ಜಮಖಂಡಿ

ರಾಮ ಮಂದಿರದಿಂದ ಆಗಮಿಸಿದ ಆಮಂತ್ರಣದ ಪವಿತ್ರ ಮಂತ್ರಾಕ್ಷತೆ ಕಲಶಕ್ಕೆ ಪೂಜೆ

ರಾಮ ಮಂದಿರದಿಂದ ಆಗಮಿಸಿದ   ಆಮಂತ್ರಣದ ಪವಿತ್ರ ಮಂತ್ರಾಕ್ಷತೆ ಕಲಶಕ್ಕೆ ಪೂಜೆ

ಜಮಖಂಡಿ 16: ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ರಾಮ ಮಂದಿರದಿಂದ ಬಂದ ಆಮಂತ್ರಣದ ಪವಿತ್ರ ಮಂತ್ರಾಕ್ಷತೆ ಕಲಶಕ್ಕೆ ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು, ರುದ್ರಾವಧೂತ ಮಠದ ಕೃಷ್ಣಾನಂದ ಅವಧೂತರು, ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಶ್ರೀಗಳು ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.  

ರಾಮಜನ್ಮಭೂಮಿ ಟ್ರಸ್ಟವತಿಯಿಂದ ಅಯೋಧ್ಯೆಯ ಶ್ರೀರಾಮರ ಸನ್ನಿಧಿಯಲ್ಲಿ ಪೂಜಿಸಲ್ಪಟ್ಟ ಆಮಂತ್ರಣದ ಅಕ್ಷತೆಯನ್ನು ಮನೆ ಮನೆ ತಲುಪಿಸುವದು. ಆಮಂತ್ರಣದ ಅಕ್ಷತೆಯ ಕಲಶದ ಪೂಜೆಯೊಂದಿಗೆ ಸಂಕೀರ್ತನ ಯಾತ್ರೆ ಎ,ಜಿ,ದೇಸಾಯಿ ವೃತ್ತದಿಂದ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಮಸ್ಕಾರ ಮಂಡಳಿಯ ಮೈದಾನದವನ್ನು ಶೋಭಾಯಾತ್ರೆ ತಲುಪಿತು. 

ಮುತ್ತಿನ ಕಂತಿಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ಶ್ರೀರಾಮ ಗುಣಗಳನ್ನು ನಾವುಗಳು ಸ್ಮರಿಸಿಬೇಕು. ಅವರ ಆದರ್ಶವನ್ನು ಜೀವನದಲ್ಲಿ ಪಾಲಿಸುವ ಮೂಲಕ. ಜಾತಿ, ಮತ, ಪಂತ, ಬೇಧಗಳನ್ನು ಮರೆತು ಜೀವನವನ್ನು ಸಾಗಿಸಬೇಕು. ಇಂದು ಬಂದ ಮಂತ್ರಾಕ್ಷತೆಯು ಮನೆ, ಮನೆಗೆ ತಲುಪುವಂತಾಗಬೇಕು ಎಂದು ಆಶೀರ್ವಚನ ನೀಡಿದರು. 

ಶೋಭಾಯಾತ್ರೆಯಲ್ಲಿ ಶಾಸಕ ಜಗದೀಶ ಗುಡಗುಂಟಿ, ಡಾ,ವಿಜಯಲಕ್ಷ್ಮೀ ತುಂಗಳ, ಅಜೇಯ ಕಡಪಟ್ಟಿ, ಗಣೆೇಶ ಶಿರಗಣ್ಣವರ, ಪೂಜಾ ವಾಳ್ವೇಕರ, ಶ್ರೀಧರ ಕಂಬಿ, ವಿಶ್ವಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಉಮೇಶ ಶಿದರೆಡ್ಡಿ, ಶಂಕರ ಲೇಲೆ, ಶೈಲೇಶ ಅಪ್ಟೆ, ಪ್ರಶಾಂತ ಗಾಯಕವಾಡ, ಉಮೇಶ ಆಲಮೇಲಕರ, ಗೀತಾ ಸೂರ್ಯವಂಶಿ, ಸಾವಿತ್ರಿ ಗೋರನಾಳ, ನೀತೀನ ಹುಲ್ಯಾಳಕರ, ಲೋಕೇಶ ಪೂಜಾರಿ, ಡಾ ರಾಕೇಶ ಲಾಡ, ಪ್ರಭು ಹೂಗಾರ, ಶಶಿಕಾಂತ ವಿಶ್ವಬ್ರಾಹ್ಮಣ, ಗೀರೀಶ ಕೆಂಗನಾಳ, ಹನುಮಂತ ಗಿರಡ್ಡಿ, ಶ್ರೀನಿವಾಸ ಪುರೋಹಿತ, ಪವನ ಸಾಳುಂಕೆ, ಸರ್ವೋತ್ತಮ ಗಲಗಲಿ, ಶ್ರೀಶೈಲ ಮಾಳಿ, ನಂದು ಗಾಯಕವಾಡ, ವಿಠ್ಠಲ ಪರೀಟ ಸೇರಿದಂತೆ ನೂರಾರು ಮಹಿಳೆಯರು, ಯುವಕರು ಶೋಭಾಯಾತ್ರೆಯಲ್ಲಿ ಭಾಗವಹಿಸಿದರು. 

ಪೋಟೋ : ಎ-ಬಿ-ಸಿ, ಜಮಖಂಡಿ ನಗರದಲ್ಲಿ ರಾಮಜನ್ಮಭೂಮಿ ಟ್ರಸ್ಟವತಿಯಿಂದ ಅಯೋಧ್ಯೆಯ ಶ್ರೀರಾಮರ ಸನ್ನಿಧಿಯಲ್ಲಿ ಪೂಜಿಸಲ್ಪಟ್ಟ ಆಮಂತ್ರಣದ ಅಕ್ಷತೆಯನ್ನು ಮನೆ, ಮನೆ ತಲುಪಿಸುವದು ಆಮಂತ್ರಣದ ಶೋಭಾಯಾತ್ರೆ, 


ಸುದ್ದಿ ಓದಿ