ಜಮಖಂಡಿ

ಪ್ರಶ್ನಿಸಿ, ಪರೀಕ್ಷಿಸಿ ತಾರ್ಕಿಕವಾದುದನ್ನು ಮಾತ್ರ ಒಪ್ಪಿಕೊಳ್ಳುವುದು ವೈಚಾರಿಕತೆ: ಡಾ. ಗಿರಡ್ಡಿ

ಪ್ರಶ್ನಿಸಿ, ಪರೀಕ್ಷಿಸಿ ತಾರ್ಕಿಕವಾದುದನ್ನು ಮಾತ್ರ ಒಪ್ಪಿಕೊಳ್ಳುವುದು ವೈಚಾರಿಕತೆ: ಡಾ. ಗಿರಡ್ಡಿ

ಜಮಖಂಡಿ 28: ವಿಚಾರಶೀಲತೆ ಹಾಗೂ ಚಿಂತನಶೀಲತೆಯೇ ವೈಚಾರಿಕತೆ. ಎಲ್ಲವನ್ನು ಯಥಾವತ್ತಾಗಿ ಒಪ್ಪಿಕೊಳ್ಳದೆ ಪ್ರಶ್ನಿಸಿ, ಪರೀಕ್ಷಿಸಿ ತಾರ್ಕಿಕವಾದುದನ್ನು ಮಾತ್ರ ಒಪ್ಪಿಕೊಳ್ಳುವುದೇ ವೈಚಾರಿಕತೆಂದು ಅಧ್ಯಾಪಕ ಡಾ.ಟಿ.ಪಿ. ಗಿರಡ್ಡಿ ಹೇಳಿದರು. 

ನಗರದ ಓಲೆಮಠದಲ್ಲಿ ನಡೆದ ಬಸವ ಸಮಕಾಲೀನ ಶರಣರ ಚರಿತಾಮೃತ ಹಾಗೂ ಚಿಂತಕರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕಾರಗಳ ಒಟ್ಟು ಮೊತ್ತವೆ ಸಂಸ್ಕೃತಿ, ಸಂಸ್ಕಾರ ಕಾರಣವಾದರೆ, ಸಂಸ್ಕೃತಿ ಅದರ ಪರಿಣಾಮ. ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪ, ಶಿಲೆಗೆ ಸಂಸ್ಕಾರ ಕೊಟ್ಟರೆ ಶಿಲ್ಪ, ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುವಂತೆ ಮನಸ್ಸು, ನಡೆ-ನುಡಿ, ಕಾಯಕ ಎಲ್ಲವನ್ನು ಪರಿಶುದ್ಧ ಮಾಡಿ ಕೊಂಡು ಸಂಸ್ಕಾರವಂತರಾದರೆ ಮಾನವ ಕೂಡ ಶರಣನಾಗಲು ಸಾಧ್ಯ ಎಂದರು.  

ಉಗರಗೋಳ ನಿರ್ವಾಣೇಶ್ವರ ಮಠದ ಮಹಾಂತ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣರ, ಸಂತರ ನುಡಿಗಳನ್ನು ಕೇಳಿ ಮನಸ್ಸನ್ನು ಪರಿಶುದ್ಧವಾಗಿಸಿಕೊಳ್ಳಬೇಕು. ಅದಕ್ಕಾಗಿ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು ಎಂದರು. 

ವಿಜಯಪುರದ ಶಾಂತಕುಮಾರ ಗುರೂಜಿ ಮಾತನಾಡಿ,ಯೋಗ ಮಾಡಿ ದೇಹವನ್ನು ರೋಗಮುಕ್ತ ಮಾಡಿಕೊಳ್ಳಬೇಕು. ಧ್ಯಾನ ಮಾಡಿ ಮನಸ್ಸಿನ ಶಾಂತಿ ಸಂಪಾದಿಸಬೇಕು. ಮಾತುಗಳನ್ನು ಮೃದುವಾಗಿಸಿ ಎಲ್ಲರೊಂದಿಗೆ ಸಂತಸದಿಂದ ಇರಬೇಕೆಂದರು. ಚಿಕ್ಕಲಕಿ ಕ್ರಾಸ್ ಆಶ್ರಮದ ಶಿವಾನಂದಶ್ರೀಗಳು ಆಶೀರ್ವಚನ ನೀಡಿದರು. ಓಲೆಮಠದ ಡಾ. ಚೆನ್ನ ಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶರಣೆ ಭಾರತಿ ಅಮ್ಮನವರು,ತಾಪಂ ಮಾಜಿ ಉಪಾಧ್ಯಕ್ಷ ಅಪ್ಪಾಸಾಹೇಬ ದೇವರವರ, ಕಾಡ ಪ್ಪ ದೇಸಾಯಿ, ಜೊಂಗನವರ ಇದ್ದರು. ನಿವೃತ್ತ ಶಿಕ್ಷಕ ಎಚ್‌.ಎಂ.ಶೆಟ್ಟರ ಅವರನ್ನು ಗೌರವಿಸಲಾಯಿತು. ಪಿ.ಎಸ್‌. ಕಟ್ಟಿಮನಿ, ಮಲ್ಲಿಕಾರ್ಜುನ ನಾವಿ ಪ್ರಾರ್ಥಿಸಿದರು. 


ಸುದ್ದಿ ಓದಿ