ಜಮಖಂಡಿ

ಬಸವಜ್ಯೋತಿ ಪಪೂ ಕಾಲೇಜಿನ ಫಲಿತಾಂಶ ಶೇ 97.10

ಬಸವಜ್ಯೋತಿ ಪಪೂ ಕಾಲೇಜಿನ ಫಲಿತಾಂಶ ಶೇ 97.10

ಜಮಖಂಡಿ: ನಗರದ ಬಸವಜ್ಯೋತಿ ಪದವಿಪೂರ್ವ ಕಾಲೇಜಿನ 69 ವಿದ್ಯಾರ್ಥಿಗಳ ಪೈಕಿ 67 ವಿದ್ಯಾರ್ಥಿಗಳು ಮಾ 2023ರಲ್ಲಿ ಜರುಗಿದ್ದ  

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶೇ 97.10 ರಷ್ಟು ಫಲಿತಾಂಶ ನೀಡಿದ್ದಾರೆ ಎಂದು ಪ್ರಾಚಾರ್ಯ ಡಾ. ಟಿ ಪಿ ಗಿರಡ್ಡಿ ತಿಳಿಸಿದ್ದಾರೆ. 

ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜರುಗಿಸಿದ್ದ ಪರೀಕ್ಷೆಗೆ ವಿಜ್ಞಾನ ವಿಭಾಗದಿಂದ 49 ಹಾಗೂ ವಾಣಿಜ್ಯ ವಿಭಾಗದಿಂದ 20 ವಿದ್ಯಾರ್ಥಿಗಳು ಸೇರಿ ಒಟ್ಟು 69 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆ ಪೈಕಿ 19 ಜನ ವಿದ್ಯಾರ್ಥಿಗಳು ಡಿಸ್ಟಿಂಕಶನ್‌ನಲ್ಲಿ ಹಾಗೂ 38 ಜನ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 

ವಿಜ್ಞಾನ ವಿಭಾಗದ ದಾನೇಶ್ವರಿ ಠಕ್ಕನ್ನವರ 568(ಶೇ 94.66), ಗುರುಬಾಯಿ ಮಠಪತಿ 561(ಶೇ 93.5), ಕುಶಾಲಿ ಬಂಕಿ 555(ಶೇ 92.5), ಗುರುಲಿಂಗ ಹಳ್ಳೂರ 549(ಶೇ 91.5), ಸುನಿತಾ ಮಠಪತಿ 542 (ಶೇ90.33), ಪ್ರಜ್ವಲ್ ಕೋಲೂರ 541(ಶೇ 90.16) ಹಾಗೂ ವಾಣಿಜ್ಯ ವಿಭಾಗದ ಕೀರ್ತನಾ ತೇರದಾಳ 575(ಶೇ 95.83), ಸಂಗೀತಾ ಪಾಟೀಲ 572(ಶೇ 95.33), ಮೋಹಿತಕುಮಾರ ಕಮವಾಟ 540(ಶೇ 90.00) ಉತ್ತಮ ಸಾಧನೆ ಮಾಡಿದ್ದಾರೆ. 

ಗಣಿತ ವಿಷಯಕ್ಕೆ ಒಬ್ಬರು 100, ಮೂವರು 98 ಅಂಕ, ಭೌತಶಾಸ್ತ್ರಕ್ಕೆ ಒಬ್ಬರು 98, ಒಬ್ಬರು 97 ಅಂಕ, ಜೀವಶಾಸ್ತ್ರಕ್ಕೆ ಇಬ್ಬರು 97 ಅಂಕ, ಲೆಕ್ಕಶಾಸ್ತ್ರಕ್ಕೆ ಒಬ್ಬರು 100, ಒಬ್ಬರು 98, ಇಬ್ಬರು 97, ಅರ್ಥಶಾಸ್ತ್ರಕ್ಕೆ ಒಬ್ಬರು 100, ಒಬ್ಬರು 99, ವ್ಯವಹಾರ ಅಧ್ಯಯನಕ್ಕೆ ಇಬ್ಬರು 98, ಇಬ್ಬರು 97 ಹಾಗೂ ಕನ್ನಡಕ್ಕೆ ಒಬ್ಬರು 100, ನಾಲ್ವರು 98 ಅಂಕ ಗಳಿಸಿ ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ. 

ಅತ್ಯುತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಅಧ್ಯಕ್ಷ ಡಾ. ಗೀರೀಶ ಕಡ್ಡಿ, ಆಡಳಿತಾಧಿಕಾರಿ ಪ್ರೊ. ಬಸವರಾಜ ಕಡ್ಡಿ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ದಾನೇಶ್ವರಿ ಠಕ್ಕನ್ನವರ 568(ಶೇ 94.66) ವಿಜ್ಞಾನ ವಿಭಾಗ 

ಗುರುಬಾಯಿ ಮಠಪತಿ 561(ಶೇ 93.5) ವಿಜ್ಞಾನ ವಿಭಾಗ 

 ಕುಶಾಲಿ ಬಂಕಿ 555 (ಶೇ 92.5)  

 ಕೀರ್ತನಾ ತೇರದಾಳ 575 (ಶೇ 95.83) ವಾಣಿಜ್ಯ ವಿಭಾಗ 


ಸುದ್ದಿ ಓದಿ