ಕೆಎಲ್ಇ ಸಂಸ್ಥೆಯ 111ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ
ಲೋಕದರ್ಶನ ವರದಿ
ಬೆಳಗಾವಿ 13 : ಕೆಎಲ್ಇ ಸಂಸ್ಥೆಯು ತನ್ನ 111ನೇ ಸಂಸ್ಥಾಪನಾ ದಿನಾಚರಣೆಯನ್ನು ಬೆಳಗಾವಿಯ ಜೆಎನ್ಎಂಸಿ ಆವರಣದಲ್ಲಿರುವ ಕೆಎಲ್ಇ ಶತಮಾನೋತ್ಸವ ಸಭಾಗೃಹದಲ್ಲಿ ಆಚರಿಸಿತು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಒಂದು ಶತಮಾನಕ್ಕೂ ಹೆಚ್ಚುಕಾಲ ಸಲ್ಲಿಸಿದ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಕಾರ್ಯಕ್ರಮವು ಕೆಎಲ್ಇ ಸಂಗೀತ ಶಾಲೆಯ ಬೋಧಕರು ಮತ್ತು ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಐಐಟಿ ಧಾರವಾಡದ ನಿರ್ದೇಶಕ ಹಾಗೂ ಕೆಎಲ್ಇ ಬಿವಿಬಿ ಎಂಜಿನಿಯರಿಂಗ್ಕಾಲೇಜಿನ ಹಳೆಯ ವಿದ್ಯಾರ್ಥಿ ಪ್ರೊ. ವೆಂಕಟಪ್ಪಯ್ಯ ಆರ್. ದೇಸಾಯಿ ಅವರು ಕೆಎಲ್ಇ ಸಂಸ್ಥೆಯೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಮೆಲುಕು ಹಾಕಿದರು.
ತಮ್ಮ ಶೈಕ್ಷಣಿಕ ಮತ್ತು ವೈಯಕ್ತಿಕ ಪಯಣವನ್ನು ರೂಪಿಸಿದ ಗುರುಗಳ ಮಾರ್ಗದರ್ಶನವನ್ನು ಸ್ಮರಿಸಿದರು. ಶಿಕ್ಷಣವು ಸಬಲೀಕರಣ ಮತ್ತು ಸಾಮಾಜಿಕ ಪರಿವರ್ತನೆಯ ಸಾಧನ ಎಂದು ಹೇಳಿದ ಅವರು, ಡಾ. ಪ್ರಭಾಕರ ಬಿ. ಕೋರೆ ಅವರ ಪದ್ಮಶ್ರೀ ಗೌರವ ಮತ್ತು ದೂರದರ್ಶಿ ನಾಯಕತ್ವವನ್ನು ಶ್ಲಾಘಿಸಿದರು. ಭಾರತದ ಶೈಕ್ಷಣಿಕ ಪರಂಪರೆಯನ್ನು ಹೊಸ ಪ್ರವೃತ್ತಿಗಳೊಂದಿಗೆ ಬೆಸೆಯುವ ಮಹತ್ವವನ್ನು ಒತ್ತಿ ಹೇಳಿದರು.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀಅಮಿತಪಿ. ಕೋರೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಸಂಸ್ಥೆಯ ಪಯಣವನ್ನು ವಿವರಿಸಿದರು. 1916ರಲ್ಲಿ ಏಳು ದೂರದರ್ಶಿ ಶಿಕ್ಷಕರಿಂದ ಆರಂಭವಾದ ಸಂಸ್ಥೆ ಇಂದು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 300ಕ್ಕೂಹೆಚ್ಚುಸಂಸ್ಥೆಗಳಜಾಲವಾಗಿ ಬೆಳೆದಿದೆ ಎಂದುಹೇಳಿದರು. ಭವಿಷ್ಯಕ್ಕಾಗಿಐದುಆದ್ಯತೆಗಳನ್ನುಅವರು ವಿವರಿಸಿದರು. ಶೈಕ್ಷಣಿಕ ಶ್ರೇಷ್ಠತೆ, ಸಂಶೋ ಧನೆ ಮತ್ತು ನಾವೀನ್ಯತೆ, ಎಲ್ಲರಿಗೂ ದೊರೆಯುವ ಆರೋಗ್ಯ ಸೇವೆ, ಸುಸ್ಥಿರತೆ ಮತ್ತು ಸಾಮಾಜಿಕ ಜವಾಬ್ದಾರಿಹಾಗೂ ಸಾಂಸ್ಥಿಕ ಏಕತೆ ಇವೇ ಆ ಐದು ಆದ್ಯತೆಗಳು.
ಕೆಎಲ್ಇ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಎಸ್. ಕೌಜಲಗಿ ಅಧ್ಯಕ್ಷೀಯ ಭಾಷಣಮಾಡಿ ಸಪ್ತಋಷಿಗಳು ಕಟ್ಟಿದ ಸಂಸ್ಥೆಯು ಜಾಗತಿಕವಾಗಿ ವಿಸ್ತರಿಸಿದೆ. ಅವರತ್ಯಾಗ ಬಹುದೊಡ್ಡದು ಸತ್ಯಸೇವೆ ಪ್ರೇಮಸ್ವಾರ್ಥತ್ಯಾಗದಿಂದ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.ಅವರಸ್ಮರಣೆ ನನ್ನಪಾಲಿಗೆ ಉದಯವಿದ್ದ ಹಾಗೆ. ಅವರು ನೀಡಿದ ಶಿಕ್ಷಣ ದಾಸೋಹ ಶತಶತಮಾನಗಳ ಆದರೂ ಈ ಭೂಮಿಮೇಲೆ ಬೆಳಗಲಿದೆ ಎಂದು ಹೇಳಿದರು. ಕೆಎಲ್ಇಸಂಸ್ಥೆಯ ಕಾರ್ಯ ದರ್ಶಿ ಡಾ. ಸುನೀಲ ಜಲಾಲಪುರೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕೆಎಲ್ಇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಪ್ರಭಾಕರ ಕೋರೆ, ಆಡಳಿತಮಂಡಳಿ ಸದಸ್ಯರು, ಆಜೀವ ಸದಸ್ಯರು, ಸಂಸ್ಥೆಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆ ಜೀವ ಸದಸ್ಯಮಂಡಳಿಯ ಕಾರ್ಯಾಧ್ಯಕ್ಷರಾದ ಶೀತಲ ನಂಜಪ್ಪನವರ ಅವರು ವಂದಿಸಿದರು. ಡಾ.ಅವಿನಾಶ ಕವಿ, ಡಾ. ಮಹೇಶ ಗುರನಗೌಡರ, ಡಾ. ನೇಹಾದಢೇದ, ಡಾ. ಆದಿತ್ಯಆಚಾರ ನಿರೂಪಿಸಿದರು.