ಜಮಖಂಡಿ

ಅದ್ಧೂರಿಯಾಗಿ ರಂಗಪಂಚಮಿ ಆಚರಣೆ

ಅದ್ಧೂರಿಯಾಗಿ ರಂಗಪಂಚಮಿ ಆಚರಣೆ
ನಗರದ ಪೋಲೋ ಮೈದಾನದಲ್ಲಿ ಕಾಂಗ್ರೆಸ್ದಿಂದ ರಂಗೋತ್ಸವ ಜರುಗಿತು

ಲೋಕದರ್ಶನ ವರದಿ,

ಜಮಖಂಡಿ 09: ನಗರದಲ್ಲಿ ರಂಗುರಂಗಿನ ಹೋಳಿ ಹಬ್ಬಕ್ಕೆ ಕಾಂಗ್ರೆಸ್ದಿಂದ ರಂಗೋತ್ಸವ, ಬಿಜೆಪಿಯಿಂದ ರಂಗ ಕೇಸರಿ ಮೂಲಕ ಅದ್ದೂರಿಯಾಗಿ ರಂಗಪಂಚಮಿ ಆಚರಿಸಲು ಎರಡು ಪಕ್ಷದವರು ತಮ್ಮ ಮತದಾರರನ್ನು ಸೆಳೆಯಲು ಡಿಜೆಗಳನ್ನು ಹಚ್ಚುವ ಮೂಲಕ ಉಚಿತವಾಗಿ ಕಲರ್,ಕಲರ್ ಬಣ್ಣಗಳನ್ನು ನೀಡಿ. ಅದ್ದೂರಿಯಾಗಿ ರಂಗಪಂಚಮಿಯನ್ನು ಆಚರಿಸಿದರು.

ಇಲ್ಲಿನ ಜಿ.ಜಿ.ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿ ಹಾಗೂ ಹಿಂದು ಜಾಗರಣ ವೇದಿಕೆಯ ಸಹಯೋಗದಲ್ಲಿ ರಂಗ ಕೇಸರಿ ಮತ್ತು ಪೋಲೋ ಮೈದಾನದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಸಹಯೋಗದಲ್ಲಿ ರಂಗೋತ್ಸವ ಅದ್ದೂರಿಯಾಗಿ ಜರುಗಿತು. ಬೇರೆ ರಾಜ್ಯಗಳಿಂದ ಡಿಜೆಗಳನ್ನು ಕರೆತಂದು ಅವುಗಳನ್ನು ಅಳವಡಿಸಿ. ಎರಡು ಪಕ್ಷದರು ತಮ್ಮ,ತಮ್ಮ ಮತದಾರರಿಗೆ ಡಿಜೆ ಸಾಂಗಗಳನ್ನು ಹಾಕಿದರು. ಡಿಜೆ ಸಾಂಗ್ಗಳಿಗೆ ಮಹಿಳೆಯರು.ಯುವಕರು ಕುಣಿದು ಕುಪ್ಪಳಿಸಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಹಯೋಗದಲ್ಲಿ ನಡೆದ ಪೋಲೋ ಮೈದಾನದಲ್ಲಿ ಡಿಜೆ ಸಾಂಗಗಳಿಗೆ ಮಹಿಳೆಯರು. ಯುವಕರು ಕುಣಿದು ಕುಪ್ಪಳಿಸುವ ಜೊತೆಗೆ ಶಾಸಕ ಆನಂದ ನ್ಯಾಮಗೌಡ ಎಲ್ಲರ ಮಧ್ಯ ಡಿಜೆ ಸಾಂಗಗೆ ಸ್ಟೇಪ್ಸ್ ಹಾಕಿ ಯುವಕರ ಮಧ್ಯ ಕುಣಿದು ಯುವಕರನ್ನು ಹುರುಂದುಬಿಸಿದರು. ಕೆಲವಂದಿಷ್ಟು ಯುವಕರು ಶಾಸಕ ಆನಂದ ನ್ಯಾಮಗೌಡ ಮಧ್ಯ ಸೇಲ್ಪಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದರು. ರಂಗುರಂಗಿನ ಬಣ್ಣದಾಟದಲ್ಲಿ ಕಾರಂಜಿಗಳ ನೀರಿನಲ್ಲಿ ಯುವಕರು ಕೆಸರಿನಲ್ಲಿ ಬಿದ್ದು ತೆಲಾಡುವ ದೃಶ್ಯ ಸಾಮಾನ್ಯವಾಗಿತ್ತು.

