ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲು ಮನವಿ
ಲೋಕದರ್ಶನ ವರದಿ
ಬಳ್ಳಾರಿ 28: ನಗರದ ಎಸ್.ಹೆಚ್.-128 ರಸ್ತೆ ಗೋನಾಳ್ ಹಳ್ಳದ ಸೇತುವೆಯನ್ನು ಎತ್ತರ ಮಾಡಲು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು, ನಗರದ ರೂಪನಗುಡಿ ರಸ್ತೆಯಲ್ಲಿರುವಂತ ಹಳ್ಳ ಮೇಲ್ಸೇತುವೆಯು ಸುಮಾರು 30 ವರ್ಷಗಳ ಹಿಂದೆ ನಿಮರ್ಾಣವಾಗಿದ್ದು. ಹಳ್ಳದ ಮೇಲ್ಸೇತುವೆಯನ್ನು ಯಾವ ರೀತಿಯಾಗಿಯೂ ದುರಸ್ತಿ ಮಾಡದೇ ಇರುವುದರಿಂದ ಸಾರ್ವಜನಿಕರಿಗೆ ಅಡ್ಡಾಡುವುದಕ್ಕೆ ಬಹಳಷ್ಟು ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೇ ಮಳೆಗಾಲದಲ್ಲಿ ಹಳ್ಳ ಬಂದಾಗ ಕನಿಷ್ಠ 10 ಗಂಟೆಗಳಷ್ಟು ಎರಡು ಕಡೆ ವಾಹನ ನಿಲುಗಡೆಯಿಂದ ಎಲ್ಲರಿಗೂ ಸಮಯ ವ್ಯರ್ಥವಾಗುತ್ತದೆ. ಆದ್ದರಿಂದ ಸದರಿ ಸೇತುವೆಯನ್ನು ಎತ್ತರ ಮಾಡಿ ಹಳ್ಳದ ನೀರು ಸರಾಗವಾಗಿ ಹರಿಯುವುದಕ್ಕೆ ಹಾಗೂ ಸಾರ್ವಜನಿಕರಿಗೆ ಅಡ್ಡಾಡುವುದಕ್ಕೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.
ಸೇತುವೆ ಎತ್ತರ ಕಾಮಗಾರಿ 60 ಅಡಿ ರಸ್ತೆ ಅಗಲೀಕರಣ ಕಾಮಗಾರಿ ಬಗ್ಗೆ ಸುತ್ತ-ಮುತ್ತಲಿನ ಸ್ಥಳಿಯರೆಲ್ಲರೂ ಸೇರಿ 2019ನೇ ಮಾಚರ್್ 11 ಸೋಮವಾರದಂದು ರಸ್ತೆ ತಡೆ ಮುಷ್ಕರವನ್ನು ಹಳ್ಳದ ಹತ್ತಿರ ಮಾಡಲು ನಿರ್ಧರಿಸಿದರು. ಆದರೆ ಈ ಮುಷ್ಕರ ಹಿಂಪಡೆಯಬೇಕಾದರೆ ತಮ್ಮ ಇಲಾಖೆ, ಜಿಲ್ಲಾಡಳಿತದಿಂದ ಒಬ್ಬ ಉನ್ನತಾಧಿಕಾರಿ (ಡಿಸಿ ಅಥವಾ ಎಡಿಸಿ ಅಥವಾ ಎಸಿ), ಪಾಲಿಕೆ ಆಯುಕ್ತರು ಹಾಗೂ ಆ ಪರಿಧಿಯಲ್ಲಿ ಬರುವಂತಹ ಪೊಲೀಸ್ ಠಾಣಾಧಿಕಾರಿಗಳು ಜೊತೆಗೆ ಸ್ಥಳ ಭೇಟಿ ಪರಿಶೀಲನೆ ಮಾಡಿ, ಈ ಕಾಮಗಾರಿ ಕೈಗೊಳ್ಳುಬೇಕು ಸ್ಪಷ್ಟವಾದ ಸಮಾಧಾನ ಬಂದಲ್ಲಿ ಮುಷ್ಕರ ಹಿಂಪಡೆಯುತ್ತೇವೆ ಎಂದರು