ಇಂಡಿ

ಸಮರ್ಥ ವಡೆಯರ್, ಅಂತಾರಾಷ್ಟ್ರೀಯ ಕರಾಟೆಯಲ್ಲಿ ವಿಜೇತ್

ಸಮರ್ಥ ವಡೆಯರ್, ಅಂತಾರಾಷ್ಟ್ರೀಯ ಕರಾಟೆಯಲ್ಲಿ ವಿಜೇತ್


ಲೋಕದರ್ಶನ ವರದಿ 

 ಇಂಡಿ  14: ಇತ್ತೀಚೆಗೆ ನೇಪಾಳದ ಕಠ್ಮಂಡುನಲ್ಲಿ ನಡೆದ ದಿನಾಂಕ 02-06-2026 ರಿಂದ  04-06-2026 ರವರಿಗೆ ನಡೆದ 17 ನೇಯ ಎನ್‌. ಎಸ್‌.ಕೆ.ಎ. ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಇಂಡಿ ತಾಲೂಕಿನ ಸಾತಲಗಾಂವ ಗ್ರಾಮದ ಸಮರ್ಥ ವಡೆಯರ್ ಭಾಗವಹಿಸಿ ತಾಲೂಕಿನ ಕೀರ್ತಿ ತಂದಿದ್ದಾರೆ.ಇವರಿಗೆ ತರಬೇತಿ ನೀಡಿದ ಫಿಸಿಕಲ್ ಫಿಟ್ನೆಸ್ ಸ್ಪೋರ್ಟ್ಸ ಆಡಳಿತ ಅಧಿಕಾರಿ ಈಶ್ವರ ಎಸ್ ಸಾವಳಕರ.ಸಾರಥ್ಯದಲ್ಲಿ 107 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. 

ಇವರ ಸಾಧನೆ ಇತರ ಬಾವಿ ಕ್ರೀಡಾ ಸ್ಪರ್ಧೆಗಳಿಗೆ ಸ್ಪೂರ್ತಿಯಾಗಿದೆ. ಪಠ್ಯ ಪುಸ್ತಕಗಳೊಂದಿಗೆ ಮಕ್ಕಳು ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳು ಮಗುವಿನ ಸರ್ವತೋಮುಖ ಬೆಳವಣಿಗೆಗೆ ನೆರವಾಗುತ್ತದೆ. ಎಂದು ಜೆಡಿಎಸ್ ಮುಖಂಡರಾದ ಬಿ ಡಿ ಪಾಟೀಲರು ವಿಜೇತ ಮಗುವಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಶಿವುಕುಮಾರ ಬಿರಾದಾರ,ಶಿಲಪ್ಪ ವಡೆಯರ್,ಮಲಕಾರಿ ವಡೆಯರ,ನಾಗಪ್ಪ ಶಿರೂರ,ಮಲೇಶ ಕಣದಾಳ, ವಿಠಲಗೌಡ ಬಿರಾದಾರ,ನಿಲಪ್ಪ ನಂದಗೋಂಡ,ಕೆಂಚರಾಯ ಪಡಗಾನೂರ, ಶವರಸಿದ್ದ ವಡೆಯರ್ ಉಪಸ್ಥಿತರಿದ್ದರು. 


ಸುದ್ದಿ ಓದಿ