ಅಥಣಿ

ರಾಜ್ಯದಲ್ಲಿಯೂ ಒಳ ಮೀಸಲಾತಿ ಜಾರಿಗೊಳಿಸಲು ಮನವಿ

ರಾಜ್ಯದಲ್ಲಿಯೂ ಒಳ ಮೀಸಲಾತಿ ಜಾರಿಗೊಳಿಸಲು ಮನವಿ

ಅಥಣಿ 14:  ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿಯೂ ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಅಥಣಿ ತಾಲೂಕಾ ಮಾದಿಗ ಸಂಘಟನೆಗಳ ಒಕ್ಕೂಟದ ರಾವಸಾಹೇಬ ಐಹೊಳೆ ತಹಶಿಲ್ದಾರರ ಮೂಲಕ  ಸಿಎಂ ಸಿದ್ಧ ರಾಮಯ್ಯನವರಿಗೆ ಮನವಿ ಸಲ್ಲಿಸಿ ಮಿನಿ ವಿಧಾನ ಸೌಧ ಆವರಣದಲ್ಲಿ ಮಾತನಾಡುತ್ತಿದ್ದರು. ಕಳೆದ 30 ವರ್ಷಗಳಿಂದ ರಾಜ್ಯದ ವಿವಿಧ ಮಾದಿಗ ಸಂಘಟನೆಗಳು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಜನಾಂದೋಲನ, ಬೀದಿ ಹೋರಾಟ, ಕಾನೂನಾತ್ಮಕ ಹೋರಾಟ ಜೊತೆಗೆ ಆಡಳಿತ ವ್ಯವಸ್ಥೆಯ ಮೇಲೆ ಒತ್ತಡ ತರುವ ಪ್ರಯತ್ನ ಕೂಡ ಮಾಡಲಾಯಿತು ಎಂದ ಅವರು ಇವುಗಳ ಪರಿಣಾಮ ದೇಶದ ಸರ್ವೋಚ್ಚ ನ್ಯಾಯಾಲಯದ 7 ಜನ ನ್ಯಾಯಮೂರ್ತಿಗಳು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ದೇಶದಲ್ಲಿ ತಕ್ಷಣದಿಂದ ಒಳ ಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಮಹತ್ವದ ಆದೇಶ ನೀಡಿದ್ದು, ತಕ್ಷಣ ಸಿ.ಎಮ್‌.ಸಿದ್ಧರಾಮಯ್ಯ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಮಾದಿಗ ಹೋರಾಟ ಒಕ್ಕೂಟದ ಶಂಕರ ಪೂಜೇರಿ ಮಾತನಾಡಿ, ದೇಶದಲ್ಲಿ 101 ಪರಿಶಿಷ್ಠ ಜಾತಿಗಳಲ್ಲಿ ಮಾದಿಗ ಸಮುದಾಯ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರ ಹಿಂದುಳಿದ ಪರಿಣಾಮ ತಕ್ಷಣ ಒಳ ಮೀಸಲಾತಿಯನ್ನು ಜಾರಿಗಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ ಅವರು ಒಂದು ವೇಳೆ ರಾಜ್ಯ ಸರಕಾರ ಒಳ ಮೀಸಲಾತಿ ಜಾರಿಗೊಳಿಸದೇ ಹೋದಲ್ಲಿ   ಮಾದಿಗ  ಸಮಾಜ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.        

ಉಪಸ್ಥಿತರಿದ್ದ ಧುರೀಣರಾದ ಸಿದ್ಧಾರ್ಥ ಸಿಂಗೆ, ನ್ಯಾಯವಾದಿ ಪ್ರಮೋದ ಹಿರೇಮನಿ ಮತ್ತು ಕುಮಾರ ಗಸ್ತಿ ಮಾತನಾಡಿದರು, ಹಣಮಂತ ಅರ್ಧಾವೂರ್, ಸುನೀತಾ ಐಹೊಳೆ, ರಾಜು ರಾಜಂಗಳೆ, ಪರಶುರಾಮ ಅವಳೆ, ಸುಕುಮಾರ ಮೋಳೆಕರ, ಪ್ರಕಾಶ ಹೆಗ್ಗಣ್ಣವರ, ಆದರ್ಶ ಗಸ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ರಾಜ್ಯ ಸರಕಾರವನ್ನು ಆಗ್ರಹಿಸಿದರು. ತಹಶೀಲ್ದಾರ ಜಗದೀಶ ಮೀನಾ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. 


ಸುದ್ದಿ ಓದಿ