ಧಾರವಾಡ - ಹುಬ್ಬಳ್ಳಿ

ರಂಗಾಂತರಂಗ-2025” ಬಹುಭಾಷಾ ನಾಟಕೋತ್ಸವ”ದ ನಾಲ್ಕನೇ ದಿನದ ನಾಟಕಕ್ಕೆ ಚಾಲನೆ

ರಂಗಾಂತರಂಗ-2025” ಬಹುಭಾಷಾ ನಾಟಕೋತ್ಸವ”ದ  ನಾಲ್ಕನೇ ದಿನದ ನಾಟಕಕ್ಕೆ ಚಾಲನೆ

ರಂಗಾಂತರಂಗ-2025” ಬಹುಭಾಷಾ ನಾಟಕೋತ್ಸವ”ದ  ನಾಲ್ಕನೇ ದಿನದ ನಾಟಕಕ್ಕೆ ಚಾಲನೆ  

ಧಾರವಾಡ 17 : ರಂಗಾಯಣ ಧಾರವಾಡವು ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ “ರಂಗಾಂತರಂಗ-2025” ಬಹುಭಾಷಾ ನಾಟಕೋತ್ಸವ”ದ ನಾಲ್ಕನೇ ದಿನದ ನಾಟಕಕ್ಕೆ ನಾಟಕ ನಿರ್ದೇಶಕರಾದ ಹುಲುಗಪ್ಪ ಕಟ್ಟಿಮನಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಂಗಾಯಣ ನಿರ್ದೇಶಕರಾದ ಡಾ.ರಾಜು ತಾಳಿಕೋಟಿ, ಆಡಳಿತಾಧಿಕಾರಿ ಶಶಿಕಲಾ ಹುಡೇದ ಅವರು ಉಪಸ್ಥಿತರಿದ್ದರು. ನಾಟಕ ಪೂರ್ವದಲ್ಲಿ ಧಾರವಾಡದ ಮಧುರವೇಣಿ ನೃತ್ಯಾಲಯ ವಿದ್ಯಾರ್ಥಿಗಳು ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಿದರು. ನಂತರ ಹುಲುಗಪ್ಪ ಕಟ್ಟಿಮನಿ ನಿರ್ದೇಶಿಸಿದ “ಸತ್ತವರ ನೆರಳು” ನಾಟಕವನ್ನು ರಂಗಾಯಣದ ರೆಪರ್ಟರಿ ಕಲಾವಿದರು ಪ್ರದರ್ಶಿಸಿದರು. ನಾಳೆ ಬೆಂಗಳೂರಿನ ರಂಗರಥ ಟ್ರಸ್ಟ್‌ ತಂಡದವರು “ಇದ್ದಾಗ ನಿಮ್ದು ಕದ್ದಾಗ ನಮ್ದು” ನಾಟಕವನ್ನು ಪ್ರದರ್ಶಿಸಲಿದ್ದಾರೆ. 


ಸುದ್ದಿ ಓದಿ