ಯಲ್ಲಮ್ಮನ ದರ್ಶನ ಪಡೆದ ಖ್ಯಾತ ಮರಾಠಿ ಕಾದಂಬರಿಕಾರ ವಿಶ್ವಾಸ ಪಾಟೀಲ
ಲೋಕದರ್ಶನ ವರದಿ
ಉಗರಗೋಳ 12 : ಸಮಿಪದ ಯಲ್ಲಮ್ಮನ ಗುಡ್ಡಕ್ಕೆ ಮಹಾರಾಷ್ಟ್ರದ ಮರಾಠಿ ಸಾಹಿತ್ಯ ಲೋಕದ ಖ್ಯಾತ ಪ್ರಸಿದ್ದ ಕಾದಂಬರಿಕಾರ ವಿಶ್ವಾಸ್ ಪಾಟೀಲ ಗುರುವಾರ ರಂದು ಕುಟುಂಬ ಸಮೇತ ಭೇಟಿ ನೀಡಿ ಶ್ರೀದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡರು.
ದೇವಸ್ಥಾನ ವತಿಯಿಂದ ಉಪಕಾರ್ಯಧರ್ಶಿ ನಾಗರತ್ನಾ ಚೋಳಿನ ಅವರು ಕಾದಂಬರಿಕಾರರಾದ ವಿಶ್ವಾಸ್ ಪಾಟೀಲ ಕುಟುಂಬವನ್ನು ಶಾಲೂಹೊದಿಸಿ ಸತ್ಕರಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಪಾಟೀಲ ಅವರು ಶತಮಾನಗಳ ಇತಿಹಾಸವುಳ್ಳ ಯಲ್ಲಮ್ಮನ ಸನ್ನಿಧಿಗೆ ಆಗಮಿಸಿ, ದೇವಿ ದರ್ಶನ ಪಡೆದ ನಂತರವೇ ಯಾವುದೇ ಹೊಸ ಕೃತಿ ರಚಿಸುತ್ತೇನೆ.
ಈವರೆಗೆ 25ಕ್ಕೂ ಅಧಿಕ ಕೃತಿ ಬರೆದಿದ್ದೇನೆ. ವಿವಿಧ ಕಲಾ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದೇನೆ. ನಾನು ರಚಿಸಿದ್ದ ಹಲವು ಕೃತಿಗಳ ವಿಷಯವಸ್ತು ಆಧರಿಸಿಯೇ ಹಲವು ಚಲನಚಿತ್ರಗಳಾಗಿವೆ ಎಂದ ಅವರು.
ಯಲ್ಲಮ್ಮ ದೇವಿ ಎಲ್ಲರ ಸಂಕಷ್ಟ ನೀಗಿಸುವ ತಾಯಿ. ಈ ಪವಿತ್ರ ಧಾರ್ಮಿಕ ಸ್ಥಳಕ್ಕೆ ಬರುವುದಕ್ಕೆ ಬಹಳ ಖುಷಿಯಾಗುತ್ತದೆ. ಮುಂದಿನ ದಿನಗಳಲ್ಲೂ ಸಾಹಿತ್ಯ ಕೃಷಿಯಲ್ಲಿ ಇನ್ನಷ್ಟು, ಮೊಗೆದಷ್ಟು ಸಾಧನೆ ಮಾಡುವ ಆಸೆ ಇದೆ ಎಂದರು.
ದೇವಸ್ಥಾನ ಉಪಕಾರ್ಯಧರ್ಶಿ ನಾಗರತ್ನಾ ಚೋಳಿನ, ಚಂದ್ರಶೇನಾ ವಿಶ್ವಾಸ್ ಪಾಟೀಲ, ಬೆಳಗಾವಿಯ ಸಾಹಿತಿಗಳು ಹಾಗೂ ಮಾಜಿ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಶೀತಲ ಕಡಟ್ಟಿ, ಅಲ್ಲಮಪ್ರಭು ಪ್ರಭುನವರ, ಆರ್ ಎಸ್ ಸವದತ್ತಿ, ಶಿವಾನಂದ ನೇಸರಗಿ, ಮಂಜುನಾಥಗೌಡ ಸಂಧಿಮನಿ, ಬಸನಗೌಡ ಶೇಟ್ಟಿನಗೌಡ್ರ, ಪಂಡಿತ ಯಡೂರಯ್ಯ, ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.