ರಾಣೆಬೆನ್ನೂರ

ಹನುಮಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಸಿ ಎಸ್ ಭಗವಂತಗೌಡ್ರ ಆಯ್ಕೆ

ಹನುಮಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ  ಸಿ ಎಸ್ ಭಗವಂತಗೌಡ್ರ  ಆಯ್ಕೆ

 ರಾಣೇಬೆನ್ನೂರು ಜು 2 ತಾಲೂಕಿನ ಹನುಮಾಪುರ ಗ್ರಾಮದ ಸರಕಾರಿ ಪ್ರೌಢಶಾಲೆಯ  ಮುಖ್ಯೋಪಾಧ್ಯಾಯರಾಗಿ ಸಿ.ಎಸ್. ಭಗವಂತಗೌಡ್ರ ಅವರು, ಆಯ್ಕೆಯಾಗಿದ್ದಾರೆ. ಶನಿವಾರ ಅವರು ನೇಮಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಭಗವಂತ ಗೌಡ್ರ ಅವರು 2012 ನೇ ಸಾಲಿನ ಕೆ ಇ ಎಸ್ ಅಧಿಕಾರಿಯಾಗಿದ್ದಾರೆ. ತಮ್ಮ ವೃತ್ತಿ ಬದುಕಿನ ವಿವಿಧ ಹಂತಗಳಲ್ಲಿ ಅತ್ಯುತ್ತಮ ಶಿಕ್ಷಕರಾಗಿ ವಿದ್ಯಾರ್ಥಿಗಳ ಪಾಲಿನ ಪ್ರೀತಿಯ ಮೇಷ್ಟ್ರಾಗಿ , ಶಿಕ್ಷಕರ ಪಾಲಿನ ಮಾರ್ಗದರ್ಶಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಸ್ಪಧರ್ಾತ್ಮಕ ಪರೀಕ್ಷೆಯ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪ್ರೌಢಶಾಲಾ ಶಿಕ್ಷಕರಾಗಿ 2012ರಲ್ಲಿ ಕೆ ಇ ಎಸ್ ಉತ್ತೀರ್ಣರಾಗಿದ್ದಾರೆ. ಆರಂಭದಲ್ಲಿ ಛತ್ರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ತದನಂತರ ಹಾವೇರಿ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ ಹಾವೇರಿ ತಾಲ್ಲೂಕಿನ ಸರ್ಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣಕ್ಕಾಗಿ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಹನುಮಾಪುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ  ಜಿಲ್ಲಾ  ಉಪನಿರ್ದೇಶಕರ ಕಛೇರಿಯ ವಿಷಯ ಪರಿವೀಕ್ಷಕರಾದ ಮಂಜಪ್ಪ, ಈರಪ್ಪ ಲಮಾಣಿ, ಎಸ್ ಪಿ ಮೂಡಲದವರ,ಎಪಿಸಿಓ ಗಳಾದ  ಆನಂದ ಉರ್ಮಿ , ದಾವಣಗೆರೆ ಜಿಲ್ಲೆಯ ಎಪಿಸಿಓ  ಸಂಜೀವ್ ನಾಯ್ಕ , ಹಾವೇರಿ ತಾಲ್ಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಆರ್ ಜಿ ಮೇಟಿ, ಮುಖ್ಯೋಪಾಧ್ಯಾಯರಾದ  ಎಚ್ ಎಚ್ ಜಾಡರ, ತಾಲೂಕ ಪ್ರೌಢಶಾಲ ಶಿಕ್ಷಕರ ಸಂಘದ ಅಧ್ಯಕ್ಷ ರಮೇಶ, ಎಸ್.ಡಿ. ಎಂ.ಸಿ ಉಪಾಧ್ಯಕ್ಷರಾದ ಫಕ್ಕೀರಗೌಡ ಗುಡಸಲಕೊಪ್ಪ,ಪ್ರಾಥಮಿಕ ಶಾಲೆಯ ಎಸ್.ಡಿ ಎಂಸಿ ಅಧ್ಯಕ್ಷ ಪರಸನಗೌಡ ಗುಡಸಲಕೊಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ನಿಂಗಪ್ಪ ಕೊರಚರ, ಗೋಪಾಲ ಅಂತರವಳ್ಳಿ, ಎಸ್. ಡಿ ಎಂ.ಸಿ. ಮಾಜಿ ಅಧ್ಯಕ್ಷರಾದ ಮಲ್ಲಪ್ಪ ಕಟಿಗೇರ, ಹೊನ್ನಪ್ಪ ಅಂತರವಳ್ಳಿ, ಶಿಕ್ಷಕರಾದ ಮಲ್ಲಪ್ಪ ಕರೇಣ್ಣನವರ, ಬಸವರಾಜ ಡೊಳ್ಳಿನ, ಸುಭಾಸ್ ಕೋಡಬಾಳ ಮತ್ತು ಗ್ರಾಮಸ್ಥರು ಪ್ರೌಢಶಾಲೆಯ ಶಿಕ್ಷಕರು ಮಕ್ಕಳು ಸಿ ಎಸ್ ಭಗವಂತಗೌಡ್ರ ಅವರನ್ನು ಅಭಿನಂದಿಸಿ ಅಭಿಮಾನದಿಂದ ಸ್ವಾಗತಿಸಿ, ಸನ್ಮಾನಿಸಿದರು 

ಸುದ್ದಿ ಓದಿ