ಜಮಖಂಡಿ

ವಾಹನ ಸವಾರರು ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮ ಪಾಲಿಸಿ: ಸಂಖ

ವಾಹನ ಸವಾರರು ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮ ಪಾಲಿಸಿ: ಸಂಖ

ಲೋಕದರ್ಶನ ವರದಿ, 

ಜಮಖಂಡಿ : 22: ವಾಹನ ಸವಾರರು ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮ ಪಾಲಿಸಿ,ರಸ್ತೆ ಅಪಘಾತ ತಡೆಗಟ್ಟಿ ಜೀವ ರಕ್ಷಿಸಿಕೊಳ್ಳಿ ಎಂದು ಆಟೋರಿಕ್ಷಾ, ಟ್ರ್ಯಾಕ್ಟರ ಚಾಲಕರಿಗೆ ಗ್ರಾಮಿಣ ಪೊಲೀಸ್ ಠಾಣೆ ಎಸೈ ಮಹೇಶ ಸಂಖ ತಿಳಿಸಿದರು.

ತಾಲೂಕಿನ ಹುನ್ನೂರಲ್ಲಿ ಗ್ರಾಮೀಣ ಪೊಲೀಸ ಠಾಣೆ ಆಶ್ರಯದಲ್ಲಿ ಆಟೋರಿಕ್ಷಾ ಹಾಗೂ ಟ್ರ್ಯಾಕ್ಟರ್ ಚಾಲಕರಿಗೆ ರಸ್ತೆ ನಿಯಮ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವಾಹನ ಇನ್ಸೂರೆನ್ಸ್, ಡ್ರೈವಿಂಗ್ ಲೈಸೆನ್ಸ ಹೊಂದಿರಬೇಕು. ಎಲ್ಲೆಂದರಲ್ಲಿ ಬ್ರೇಕ್ ಹಾಕಿ ಹಿಂದೆ-ಮುಂದೆ ನೋಡದೆ ವಾಹನವನ್ನು ನಿಲ್ಲಿಸಬಾರದು. ಟ್ರ್ಯಾಕ್ಟರ ಚಾಲಕರು ಟೇಪ ರಿಕಾಡರ್್ರಗಳನ್ನು ಬಳಸುವಂತಿಲ್ಲ. ಅಟೋ ರಿಕ್ಷಾದಲ್ಲಿ ಚಾಲಕರು ತಮ್ಮ ಬದಿಯಲ್ಲಿ ಪ್ಯಾಸೆಂಜರರನ್ನು ಕೂರಿಸಿ ಚಲಾಯಿಸಬಾರದು, ಟ್ರ್ಯಾಕ್ಟರ್ಗಳ ಹಿಂಬದಿ ಬಿಟ್ಟು ಬೇರ್ಯಾರು ರೆಫ್ಲೆಕ್ಟರ್ ಹೆಡ್ಡಲೈಟಗಳನ್ನು ಬಳಸಬಾರದು. ರಸ್ತೆ ಬದಿ ಪಾದಚಾರಿಗಳನ್ನು ಗಮನದಲ್ಲಿಟ್ಟುಕೊಂಡು ನಿಧಾನವಾಗಿ ಚಲಾಯಿಸಬೇಕು. ಈ ನಿಯಮಗಳನ್ನು ಪಾಲಿಸದಿದ್ದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದೆಂದು ಸೂಚನೆ ನೀಡಿದರು.

ಸಿಪಿಐ ಮಲ್ಲಪ್ಪ ಮಡ್ಡಿ ಮಾತನಾಡಿ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಾರಿನಲ್ಲಿ ಸೀಟ್ಬೆಲ್ಟ್ ಧರಿಸಿ, ಎಟಿಎಂನಲ್ಲಿ ಅಪರಿಚಿತರಿಂದ ಸಹಾಯ ಪಡೆಯಬೇಡಿ ಪಿನ್ ಕೀ ಹಾಕುವಾಗ ಕೀಪ್ಯಾಡ್ನ್ನು ಕೈಯಿಂದ ಮುಚ್ಚಿಟ್ಟುಕೊಳ್ಳಿ, 112 ತುತರ್ು ಸ್ಪಂದನಾ ಸಹಾಯಕ ವಾಹನ, ಸೈಬರ್ ಅಪರಾಧಗಳು ಹಾಗೂ ರಸ್ತೆ ಅಪಘಾತಗಳನ್ನು ತಡೆಗಟ್ಟುವಿಕೆಯಲ್ಲಿ ಚಾಲಕರ ಪಾತ್ರ ಮಹತ್ವದ್ದಾಗಿದೆಂದರು. 

ಈ ವೇಳೆ ಪೊಲೀಸ ಪೇದೆಗಳಾದ ಬಾಬು ಗುಳಬಾಳ, ಬರತೇಶ ವನಜೋಳ, ಮುತ್ತು ತಮದಡ್ಡಿ ಅನೇಕರು ಇದ್ದರು. 


ಸುದ್ದಿ ಓದಿ