ಆರ್ಥಿಕ ಬೆಳವಣಿಗೆಗೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ದೊಡ್ಡ ಪ್ರಮಾಣದ ಕೊಡುಗೆ
ಸಿಂದಗಿ29: ದೇಶದ ಆರ್ಥಿಕ ಬೆಳವಣಿಗೆಗೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ದೊಡ್ಡ ಪ್ರಮಾಣದ ಕೊಡುಗೆ ನೀಡಿವೆ ಎಂದು ಯುವ ಧುರಿಣ ಡಾ.ಸಿ.ಎಂ. ಮನಗೂಳಿ (ಮುತ್ತು) ಹೇಳಿದರು.
ತಾಲೂಕಿನ ಮೋರಟಗಿ ಗ್ರಾಮದ ದಸ್ಮಾ ವಾಣಿಜ್ಯ ಮಳಿಗೆಯಲ್ಲಿ ಸ್ಥಳಾಂತರಗೊಂಡ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದಲ್ಲಿ ಬಹಳ ವರ್ಷಗಳಿಂದ ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯುವ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವ ಮೂಲಕ ಜನಮೆಚ್ಚುಗೆ ಪಡೆದಿದೆ. ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದ ಗ್ರಾಹಕರು ನಿಗದಿತ ಸಮಯದಲ್ಲಿ ಅಸಲಿನ ಕಂಡು ಮತ್ತು ಬಡ್ಡಿಯನ್ನು ತುಂಬುವ ಮೂಲಕ ಬ್ಯಾಂಕನ ಅಭಿವೃದ್ದಿಗೆ ಕಾರಣರಾಗಬೇಕು. ಬ್ಯಾಂಕಿನ ಸಿಬ್ಬಂಧಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ವ್ಯವಹಾರದಲ್ಲಿ ಸಹಕರಿಸಬೇಕು ಎಂದು ಹೇಳಿದರು.
ಬ್ಯಾಂಕ್ ರಾಷ್ಟ್ರೀಕರಣವು ದೇಶದ ಬ್ಯಾಂಕಿಗ್ ವ್ಯಸವಸ್ಥೆಯ ಸ್ವರೂಪವನ್ನೇ ಅಮೂಲ್ಯವಾಗಿ ಬದಲಾವಣೆಯಾಗಿದ್ದರಿಂದ ಗ್ರಾಮೀಣ ಭಾಗಗಳಲ್ಲಿ ಸಾವಿರಾರು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಶಾಖೆಗಳು ತೆರೆಯಲ್ಪಟ್ಟವು ಎಂದು ಹೇಳಿದರು.
ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭವಾದ ಹಿನ್ನೆಯಲ್ಲಿ ಗ್ರಾಮೀಣ ಜನತೆಯ, ರೈತರ ಹಾಗೂ ಮಹಿಳೆಯರ ಉಳಿತಾಯದ ಹಣಕ್ಕೆ ಭದ್ರತೆ ಮತ್ತು ಸುರಕ್ಷತೆ ಸಿಕ್ಕಿತು. ಕೃಷಿ, ಉದ್ಯೋಗ ಸೃಷ್ಠಿ, ಬಡತನ ನಿರ್ಮೂಲನೆ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಮನೆ ಕಟ್ಟಲು ಮುಂತಾದ ವಲಯಗಳಿಗೆ ಬ್ಯಾಂಕುಗಳು ಸಾಲ ನೀಡುವ ಮೂಲಕ ಜನಸಾಮಾನ್ಯರ ಆರ್ಥಿಕ ಜೀವನ ಸುಧಾರಿಸಿವೆ ಎಂದು ಹೇಳಿದರು.
ಸಾನಿಧ್ಯ ವಹಿಸಿರುವ ಸೊನ್ನದ ಡಾ. ಶಿವಾನಂದ ಮಾಹಾಸ್ವಾಮಿಗಳು ಮಾತನಾಡಿದರು. ಬೆಂಗಳೂರಿನ ವಲಯ ವ್ಯವಸ್ಥಾಪಕ ಅನಸೂಯ ರೈ, ಯ.ವಿ. ಸುಬ್ಬರಾವ, ಎಸ್.ವಿ. ಬಿರಾದಾರ, ಗ್ರಾಪಂ ಮಾಜಿ ಅಧ್ಯಕ್ಷ ಎಮ್.ಟಿ. ಸಿಂಗೆ, ಎಮ್.ಆರ್. ಬೋನಾಳ, ಪಿಕೆಪಿಎಸ್ ಅಧ್ಯಕ್ಷ ವೀರನಗೌಡ ಪಾಟೀಲ, ಪ್ರಕಾಶ ಅಡಗಲ್, ನಿಂಗನಗೌಡ ಪಾಟೀಲ, ಮಲ್ಲು ಗೋಲಾ, ಶಾಖಾ ಪ್ರಬಂಧಕ ವಿ.ಪ್ರೆಮಕುಮಾರ ಬಸವರಾಜ ಕಡಿಮನಿ ಹಾಗೂ ಶಾಖಾ ಸಿಬ್ಬಂದಿಗಳು ಇದ್ದರು.