ಸಿರುಗುಪ್ಪ

ಸಕ್ರಪ್ಪಗೆ ವಯೋ ನಿವೃತ್ತಿ ಅಭಿನಂದನಾ ಬೀಳ್ಕೊಡೆ ಸಮಾರಂಭ

ಸಕ್ರಪ್ಪಗೆ ವಯೋ ನಿವೃತ್ತಿ ಅಭಿನಂದನಾ ಬೀಳ್ಕೊಡೆ ಸಮಾರಂಭ

ಸಿರುಗುಪ್ಪ 31: ನಗರದ ಸರಕಾರಿ ಆದರ್ಶ ವಿದ್ಯಾಲಯ ಆರ್‌. ಎಂ.ಎಸ್‌.ಎ ಶಾಲಾ ಮುಖ್ಯ ಗುರುಗಳಾದ ಎ ಸಕ್ರ​‍್ಪ ಅವರ ವಯೋ ನಿವೃತ್ತಿ ಪ್ರಯುಕ್ತ ಅಭಿನಂದನಾ ಹಾಗೂ ಬೀಳ್ಕೊಡುವ ಗೌರವ ಪೂರ್ವಕ ಸಮಾರಂಭ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.  

ನೂರಾರು ಸರಕಾರಿ ಶಾಲಾ ಕಾಲೇಜು, ಪ್ರೌಢ ಶಾಲಾ, ಮುಖ್ಯಗುರುಗಳು, ಎಸ್‌.ಡಿಎಂಸಿ, ಅಧ್ಯಕ್ಷರು, ಸದಸ್ಯರು, ಜನಾಭಿಪ್ರಾಯ ಮುಖಂಡರಾದ ಹಾಜಿ ಎ. ಅಬ್ದುಲ್ ನಬಿ, ಎ. ಮೊಹಮ್ಮದ್ ನೌಶಾದ್ ಅಲಿ, ಮೊಹಮ್ಮದ್ ಖಲೀಲ್, ಎಸ್‌. ನಿಜಾಮುದ್ದೀನ್, ಮಹಮ್ಮದಲಿ ಬಾಗ್ವಾನ್, ದರಪ್ಪ ನಾಯಕ ,  ವಿಜಯರಂಗಾರೆಡ್ಡಿ, ಶ್ರೀಧರ್, ಫಕ್ರುದ್ದೀನ್ ಸಾಬ್ , ನಗರಸಭೆ ಮಾಜಿ ಸದಸ್ಯ ಬಿ  ಅಫ್ಜಲ್ ಹುಸೇನ್, ನಗರಸಭೆ ಮಾಜಿ ಅಧ್ಯಕ್ಷ ಮೆಹಬೂಬ್ ಬಾಷಾ  ಮೊದಲಾದವರು ಭಾಗವಹಿಸಿ ಮುಖ್ಯಗುರುಗಳಾದ ಸಕ್ರಪ್ಪ ಅವರ ಗುಣ ಗಾನ ಮಾಡಿ ಈ ಆದರ್ಶ  ಶಾಲೆಯನ್ನು ಉತ್ತಮವಾಗಿ ಮಾರ್ಪಡಿಸಿ  ಈ ಶಾಲೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಿರುವುದು ಈ ಶಾಲೆಯ ಶಿಕ್ಷಕ ವರ್ಗ ದವರೆಲ್ಲರೂ ಗುಣಗಾನ ಮಾಡಿ ಶ್ಲಾಘನೆ ಮಾಡಿದರು . 


ಸುದ್ದಿ ಓದಿ