ಸಿಂಧಗಿ

ಸದ್ಗುರು ಪುಂಡಲಿಂಗೇಶ್ವರ ನಾಮಕರಣ ತೊಟ್ಟಿಲು ಕಾರ್ಯಕ್ರಮ

ಸದ್ಗುರು ಪುಂಡಲಿಂಗೇಶ್ವರ ನಾಮಕರಣ ತೊಟ್ಟಿಲು ಕಾರ್ಯಕ್ರಮ

ಸಿಂದಗಿ; ತಾಲೂಕಿನ ಸುಕ್ಷೇತ್ರ ಹಿಕ್ಕನಗುತ್ತಿ ಗ್ರಾಮದ ಶ್ರೀ ಸದ್ಗುರು ಪುಂಡಲಿಂಗ ಮಹಾಶಿವಯೋಗಿಗಳ 115ನೇ ಜನನೋತ್ಸವದ ಪ್ರಸಕ್ತ ವರ್ಷದ ಶುಕ್ರವಾರ ಅ.28 ಮುಂ. 7  ಗಂಟೆಗೆ ಶ್ರೀ ಸದ್ಗುರು ಪುಂಡಅಂಗೇಶ್ವರ ಭಾವಚಿತ್ರ ಮೆರವಣಿಗೆಯೊಂದಿಗೆ ಸಾಲಂಕೃತ ಸುಹಾಸಿನಿಯರಿಂದ ಹೊರಲ್ಪಟ್ಟ ಶತ ಕುಂಭಗಳಿಂದ ಆಗ್ರ ಪೀಠಕ್ಕೆ ಕುಂಬಾಭೀಷೆಕ ತದನಂತರ ಶ್ರೀ ವೇ?? ದತ್ತು ಮುತ್ಯಾ ಸ್ವಾಮಿಗಳು ಸಾ. ಗೊಳಸಾರ ಇವರಿಂದ ರುದ್ರಾಭಿಷೇಕ 10  ಗಂಟೆಗೆ  ಸದ್ಗುರು ಪುಂಡಲಿಂಗೇಶ್ವರ ನಾಮಕರಣ ತೊಟ್ಟಿಲು ಕಾರ್ಯಕ್ರಮವು  ಶ್ರೀ ಅಭಿನವ ಪುಂಡಲಿಂಗೇಶ್ವರ ಮಹಾರಾಜರು ಇವರಿಂದ ಜರಗುವುದು. 

ಮ.12.30 ಗಂ. ಶ್ರೀ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸುಕ್ಷೇತ್ರ ಗೊಳಸಾರ ಸಾನಿಧ್ಯದಲ್ಲಿ 

ಶ್ರೀ ಮ.ನಿ.ಪ್ರ. ಜಗದೇವ ಮಲ್ಲಿಬೋಮ್ಮಯ್ಯ ಮಹಾಸ್ವಾಮಿಗಳು ವಿರಕ್ತಮಠ ಆಲಮೇಲ ನೇತೃತ್ವದಲ್ಲಿ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಆಲಮೇಲ ಅಧ್ಯಕ್ಷತೆಯಲ್ಲಿ ಆಧ್ಯಾತ್ಮ ಪ್ರವಚನವನ್ನು ಚಿಕ್ಕರೂಗಿಯ ಈರಣ್ಣಾ ಶಾಸ್ತ್ರಿಗಳು ನಡೆಸಿಕೊಡುವವರು. ಸಂಜೆ 7 ಗಂಟೆಗೆ ಪುಂಡಲಿಂಗೇಶ್ವರ ನವತರುಣ ನಾಟ್ಯ ಸಂಘ ಹಿಕ್ಕನಗುತ್ತಿ ಇವರು ಗೋಲ್ಲಾಳೇಶ್ವರ ನಾಟ್ಯ ವಸ್ತು ಬಂಢಾರ ಹಿಕ್ಕನಗುತ್ತಿ ಇವರ ಭವ್ಯ ರಂಗ ಸಜ್ಜಿಕೆಯಲ್ಲಿ ಶ್ರೀ ಪ್ರಭು ಡಾಕ್ಟರ ಬಿರಾದಾರ ನಿರ್ದೇಶನದಲ್ಲಿ ಡಿ.ಆರ್ ಪೂಜಾರಿ ವಿರಚಿತ ಸಿಡಿದೆದ್ದ ಶಿವಶಕ್ತಿ ಅರ್ಥಾರ್ಥ ರೈತನ ಬಾಳು ಕಣ್ಣಿರಿನ ಗೋಳು ಎಂಬ ಕ್ರಾಂತಿಕಾರಿ ನಾಟಕ ಅಭಿನಯಿಸಲ್ಪಡುವುದು. ಈ ಪ್ರಥಮ ಪ್ರಯೋಗ ವೇ?? ಈರಯ್ಯ ಸಿ. ಹಿರೇಮಠ ಸಾನಿದ್ಯದಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಎಂ. ಮನಗೂಳಿ ಅವರು ಉದ್ಘಾಟಿಸುವರು. 

