ರೋಹಿತ ಮಾಳಿ ಜುಡೋ, ಕುಸ್ತಿ ಪಂದ್ಯದಲ್ಲಿ ಪ್ರಥಮ
ಕಾಗವಾಡ 25: ಪಟ್ಟಣದ ಮಲ್ಲಿಕಾರ್ಜುನ ವಿದ್ಯಾಲಯದ ವಿದ್ಯಾರ್ಥಿ ರೋಹಿತ ಅಶೋಕ ಮಾಳಿ ಇತನು ಚಿಕ್ಕೋಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಆಯ್ಕೆಯಾಗಿದ್ದು, ಜೊತೆಗೆ ಬೆಂಗಳೂರಿನಲ್ಲಿ ನಡೆದ ಜುಡೋ ಸ್ಪರ್ಧೆಯಲ್ಲಿ ಭಾಗವಹಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಆತನನ್ನು ಶಾಲೆಯ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.
ದಿ. 19ರಂದು ಬೆಂಗಳೂರನಲ್ಲಿ ಜರುಗಿದ ಜುಡೋ ಸ್ಪರ್ಧೆಯಲ್ಲಿ ವಿದ್ಯಾಲಯದ 8 ನೇ ವರ್ಗದ ವಿದ್ಯಾರ್ಥಿ ಕುಮಾರ ರೋಹಿತ ಇತನು ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾನೆ.
ಅದರಂತೆ ದಿ.21 ರಂದು ಚಿಕ್ಕೋಡಿ ಜಿಲ್ಲಾ ಮಟ್ಟದ 14 ವರ್ಷದ ವಯೋಮಿತಿಯ ಕುಸ್ತಿ ಪಂದ್ಯಾವಳಿಯಲ್ಲಿಯೂ ಭಾಗವಹಿಸಿ, ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಕುಸ್ತಿಯಲ್ಲಿ ರಾಜ್ಯ ಮಟ್ಟಕ್ಕೆ ಮತ್ತು ಜುಡೋದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಂಡಿರುವ ರೋಹಿತ ಮಾಳಿ ಇತನನ್ನು ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಮುಖ್ಯಾಧ್ಯಾಪಕರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ಮುಖ್ಯಾಧ್ಯಾಪಕ ಆರ್.ಟಿ. ಗುರವ, ವಿನಾಯಕ ರಾಮದುರ್ಗ, ಓಂಕಾರ ಗುಮಟೆ, ಸ್ವಾತಿ ಪಾಟೀಲ, ಸತೀಶ ರತ್ನಪ್ಪಗೋಳ ಉಪಸ್ಥಿತರಿದ್ದರು.