ರೇಲ್ವೆ ಸೌಲಭ್ಯಕ್ಕೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿ
ಬಳ್ಳಾರಿ 26:ಕೇಂದ್ರ ರೈಲ್ವೆ ಸಚಿವರಾದ ಶ್ರೀ ಪಿಯುಸ್ ಗೋಯಲ್ರವರು ವಿಶ್ವ ವಿಖ್ಯಾತ ಹಂಪಿ ಪ್ರದೇಶಗಳ ವೀಕ್ಷಣೆ ಮಾಡಿ ಇಂದು ಉದಯ 11.00 ಗಂಟೆಗೆ ಮೈಸೂರಿಗೆ ಹೋಗುವ ಸಂದರ್ಭದಲ್ಲಿ ತೋರಣಗಲ್ಲು ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಕನರ್ಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷರಾದ ಶ್ರೀ ಕೆ.ಎಂ. ಮಹೇಶ್ವರಸ್ವಾಮಿಯವರ ನೇತೃತ್ವದಲ್ಲಿ ಸಮಿತಿಯ ನಿಯೋಗವು ಅವರನ್ನು ಭೇಟಿ ಮಾಡಿ, ಈ ಭಾಗದ ರೈಲ್ವೆ ಸೌಲಭ್ಯಗಳ ಬಗ್ಗೆ ವಿವರವಾಗಿ ಚಚರ್ಿಸಿತು. ನಿಯೋಗದಲ್ಲಿ ಕ್ರಿಯಾ ಸಮಿತಿ ಸದಸ್ಯರಾದ ಶ್ರೀ ಕೋಳೂರು ಚಂದ್ರಶೇಖರಗೌಡ್, ಶ್ರೀ.ಹೆಚ್.ಕೆ. ಗೌರಿ ಶಂಕರ, ಶ್ರೀ. ದಕ್ಷಿಣ ಮೂತರ್ಿ ಧರ್ಮಸಾಗರ ಶ್ರೀ ಕೆ.ಎಂ. ಕೊಟ್ರೇಶ್ ಹಾಗೂ ಶ್ರೀ ಬಸವರಾಜ ಇವರುಗಳು ನಿಯೋಗದಲ್ಲಿ ಭಾಗವಹಿಸಿದ್ದರು.
ಬಹುದಿನದ ಬೇಡಿಕೆಯಾದ ಕೊಪ್ಪಳ ದಿಂದ ಬಳ್ಳಾರಿ - ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ಹಗಲಿನ ಇಂಟರ್ ಸಿಟಿ ರೈಲ್ವನ್ನು ಈ ಸಾಲಿನ ವರ್ಷದಲ್ಲಿ ಪ್ರಾರಂಭಿಸಬೇಕೆಂದು ಒತ್ತಾಯಿಸಲಾಯಿತು. ಚಚರ್ೆಯ ವೇಳೆ ಕೊಪ್ಪಳ ದಿಂದ ಆರಂಭಿಸಲು ಸಾಧ್ಯವಾಗದಿದ್ದಲ್ಲಿ ಜಂಕ್ಷನ್ ಸ್ಥಳವಾದ ಗದಗ ದಿಂದ ಆರಂಭಿಸಲು ಕೋರಲಾಯಿತು. ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಸಮಸ್ಯೆ ಇದ್ದಲ್ಲಿ ಈ ರೈಲುನ್ನು ಮೈಸೂರಿನವರೆಗೆ ವಿಸ್ತರಿಸಲು ವಿನಂತಿಸಲಾಯಿತು.
ಈಗಾಗಲೇ ಹೊಸಪೇಟೆಯಿಂದ ಹರಿಹರದ ವರೆಗೆ ಬ್ರಾಡ್ಗೇಜ್ ರೈಲ್ವೆ ಮಾರ್ಗವಿದ್ದರೂ ಕೇವಲ ಕೊಟ್ಟೂರಿನಿಂದ ಹರಿಹರದ ವರೆಗೆ ಮಾತ್ರ ರೈಲು ಸಂಚಾರವಾಗುತ್ತಿದೆ. ಕೂಡಲೇ ಈ ಸಾಲಿನ ವರ್ಷದಲ್ಲಿ ಹೊಸಪೇಟೆಯಿಂದ ಹರಿಹರದ ವರೆಗೆ ರೈಲಿನ ಸಂಚರ ಆರಂಭಿಸಲು ರೈಲ್ವೆ ಮಂತ್ರಿಗಳನ್ನು ಕೋರಲಾಯಿತು.
