ಗೋಕಾಕ್

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಶಂಕರಲಿಂಗ ಪ್ರೌಢಶಾಲೆ ಸಾಧನೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಶಂಕರಲಿಂಗ ಪ್ರೌಢಶಾಲೆ ಸಾಧನೆ

ಗೋಕಾಕ 11:  ಸ್ಥಳೀಯ ಪ್ರತಿಷ್ಠಿತ ಆದರ್ಶ ಶಿಕ್ಷಣ ಸಂಸ್ಥೆಯ ಶಂಕರಲಿಂಗ ಪ್ರೌಢಶಾಲೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿದೆ. 

ಈ ಬಾರಿ ಪರೀಕ್ಷೆ ಬರೆದ 70 ವಿದ್ಯಾರ್ಥಿಗಳಲ್ಲಿ 25 ಂ+ ಮತ್ತು 38 ಂ ಶ್ರೇಣಿಯಲ್ಲಿ ಪಾಸಾಗುವುದರೊಂದಿಗೆ ತಮ್ಮ ಸಾಧನೆಯನ್ನು ಪ್ರತಿಸಲದಂತೆ ಮುಂದುವರೆಸಿದ್ದಾರೆ. 

ಕುಮಾರ ನಾಹಿದಹುಸೇನ ನರೋ ಶೇ.97.12 ಪ್ರಥಮ, ಕುಮಾರ ಕೃಷ್ಣಕುಮಾರ ಚಿಗಡೊಳ್ಳಿ ಶೇ.95.84 ದ್ವಿತೀಯ, ಕುಮಾರ ದರ್ಶನ ತುಕ್ಕಾರ ಶೇ.94.24 ಮತ್ತು ವಿಕಾಸ ಸರ್ವಿ ಶೇ.94.24 ತೃತೀಯರಾಗಿ ಆಯ್ಕೆಯಾಗಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ.ಎಮ್‌.ಹಿಂಡಿಹೊಳಿ, ಉಪಾಧ್ಯಕ್ಷ ಪ್ರಕಾಶ ವರದಾಯಿ, ಕಾರ್ಯದರ್ಶಿ ಬಿ.ಜಿ.ಭೂತಿ, ಸಹ ಕಾರ್ಯದರ್ಶಿ ಆರ್‌.ಜಿ.ದೊಡಮನಿ, ಕೋಶಾಧ್ಯಕ್ಷ ವ್ಹಿ. ಬಿ. ಗಚ್ಚಿ, ಮುಖ್ಯೋಪಾಧ್ಯಾಯ ಆರ್‌.ಎಸ್‌.ಹೆಬ್ಬಾಳೆ, ಶಿಕ್ಷಕ ವೃಂದ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