ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮನವಿ

ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಬಳ್ಳಾರಿ 18: ಹೊಸಪೇಟೆ-ಕೊಟ್ಟೂರು ಮಾರ್ಗದಲ್ಲಿ ತ್ವರಿತವಾಗಿ ಪ್ಯಾಸಿಂಜರ್ ರೈಲು ಆರಂಭಿಸುವ ನಿಟ್ಟಿನಲ್ಲಿ, ಕೂಡಲೇ ಜಿಲ್ಲಾಧಿಕಾರಿಗಳಿಂದ ರೈಲ್ವೇ ಲೆವೆಲ್ ಕ್ರಾಸಿಂಗ್ಗಳ ಬಗ್ಗೆ ಸ್ಥಳ ಪರಿಶಿಲಿಸಿ ಕಾಮಗಾರಿ ಆರಂಭಿಸಲು ಜಿಲ್ಲಾಧಿಕಾರಿಗಳು ರೈಲ್ವೇ ಇಲಾಖೆಗೆ ಅನುಮತಿ ನೀಡುವಂತೆ ಆಗ್ರಹಿಸಿ ವೈಕುಂಠ ಅತಿಥಿ ಗೃಹದಲ್ಲಿ ನೂತನ ಲೋಕಸಭಾ ಸದಸ್ಯರಾದ ವಿ.ಎಸ್.ಉಗ್ರಪ್ಪ ಅಭಿನಂದಿಸಿ ವಿಜಯನಗರ ರೈಲ್ವೇ ಅಭಿವೃದ್ದಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 

ಈ ಮಾರ್ಗದಲ್ಲಿ ಬರುವ ವ್ಯಾಸ ಕಾಲೋನಿಯಿಂದ ಕೊಟ್ಟೂರು ವರೆಗೆ ಒಟ್ಟು 29 ಮಾನವ ರಹಿತ ರೈಲ್ವೇ ಲೆವೆಲ್ ಕ್ರಾಸಿಂಗ್ಗಳಿವೆ ಅವುಗಳ ಪೈಕಿ ಕಡಿಮೆ ಬಳಕೆಯಲ್ಲಿರುವ 6 ಲೆವೆಲ್ ಕ್ರಾಸಿಂಗ್ಗಳನ್ನು ಶಾಶ್ವತವಾಗಿ ಮುಚ್ಚಲಾಗುವುದು. 19ಗೇಟ್ಗಳನ್ನು ಹತ್ತಿರ ಗೇಟ್ಗಳೊಂದಿಗೆ ಸಂಪರ್ಕಗೊಳಿಸಿ ವಿಲೀನಗೊಳಿಸಲಾಗುವುದು. 4ಗೇಟುಗಳಿಗೆ ಸೀಮಿತ ಎತ್ತರದ ಅಂಡರ್ ಪಾಸ್ ನಿಮರ್ಿಸಲಾಗುವುದು. ಸದರಿ ಪ್ರಸ್ತಾವನೆಯನ್ನು ರೈಲ್ವೇ ಇಲಾಖೆಯು ಜುಲೈ ತಿಂಗಳಲ್ಲೇ ಜಿಲ್ಲಾಧಿಕಾರಿಗಳ ಒಪ್ಪಿಗೆಗಾಗಿ ಕಳುಹಿಸಲಾಗಿದೆ. ರೈಲ್ವೇ ಕ್ರಾಸಿಂಗ್ಗಳಲ್ಲಿ ಅಫಘಾತಗಳು ಹೆಚ್ಚಾಗಿ ಜೀವಹಾನಿಯಾಗುತ್ತದೆ. ಅದನ್ನು ತಪ್ಪಿಸುವ ಉದ್ದೇಶದಿಂದ ಲೆವೆಲ್ ಕ್ರಾಸಿಂಗ್ಗಳ ಕಾಮಗಾರಿ ಪೂರ್ಣಗೊಂಡ ನಂತರವೇ ರೈಲು ಓಡಿಸಲು ತೀಮರ್ಾನಿಸಲಾಗಿದೆ. ಜಿಲ್ಲಾಧಿಕಾರಿಗಳು ಅನುಮತಿ ನಿಡಿದ 4 ತಿಂಗಳೊಳಗಾಗಿ ಎಲ್ಲಾ ರೈಲು ಗೇಟುಗಳ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು, ನಂತರ ರೈಲ್ವೇ ಸುರಕ್ಷತಾ ಆಯುಕ್ತರು ಮಾರ್ಗಪರಿಶೀಲಿಸಿ ಪ್ರಯಾಣಿಕರ ರೈಲು ಆರಂಭಕ್ಕೆ ದಿನಾಂಕ ನಿಗದಿಪಡಿಸುವರು.  

ಬೇಡಿಕೆಗೆ ಸ್ಪಂಧಿಸಿದ ಲೋಕಸಭಾ ಸದಸ್ಯರು ಬಳ್ಳಾರಿಯಲ್ಲಿ ದಿ. 19ರ ಸೋಮವಾರ ನಡೆಯಲಿರುವ ಕೆ.ಡಿ.ಪಿ. ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅನುಮತಿ ಕೊಡಿಸುವುದಾಗಿ ಹೇಳಿದರು. 

ಇದೇ ಸಂದರ್ಭದಲ್ಲಿ ಬಳ್ಳಾರಿ, ರಾಯದುರ್ಗ, ಪಾವಗಡ, ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಲಾಯಿತು. ಈ ಮಾರ್ಗವು ಆರಂಭವಾದರೆ ಗದಗ, ವಿಜಾಪುರ, ಕೊಪ್ಪಳ, ಹೊಸಪೇಟೆ, ಬಳ್ಳಾರಿಯಿಂದ ಬೆಂಗಳೂರಿಗೆ ಅತ್ಯಂತ ಕಡಿಮೆ ಅಂತರದ ಮಾರ್ಗವಾಗುತ್ತದೆ. ಬೆಂಗಳೂರಿಗೆ ತಲುಪಲು ಗುಂತಕಲ್ಲು-ಅನಂತಪುರ ಮಾರ್ಗಕ್ಕಿಂತ ಈ ಮಾರ್ಗದ ಅಂತರ 80ಕಿ.ಮಿ.ನಷ್ಟು ಕಡಿಮೆಯಾಗಿ ಹಣ ಮತ್ತು ಸಮಯದ ಮಿತವ್ಯಯವಾಗುತ್ತದೆ. 

ಸುದ್ದಿ ಓದಿ