ರೈಲ್ವೆ ಮಂತ್ರಿಗಳು ವಿಶ್ವವಿಖ್ಯಾತ ಪಾರಂಪರಿಕ ತಾಣಗಳಾದ ಹಂಪಿ ಹಾಗೂ ಮೈಸೂರು ಪ್ರದೇಶಗಳನ್ನು ಸಂದಶರ್ಿಸುತ್ತಿರುವುದು ಸ್ವಾಗತರ್ಹ ವಿಷಯವಾಗಿದ್ದು, ಈ ಸ್ಥಳಗಳ ಸಂರ್ಪಕ ಕಲ್ಪಿಸಲು ರೈಲ್ವೆ ಸೌಲಭ್ಯ ಇಲ್ಲದಿರುವುದರನ್ನು ಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಪ್ರವಾಸಿಗರ ಸೌಲಭ್ಯಕ್ಕಾಗಿ ಮೈಸೂರು, ಹಾಸನ, ಚಿತ್ರದುರ್ಗ, ಹೊಸಪೇಟೆ, ಗದಗ, ಬಾಗಲಕೋಟೆ, ಬಿಜಾಪುರ ಇವೆಲ್ಲಾವು ಪ್ರಸಿದ್ಧ ಪ್ರವಾಸಿ ತಾಣಗಳಾಗಿದ್ದು, ಈ ಮಾರ್ಗಗಳ ಮೂಲಕ ಜನತೆ ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ದಿಂದ ಚಿತ್ರದುರ್ಗ, ಬಳ್ಳಾರಿ, ಗದಗ, ಬಿಜಾಪುರ ಮಾರ್ಗವಾಗಿ ಸೊಲ್ಲಾಪುರದವರೆಗೆ ನೂತನ ಪ್ರವಾಸಿ ರೈಲುನ್ನು ಈ ವರ್ಷದಿಂದ ಆರಂಭಿಸಲು ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.
ಗುಂತಕಲ್ - ಚಿಕ್ಕಜಾಜೂರು ಪ್ಯಾಸಿಂಜರ್ ರೈಲು ಪ್ರತಿನಿತ್ಯ ಸಂಚರಿಸುತ್ತಿದ್ದು, ಈ ರೈಲುನ್ನು ಮೈಸೂರು ವರೆಗೆ ವಿಸ್ತರಣೆ ಮಾಡಿದಲ್ಲಿ ಬಡಜನತೆಗೆ ಅನುಕೂಲವಾಗುವುದಲ್ಲದೆ ಧರ್ಮಸ್ಥಳಕ್ಕೆ ಹಾಗೂ ಹಾಸನ ಮತ್ತು ಮೈಸೂರಿಗೆ ಹೋಗಲು ಹಗಲಿನಲ್ಲಿ ಈ ರೈಲು ತುಂಬ ಅನುಕೂಲವಾಗುದೆಂದು ಮಂತ್ರಿಗಳಿಗೆ ವಿನಂತಿಸಲಾಯಿತು.
ಬಳ್ಳಾರಿ ಜಿಲ್ಲೆಗೆ ಆಗಮಿಸಿದ ರೈಲ್ವೆ ಮಂತ್ರಿ ಶ್ರೀ ಪಿಯುಸ್ ಗೋಯಲ್ರವರಿಗೆ ಜಿಲ್ಲೆಯ ಜನತೆ ಪರವಾಗಿ ಸನ್ಮಾನಿಸಲಾಗಿದ್ದು, ಜನತೆಯ ರೈಲ್ವೆ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ವಿನಂತಿಸಲಾಯಿತು.