ಕನ್ನಡದಲ್ಲಿ ವಿಜ್ಞಾನ ಉಪನ್ಯಾಸ ಸ್ಪರ್ಧೆ: ರಾಜ್ಯಮಟ್ಟಕ್ಕೆ ಆಯ್ಕೆ
ಲೋಕದರ್ಶನ ವರದಿ
ಗೋಕಾಕ 29: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸ್ಟೆಪ್ಸ್ ಸಂಸ್ಥೆ ಹಾಗು ಗೋಕಾಕ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮಟ್ಟದ ವಿಜ್ಞಾನ ಪದವಿ ಹಾಗೂ ಬಿ.ಇಡಿ.(ವಿಜ್ಞಾನ) ಪ್ರಶಿಕ್ಷಣಾರ್ಥಿಗಳಿಗಾಗಿ ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಉಪನ್ಯಾಸ ಸ್ಪರ್ಧೆ ದಿನಾಂಕ 27ರಂದು ಜೆ. ಎಸ್. ಎಸ್. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಗೋಕಾಕದಲ್ಲಿ ಜರುಗಿತು.
ರಾಜ್ಯ ಸಂಯೋಜಕ ಎಚ್. ಎಸ್. ಟಿ. ಸ್ವಾಮಿ, ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ನರಾದ ವಿಶ್ವನಾಥ ಕಡಕೋಳ ಇವರು ಸಸಿಗೆ ನೀರು ಹಾಕುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು. ಗೋಕಾಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್. ಎಮ್. ವಾಲಿ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆಶಾಲತಾ ಎಸ್. ತೇರದಾಳ, ವಿಜ್ಞಾನ ಉಪನ್ಯಾಸ ಸ್ಪರ್ಧೆಯ ಸಂಯೋಜಕ ಡಾ. ಎನ್. ಎಲ್. ತೇರದಾಳ, ವಿಜ್ಞಾನ ಸಂಘದ ಸಂಯೋಜಕರಾದ ಪ್ರೊ. ಕನಕರಾಜ ಟಿ. ಎಮ್. ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ವಿವಿಧ ಮಹಾವಿದ್ಯಾಲಯಗಳಿಂದ ಸುಮಾರು 60 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸ್ಪರ್ಧೆಗೆ ನಿರ್ಣಾಯಕರಾಗಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಎನ್. ಹುಲಕುಂದ ಹಿ ಗಣಿತ, ಪ್ರೊ. ಕೆ.ಬಿ. ಮಾದಗೌಡ - ಭೌತ ವಿಜ್ಞಾನ, ಪ್ರೊ. ಜೆ. ಎಮ್. ಪಾಟೀಲ - ರಸಾಯನ ವಿಜ್ಞಾನ ಮತ್ತು ಡಾ. ಎಸ್. ಬಿ. ಜಯಗೌಡರ ಹಿ ಜೀವವಿಜ್ಞಾನ, ಆಗಮಿಸಿದ್ದರು.
ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕ ಎಮ್. ಡಿ. ಚುನಮುರಿ ಹಾಗೂ ಕರಾವಿಪ ಕಾರ್ಯಕಾರಿ ಮಂಡಳಿ ಸದಸ್ಯರಾದ ಎಸ್. ಟಿ. ನಾಯಿಕ ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾದ 8 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ತಲಾ ಪ್ರಥಮ ಸ್ಥಾನಕ್ಕೆ ರೂ.2000, ದ್ವಿತೀಯ ಹಿರೂ.1000 ನಗದು ಬಹುಮಾನವನ್ನು ನೀಡಿ ಗೌರವಿಸಿದರು. ಉಪ-ಪ್ರಾಚಾರ್ಯ ಡಾ. ಆರ್. ಎಸ್. ಬಳಿಗಾರ ಎಲ್ಲ ವಿಭಾಗದ ಮುಖ್ಯಸ್ಥರುಗಳು, ಎಲ್ಲ ಪ್ರಾಧ್ಯಾಪಕರು ಹಾಗೂ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
ಭೌತವಿಜ್ಞಾನ - ಪ್ರಥಮ ಸ್ಥಾನ: ವೈಷ್ಣವಿ ಮರಗೋಡ, ಕೆಎಲ್ಇ ಎಸ್ಇಪಿ ಪದವಿ ಮಹಾವಿದ್ಯಾಲಯ, ಮಹಾಲಿಂಗಪೂರ
ದ್ವಿತೀಯ ಸ್ಥಾನ: ಆಶ್ವಿನಿ ವಸ್ತ್ರದ, ಬಿ.ವ್ಹಿ.ವ್ಹಿ.ಎಸ್. ಪದವಿ ಮಹಾವಿದ್ಯಾಲಯ, ಬಾಗಲಕೋಟ
ರಸಾಯನವಿಜ್ಞಾನ - ಪ್ರಥಮ ಸ್ಥಾನ: ಪಾರ್ವತಿ ಬಿರಾದಾರ, ಬಸವೇಶ್ವರ ಮಹಾವಿದ್ಯಾಲಯ, ಬಾಗಲಕೋಟ
ದ್ವಿತೀಯ ಸ್ಥಾನ: ಕೀರ್ತಿ ಪಟ್ಟೇದ, ಕೆಎಲ್ಇ ಎಸ್ಇಪಿ ಪದವಿ ಮಹಾವಿದ್ಯಾಲಯ ಮಹಾಲಿಂಗಪೂರ
ಗಣಿತವಿಜ್ಞಾನ - ಪ್ರಥಮ ಸ್ಥಾನ: ನಾಮದೇವ ಖೋತ, ಎಸ್.ಡಿ.ಎಮ್. ಶಿಕ್ಷಣ ಮಹಾವಿದ್ಯಾಲಯ, ತೇರದಾಳ
ದ್ವಿತೀಯ ಸ್ಥಾನ: ಸೊನಾಲಿ ಕರವೇಕರ, ಎಸ್. ಟಿ. ಸಿ. ಪದವಿ ಮಹಾವಿದ್ಯಾಲಯ, ಬನಹಟ್ಟಿ
ಜೀವವಿಜ್ಞಾನ - ಪ್ರಥಮ ಸ್ಥಾನ: ಕುಮಾರೇಶ ಕಾತರಕಿ, ಎಸ್. ಎಸ್. ಬಿ. ಎಮ್. ಪದವಿ ಮಹಾವಿದ್ಯಾಲಯ, ಬಾದಾಮಿ
ದ್ವಿತೀಯ ಸ್ಥಾನ: ನಿಂಗರಾಜ ಪೂಜೇರಿ, ಜೆ. ಎಸ್. ಎಸ್. ಪದವಿ ಮಹಾವಿದ್ಯಾಲಯ, ಗೋಕಾಕ
ಡಾ. ಎನ್. ಎಲ್. ತೇರದಾಳ ಸ್ವಾಗತಿಸಿದರು. ಜಿ. ಬಿ. ನೇಸರಗಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಕನಕರಾಜ ಟಿ. ಎಮ್. ವಂದಿಸಿದರು.