ಜಿ,ಜಿ,ಹೈಸ್ಕೂಲ್ ಮೈದಾನದಲ್ಲಿ ಡಿಜೆ ಹಾಡುಗಳನ್ನು ಹಾಡಲು ಗಾಯಕರು ಆಗಮಿಸಿ. ವಿವಿಧ ಹಾಡುಗಳನ್ನು ಹಾಡುವ ಮೂಲಕ ಯುವಕರನ್ನು ಮತ್ತು ಮಹಿಳೆಯರನ್ನು ರಂಜಿಸಿದರು. ಕೊನೆಯಲ್ಲಿ ಕೆಲವಂದಿಷ್ಟು ಯುವಕರು ಗಲಾಟೆಯನ್ನು ನಡೆಸುತ್ತಿದಂತೆ ಶಹರ ಠಾಣೆಯ ಪಿಎಸ್ಐ ಬಸವರಾಜ ಕೊಣ್ಣೂರೆ ಹಾಗೂ ಸಿಬ್ಬಂದಿಗಳು ಲಾಠಿಯನ್ನು ಬೀಸುವ ಮೂಲಕ ಗಲಾಟೆ ಮಾಡುತ್ತಿದ ಯವಕರಿಗೆ ಲಾಠಿ ರುಚಿಯನ್ನು ತೋರಿಸಿದರು. ನಂತರ ಪಿಎಸ್ಐ ವೇದಿಕೆಯ ಮೇಲೆ ಬಂದು ಡಿಜೆಗಳ ಕೇಬಲ್ ಕಿತ್ತು ಹಾಕಿದ ಪ್ರಸಂಗ ನಡೆಯಿತು. 

ವಿಧಾನಸೌಭೆ ಚುನಾವಣೆ ಕಾವು ರಂಗೆರುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿಯ ಎರಡು ಪಕ್ಷದ ಕಾರ್ಯಕರ್ತರು ರಂಗುರಂಗಿನ ಆಟದಲ್ಲಿ ಭಾಗಿಯಾಗಿದ್ದರು. ಅಂತು ಇಂತು. ಚುನಾವಣೆಯ ಕಾವಿಗೆ ಎರಡು ಪಕ್ಷದವರು ತಮ್ಮ ತಮ್ಮ ಕಾರ್ಯಕರ್ತರಿಗೆ ವಿವಿಧ ಬಗ್ಗೆಯ ಬಣ್ಣವನ್ನು ನೀಡಿ. ಡಿಜೆ ಹಾಡಿಗೆ ಸ್ಟೇಪ್ಸ್ ಹಾಕುವ ಮೂಲಕ ತಮ್ಮ ಬೆಂಬಲಿಗರನ್ನು ಸೆಳೆಯುವದು ಸಾಮಾನ್ಯವಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಡಿಜೆ ಸೌಂಡಗಳು ಮಾತ್ರ ಜೋರಾಗಿತು. ರಸ್ತೆಯ ಉದ್ದಕ್ಕೂ ಎರಡೂ ಪಕ್ಷದ ಕಾರ್ಯಕರ್ತರು. ಅಭಿಮಾನಿಗಳು ಸೇರಿದು ನೋಡಿದರೆ ಚುನಾವಣೆ ರಂಗು ಎದ್ದು ಕಾಣಿಸುತ್ತಿತು. ಎಲ್ಲಿ ನೋಡಿದರಲ್ಲಿ ಕಟೌಟ್ಗಳು, ಬ್ಯಾನರ್ಗಳು ರಾರಾಜಿಸುತ್ತಿದ್ದವು. 


ಸುದ್ದಿ ಓದಿ