ಜಗತ್ತಿನಲ್ಲಿ ಧರ್ಮ ಮತ್ತು ಕೀರ್ತಿ ಶಾಶ್ವತ: ಅಮರಸಿದ್ಧೇಶ್ವರ ಮಹಾಸ್ವಾಮಿಗಳು
ಗೋಕಾಕ 27: ಜಗತ್ತಿನಲ್ಲಿ ಎಲ್ಲವೂ ಅಸ್ಥಿರವಾಗಿದ್ದು, ಧರ್ಮ ಮತ್ತು ಕೀರ್ತಿ ಶಾಶ್ವತವೆಂದು ಕುಂದರಗಿ-ಅಂಕಲಗಿಯ ಅಡವಿಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ನಗರದ ಶೂನ್ಯ ಸಂಪಾದನ ಮಠದಲ್ಲಿ 176ನೇ ಶಿವಾನುಭವ ಗೋಷ್ಠಿಯಲ್ಲಿ ಪಾಲ್ಗೊಂಡು ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಎಂಬ ವಿಷಯ ಕುರಿತು ಮಾತನಾಡುತ್ತ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ ಬಸವಣ್ಣನವರು ಹೇಳಿದಂತೆ ಸಂಸಾರ ಸಸಾರವಾಗುತ್ತದೆ. ಮಕ್ಕಳಿಗೆ ಬಾಲ್ಯದಿಂದಲೇ ಮಾನವೀಯ ಮೌಲ್ಯಗಳನ್ನು ಕಲಿಸಿ, ಶಿಕ್ಷಣದೊಂದಿಗೆ ಉತ್ತಮ ಮಾರ್ಗದರ್ಶನ ನೀಡಿ ಆಧ್ಯಾತ್ಮೀಕದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಿ. ಮಕ್ಕಳನ್ನೇ ಮೌಲ್ಯವಂತ ಆಸ್ತಿಯನ್ನಾಗಿ ಮಾಡಿ ಕಲ್ಯಾಣ ರಾಜ್ಯ ನಿರ್ಮಿಸುವಂತೆ ಕರೆ ನೀಡಿದರು.
ವೇದಿಕೆಯ ಮೇಲೆ ಬಸವಪ್ರಭು ದೇವರು, ಬಸನಗೌಡ ಪಾಟೀಲ, ಶೈಲಾ ಬಿದರಿ, ನೀಲಕಂಠ ತೋಟಗಿ, ಶಿವಪುತ್ರ್ಪ ಕಟ್ಟಿ, ಕಾಳಪ್ಪ ಗುರಾಣಿ ಇದ್ದರು.
ಶೈಲಾ ಕೊಕ್ಕರಿ ಸ್ವಾಗತಿಸಿ, ವಂದಿಸಿದರು.