ರೇಲ್ವೆ ಉದ್ಯೋಗಿಗೆ ಪ್ಲಾಟ ಕೊಡದ ಎಸ್.ಬಿ. ಪ್ರಾಪರ್ಟಿಸ್‌ಗೆ ದಂಡ ಮತ್ತು ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ
ಧಾರವಾಡ 25: ಹುಬ್ಬಳ್ಳಿಯ ವಿಧ್ಯಾರಣ್ಯ ನಗರದ ನಿವಾಸಿ ಅಂದಾನಪ್ಪ ಮ್ಯಾಗೇರಿ ಎಂಬುವವರು ರೈಲ್ವೆ ಉದ್ಯೋಗಿಯಾಗಿದ್ದರು. ಅವರು ಸ್ವಂತ ಮನೆ ಕಟ್ಟಿಕೊಳ್ಳುವ ಇಚ್ಚೆಯಿಂದ ಹುಬ್ಬಳ್ಳಿಯ ವಿಜಯಕುಮಾರ ಅಯ್ಯಾವರಿ ಇವರ ಎಸ್.ಬಿ. ಪ್ರಾಪರ್ಟಿಸ್‌ರವರ ಜೊತೆ ಪ್ಲಾಟ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು. ಹುಬ್ಬಳ್ಳಿಯ ಭಾಗ್ಯ ನಗರ ಲೇಓಟ್‌ನಲ್ಲಿ ಪ್ಲಾಟ್ ನಂ. 41ನ್ನು 2023ರಲ್ಲಿ ಒಟ್ಟು ರೂ.9,99,320/- ಪೈಕಿ ರೂ.4,99,660/- ಮುಂಗಡ ಹಣವಾಗಿ ಪಾವತಿಸಿ ದೂರುದಾರ ಎದುರುದಾರ ಜೊತೆ ಖರೀದಿ ಕರಾರು ಮಾಡಿಕೊಂಡಿದ್ದರು. ನಂತರ ಎದುರುದಾರರು ಆ ಪ್ಲಾಟನ್ನು ಅಭಿವೃದ್ಧಿಪಡಿಸದೇ ಒಂದಿಲ್ಲೊಂದು ನೆಪ ಹೇಳಿ ಮುಂದುಡುತ್ತಾ ಬಂದರು. ದೂರುದಾರರು ಸಾಕಷ್ಟು ಸಲ ವಿನಂತಿಸಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ದೂರುದಾರರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರ/ಬಿಲ್ಡರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ. 28/02/2024 ರಂದು ಈ ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರನಿಂದರೂ. 4,99,660/- ಹಣ ಪಡೆದುಕೊಂಡು ಎದುರುದಾರ ಅವರಿಗೆ ಪ್ಲಾಟ್ ಖರೀದಿ ಪತ್ರ ನೋಂದಣಿ ಮಾಡಿಕೊಡಲು ವಿಫಲರಾಗಿರುವುದು ಮತ್ತು ದೂರುದಾರನಿಗೆ ಹಣವನ್ನು ಹಿಂತಿರುಗಿಸದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ು ನೀಡಿದೆ.
ದೂರುದಾರರು ಸಂದಾಯ ಮಾಡಿದ ರೂ. 4,99,660/- ಮತ್ತು ಅದರ ಮೇಲೆ ಮುಂಗಡ ಹಣ ಪಾವತಿಸಿದ ದಿನದಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ10ಅ ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎಸ್.ಬಿ.ಪ್ರಾಪರ್ಟಿಸ್ ಪಾಲುದಾರರಾದ ವಿಜಯಕುಮಾರ ಅಯ್ಯಾವರಿ/ಎದುರುದಾರರಿಗೆ ಆಯೋಗ ತನ್ನ ತೀರ್ಿನಲ್ಲಿ ಹೇಳಿದೆ. ಧಾರವಾಡ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಅಣಗೌಡರ ನೇತೃತ್ವದಲ್ಲಿ ಕೃಷಿ ಅಧಿಕಾರಿಗಳ ತಂಡವು ಅಮ್ಮಿನಭಾವಿ ಹೋಬಳಿಯ ಹೆಸರು, ಸೋಯಾಬಿನ್ ಹಾಗೂ ಶೇಂಗಾ ಬೆಳೆಗಳ ತೋಟಗಳಿಗೆ ಭೇಟಿ ನೀಡಿ, ಬೆಳೆಗಳ ಬೆಳವಣಿಗೆ ಹಾಗೂ ರೋಗ ಬಾಧೆಗಳ ಕುರಿತು ಪರೀಶೀಲಿಸಿತು.