ಸತ್ಯೆಪ್ಪಾ ಹಾವಣ್ಣವರಗೆ ಪಿಎಚ್ಡಿ ಪದವಿ ಪ್ರದಾನ
ಲೋಕದರ್ಶನ ವರದಿ
ಗೋಕಾಕ 08: ಸ್ಥಳೀಯ ಜೆಎಸ್ಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸತ್ಯೆಪ್ಪಾ ಬಸಪ್ಪಾ ಹಾವಣ್ಣವರ ಅವರು ಮಂಡಿಸಿದ “ಂ ಖಠಠಠಛಿಚಿಟ ಖಣಣಜಥಿ ಠ ಖಣರಚಿಡಿ ಅಚಿಟಿಜ ಊಚಿಡಿತಣಜಢಿ : ಂ ಅಛಿಜ ಖಣಣಜಥಿ ಟಿ ಉಠಚಿಞ ಖಿಚಿಟಣಞ“ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಮನ್ನಿಸಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ. ಇವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎಮ್. ಸಿ. ಚೆಲುವಾದಿ ಇವರು ಸಂಶೋಧನಾ ಮಾರ್ಗದರ್ಶಕರಾಗಿದ್ದರು.
ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ನ ವಿಶ್ವನಾಥ ಕಡಕೋಳ, ವಿಶ್ವಸ್ಥ ಮಂಡಳಿಯ ಚೇರಮನ್ನ ಡಾ. ಉದಯ ಬಿ. ಆಜರಿ, ಆಡಳಿತ ಹಾಗೂ ವಿಶ್ವಸ್ಥ ಮಂಡಳಿಯ ಸರ್ವ ಸದಸ್ಯರು, ಕಾರ್ಯದರ್ಶಿ ಆರ್. ಎಂ. ವಾಲಿ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಆಶಾಲತಾ ಎಸ್. ತೇರದಾಳ, ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಡಾ. ಹಾವಣ್ಣವರ ಅವರನ್ನು ಅಭಿನಂದಿಸಿದ್ದಾರೆ.