ಹಿಕ್ಕನಗುತ್ತಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮಹಾನಂದ ಪ. ಮಾದರ ಅಧ್ಯಕ್ಷತೆಯಲ್ಲಿ ತಾಲೂಕಾ ಪಂಚಮಸಾಲ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಎಂ. ಹಂಗರಗಿ, ಕಲಬುರಗಿ ಅಬಕಾರಿ ಸಿಪಿಆಯ್ ಶಿವಾನಂದ ನೀ.ಪಾಟೀಲ ಅವರು ಜ್ಯೋತಿ ಬೆಳಗಿಸುವವರು.   

ರಂಗಭೂಮಿ ಪೂಜೆಯನ್ನು ಜೆ.ಡಿ.ಎಸ್‌. ಮುಖಂಡರು ಶಿವಾನಂದ ಪಾಟೀಲ ಸೋಮಜ್ಯಾಳ ಕಲಬುರಗಿ ಪ್ರ.ಧ.ಗುತ್ತಿಗೆದಾರ ಅಂಬರೀಶ ಮ. ಪಾಟೀಲ ನೇರವೇರಿಸುವವರು.  

ಸದ್ಗುರು ಭಾವಚಿತ್ರ ಪೂಜೆಯನ್ನು ಮಾಜಿ ತಾಪಂ ಸದಸ್ಯ ಸುರೇಶ ಗಂ. ಪೂಜಾರಿ, ಕುಮಾರ ದೇಸಾಯಿ ಕಾಂಗ್ರೇಸ್ ಮುಖಂಡರು ಬಬಲೇಶ್ವರ ನೇರವೇರಿಸುವರು. ಮುಖ್ಯ ಅತಿಥಿಗಳಾಗಿ ಶರಣಪ್ಪ ಗು. ಬಾದನ ಅಧ್ಯಕ್ಷರು ಪಿಕೆಪಿಎಸ್, ವಿ.ಎ. ಪಾಟೀಲ ಸಿಇಓ ಪಿ.ಕೆ.ಪಿ.ಎಸ್,  ನರಸು ಚವ್ಹಾಣ ಗುತ್ತಿಗೆದಾರರು, ಸಂಗನಗೌಡ ಶ. ಬಿರಾದಾರ, ಮಲ್ಲನಗೌಡ ಬ. ಪಾಟೀಲ ಗುಂದಗಿ, ಪರಮೇಶ್ವರ ದೇಸಾಯಿ (ಹಂಚಿನಾಳ), ಕುಮಾರ ವರ್ಕನಹಳ್ಳಿ, ನೂರಅಹ್ಮದ ಅತ್ತಾರ ಚಾಂದಕವಠ, ಗ್ರಾಮ ಲೆಕ್ಕಾಧಿಕಾರಿ ಸಂತೋಷ ಸಂಗೋಗಿ  ಸಿದು.ಶಿ. ಸಾತಲಗಾಂವ, ವಿಜಯಪುರ ಸಹಕಾರಿ ಯುನಿಯನ್ ಬ್ಯಾಂಕ್ ನಿರ್ದೇಶಕ ಬಸವರಾಜ ಸಿ. ಬಾಗೇವಾಡಿ, ಶ್ರೀಶೈಲ ಪೂಜಾರಿ ನಾಗರಹಳ್ಳಿ, ಆನಂದ ಶಾಬಾದಿ,  ಗೌಡಪ್ಪ. ಭೀ. ಬಿರಾದಾರ,  ಲಗಮಣ್ಣ ಪೂಜಾರಿ, ವಿಠಲ ಸಿ. ಬಡಿಗೇರ ಗ್ರಾ.ಪಂ. ಸದಸ್ಯರಾದ ಶಿವಾನಂದ ಅ. ಮರಬದ, ಕರೆಪ್ಪ ರಾ. ಮಾಕೊಂಡ, ಶರಣಗೌಡ ಶಿ. ಸಣಮನಿ, ಶ್ರೀಶೈಲ ಬ. ರೋಡಗಿ,  ಬಸು ವಿ. ಗಾಡದ,  ಸುಭಾಸ ಸ. ನಂದಶೆಟ್ಟಿ ಗಣಿಹಾರ, ಎಸ್‌. ಜಿ. ಬಿರಾದಾರ,  ಅರ್ಜುನ ದೊಡಮನಿ, ರಮೇಶ ತಳವಾರ, ಅರ್ಜುನ ಸಂ. ದೊಡಮನಿ, ಮಲಕಣ್ಣ ಗು. ನಂದೂರ, ಸಿದ್ದು ರಾಂಪೂರ, ಬಳಗಾನೂರ ಗ್ರಾ.ಪಂ. ಅಧ್ಯಕ್ಷ ನಿಂಗಣ್ಣರಾ. ಜೇರಟಗಿ, ಸಾಹೇಬಗೌಡ ಬ. ಪ್ಯಾರಸಾಬಾದಿ ಕಲಹಳ್ಳಿ ಪಾಲ್ಗೊಳ್ಳಲಿದ್ದಾರೆ ಕಾರಣ ಸುತ್ತಮುತ್ತಲಿನ ಸದ್ಬಕ್ತ ಮಂಡಳಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಂಗಕಲಾವಿದರನ್ನು ಪ್ರೋತ್ಸಹಿಸಬೇಕು ಎಂದು ಜಾತ್ರಾ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ. 


ಸುದ್ದಿ ಓದಿ