಥರ್ಿಗಳಿದ್ದಾರೆ. ನಾಳೆ ಆರಂಭಗೊಳ್ಳುವ ಪರೀಕ್ಷೆಗಳು 18 ರ ವರೆಗೆ ನಡೆಯಲಿವೆ ಎಂದು ಇಂದು ನಗರದ ಸಕರ್ಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಸಿದ್ಧತೆಗಳನ್ನು ಪರಿಶೀಲಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೆಶಕ ರಾಮಮೂತರ್ಿ ತಿಳಿಸಿದ್ದಾರೆ. ವಿದ್ಯಾಥರ್ಿಗಳು ಪರೀಕ್ಷೆ ಬರೆಯಲು ಅವರ ನೋಂದಣಿ ಸಂಖ್ಯೆಗಳನ್ನು ಟೇಬಲ್ಗಳ ಮೇಲೆ ಗುರುತು ಹಾಕುವ ಕಾರ್ಯ ಇಂದು ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದೆ.ಬಳ್ಳಾರಿ ಖಜಾನೆಯಿಂದ ಬಳ್ಳಾರಿ ಮತ್ತು ಸಿರುಗುಪ್ಪ ಕೇಂದ್ರಗಳಿಗೆ ಉಳಿದ ಕೇಂದ್ರಗಳಿಗೆ ಹೊಸಪೇಟೆ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವ ವ್ಯವಸ್ಥೆ ಮಾಡಿದೆ. ಬಳ್ಳಾರಿ ನಗರದ ಸಕರ್ಾರಿ ಪದವಿಪೂರ್ವ ಕಾಲೇಜು ಒಂದನ್ನು ಉಳಿದಂತೆ ಎಲ್ಲಾ ಶಾಲಾ-ಕಾಲೇಜುಗಳನ್ನು ಬೇರೆ ಬೇರೆ ಕಾಲೇಜುಗಳಿಗೆ ನಿಗದಿಪಡಿಸಿದೆ. ಪರೀಕ್ಷಾ ಕಾರ್ಯಕ್ಕೆ 650ಕ್ಕೂ ಹೆಚ್ಚು ಉಪನ್ಯಾಸಕರನ್ನು ನೇಮಕ ಮಾಡಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಪರೀಕ್ಷಾ
ಕೇಂದ್ರಗಳವರೆಗೆ ಬಸ್ಗಳಲ್ಲಿ ಪ್ರಯಾಣಕ್ಕೆ ವಿದ್ಯಾಥರ್ಿಗಳಿಗೆ ಅನುಮತಿ: ಪಿಯುಸಿ ದ್ವಿತೀಯ ಅಂತಿಮ ಪರೀಕ್ಷೆಗೆ ಹಾಜರಾಗುವ ವಿದ್ಯಾಥರ್ಿಗಳಿಗೆ ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ವಿದ್ಯಾಥರ್ಿಗಳಿಗೆ ಈ ಸಂದರ್ಭದಲ್ಲಿ ಏನಾದರೂ ತೊಂದರೆಗಳಾದಲ್ಲಿ ಮೊ:7760992152/7760992168/7760992164 ಸಂಪಕರ್ಿಸಬಹುದ