ಬೈಲಹೊಂಗಲ

ಕಡಿಮೆ ಮತದಾನ ಇರುವ ವಾರ್ಡಗಳಲ್ಲಿ ಜನಜಾಗೃತಿ ಜಾಥಾ

ಕಡಿಮೆ ಮತದಾನ ಇರುವ ವಾರ್ಡಗಳಲ್ಲಿ ಜನಜಾಗೃತಿ ಜಾಥಾ

ಬೈಲಹೊಂಗಲ 22: ಪಟ್ಟಣದಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.  

ಬೈಲಹೊಂಗಲ ನಗರದ ಚನ್ನಮ್ಮ ವಾರ್ಡ್‌ ಕಡಿಮೆ ಮತದಾನ ಪ್ರದೇಶವಾದ ಕಾರಣ, ಚುನಾವಣಾ ಆಯೋಗದ ನಿರ್ದೇಶನದಂತೆ, ಅದ್ಯಕ್ಷರು ತಾಲೂಕ ಸ್ವೀಪ್ ಸಮಿತಿ, ಪುರಸಭೆ ಹಾಗೂ ತಾಲೂಕ ಪಂಚಾಯತ್ ಬೈಲಹೊಂಗಲ ಸಂಯುಕ್ತ ಆಶ್ರಯದಲ್ಲಿ, ಬರುವ 2024 ರ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ  ವಾರ್ಡನ ಜನರಿಗೆ ಜಾಗೃತಿ ಮೂಡಿಸಲಾಯಿತು.   

ಮತದಾನ ಜಾಗೃತಿ ಕರಪತ್ರ, ಬ್ಯಾನರ್, ಜಂಗಲ್ಸ್‌ಗಳನ್ನ ಬಳಕೆ ಮಾಡಿ, ಹ್ಯಾಂಡ್ ಹೋಲ್ಡಿಂಗ್ಸ್‌ ಮತ್ತು ತಮಟೆ ಬಾರಿಸಿ, ಘೋಷಣೆ ಕೂಗುವುದರ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಲಾಯಿತು.  

ಸದರಿ ಜಾಥಾದಲ್ಲಿ ವಿರೇಶ ಹಸಬಿ ಪುರಸಭೆ ಮುಖ್ಯಾಧಿಕಾರಿಗಳು ಬೈಲಹೊಂಗಲ, ರಘು ಬಿ ಎನ್ ಸಹಾಯಕ ನಿರ್ದೇಶಕರು ತಾಪಂ ಬೈಲಹೊಂಗಲ, (ಸಿ.ಇ.ಓ) ಆರ್ ಎಸ್ ಹಿಟ್ಟಣಗಿ  ಸ್ವೀಪ್  ವಿಷಯ ನಿರ್ವಾಹಕ ಎಸ್ ಬಿ ಸಂಗನಗೌಡರ, ವ್ಯವಸ್ಥಾಪಕರು ಎಮ್ ಐ  ಕುಟ್ರಿ, ಬಿ ಐ ಗುಡಿಮನಿ ಮತ್ತು ಎಸ್ ವ್ಹಿ ಹಿರೇಮಠ, ಹಳೆಗೌಡರ ಬಿ ಎಲ್ ಓ  ಹಾಗೂ ಅಂಗನವಾಡಿ ಆಶಾ ಕಾರ್ಯರ್ತೆಯರು ಮತ್ತು ಪರುಸಭೆ ಸಿಬ್ಬಂದಿಗಳು ಹಾಜರಿದ್ದರು. 


ಸುದ್ದಿ ಓದಿ