ಹರೀಶ್ ದ್ವಿವೇದಿ ಅವರ ಬೆಳಗಾವಿ ಪ್ರವಾಸ
.
ಬೆಳಗಾವಿ 13: ಬೆಂಗಳೂರಿನಿಂದ ವಿಮಾನದ ಮೂಲಕ ರವಿವಾರ ಬೆಳಿಗ್ಗೆ 9.05 ಗಂಟೆಗೆ ಬೆಳಗಾವಿಯ (ಸಾಂಬ್ರಾ) ವಿಮಾನ ನಿಲ್ದಾಣಕ್ಕೆ ಆಗಮಿಸುವರು ಬೆಳಿಗ್ಗೆ 10:30 ಗಂಟೆಗೆ ಖಾಸಗಿ ಹೋಟೆಲಿನಲ್ಲಿ ನಡೆಯುವ ಬೆಳಗಾವಿ ವಿಭಾಗ ಮಟ್ಟದ ಸಂಘಟನಾತ್ಮಕ ಸಭೆ, ಕೋರ್ ಕಮಿಟಿ ಸಭೆಗಳಲ್ಲಿ ಭಾಗವಹಿಸುವರು ನಂತರ ಮಧ್ಯಾಹ್ನ 1:30 ಗಂಟೆಗೆ ಬೆಳಗಾವಿಯಿಂದ ಹುಬ್ಬಳ್ಳಿಗೆ ತೆರಳುವರು ನಂತರ 3:00 ಗಂಟೆಗೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಧಾರವಾಡ ವಿಭಾಗ ಮಟ್ಟದ ಸಂಘಟನಾತ್ಮಕ ಸಭೆಗಳಲ್ಲಿ ಭಾಗವಹಿಸುವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.