ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ
ಜಮಖಂಡಿ 20: ಎ,ಆಯ್,ಯು,ಟಿ,ಯು,ಸಿ ಆಶಾ ಕಾರ್ಯಕರ್ತೆರು ವಿವಿಧ ಬೇಡಿಕೆಗಳನ್ನು ಕೇಂದ್ರ ಸರಕಾರ ಈಡೇರಿಸಬೇಕೆಂದು ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ನಗರದ ಎ,ಜಿ,ದೇಸಾಯಿ ವೃತ್ತದಿಂದ ಪಾದಯಾತ್ರೆ ಮೂಲಕ ತಾಲೂಕಡಳಿತ ಮಿನಿ ವಿಧಾನಸೌಧ ತೆರಳಿ ಕೇಂದ್ರ ಸರಕಾರದ ವಿರುದ್ದ ಘೋಷಣೆಯನ್ನು ಕೂಗುತ್ತಾ, ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು. ಗ್ರೇಡ್ 2 ತಹಶೀಲ್ದಾರ ಜೆ,ಸತೀಶಕುಮಾರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.
ನಂತರ ಪ್ರತಿಭಟನಾಕಾರರು ಮಾತನಾಡಿ, ಎಲ್ಲರಿಗೂ ಖಾಯಂ ಉದ್ಯೋಗವನ್ನು ಒದಗಿಸಿ. ಉದ್ಯೋಗದ ಹಕ್ಕುನ್ನು ಸಂವಿಧಾನದ ಮೂಲಭೂತ ಹಕ್ಕನ್ನಾಗಿಸಿಬೇಕು. ವಿದ್ಯುತ್ (ತಿದ್ದುಪಡಿ) ಮಸೂದೆ 2023 ಅನ್ನು ಹಿಂಪಡೆದು. ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ನಿಲ್ಲಿಸಿ. ಎಲ್ಲಾ ಪಿಂಚಣಿದಾರರಿಗೆ ಬೆಲೆ ಸೂಚ್ಯಂಕ ಅನುಗುಣವಾದ ಪಿಂಚಣಿಯನ್ನು ಖಾತ್ರಿಪಡಿಸಿ. ಕನಿಷ್ಠ 10,ಸಾವಿರ ರೂ, ಪಿಂಚಣಿಯನ್ನು ಒದಗಿಸಿ. ಈ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸಿಬೇಕು. ರಾಷ್ಟ್ರೀಯ ಕನಿಷ್ಠ ವೇತನವನ್ನು ತಿಂಗಳಿಗೆ 28,ಸಾವಿರ ರೂ,ಗೆ ಹೆಚ್ಚಿಸಿ. ಬೆಲೆ ಏರಿಕೆಯನ್ನು ನಿಯಂತ್ರಿಸಿಬೇಕು. ಆಹಾರದ ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿಯನ್ನು ಹಿಂಪಡೆದು. ಓಷಧಗಳು ಇತ್ಯಾದಿ. ಪೆಟ್ರೋಲ್, ಡೀಸೆಲ್ ಮತ್ತು ಎಲ್,ಪಿ,ಜಿ ಸಿಲಿಂಡರ್ಗಳ ಬೆಲೆ ಏರಿಕೆಯನ್ನು ನಿಯಂತ್ರಿಸಿಬೇಕು. ಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಖಾಯಂಗೊಳಿಸಿ. ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತ್ರಿಪಡಿಸಿ, ಉದ್ಯೋಗಗಳ ಗುತ್ತಿಗೀಕರಣವನ್ನು ನಿಲ್ಲಿಸಿ. ಸ್ಕಿಮ್ ಕಾರ್ಯಕರ್ತರನ್ನು ಸರ್ಕಾರಿ ನೌಕರರನ್ನಾಗಿ ಖಾಯಂಗೊಳಿಸಲು ಐಎಲ್ಸಿಯ 45ನೇ ಮತ್ತು 46ನೇ ಶಿಫಾರಸ್ಸುಗಳನ್ನು ಜಾರಿಗೊಳಿಸಿ, ಎಲ್ಲಾ ಸ್ಕಿಮ್ ಕಾರ್ಯಕರ್ತರಿಗೆ ಮಾಸಿಕ ಕನಿಷ್ಠ ವೇತನ 28, ಸಾವಿರ ರೂ,ಮತ್ತು ಪಿಂಚಣಿ 10, ಸಾವಿರ ರೂ,ಇಎಸ್ಐ, ಪಿಎಫ್ ಒದಗಿಸಿಬೇಕೆಂದು ಹಕ್ಕೊತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಅಂಜನಾ ಕುಂಬಾರ, ಸುನಿತಾ ಜಂಬಗಿ, ಶೋಭಾ ಕುಂಬಾರ, ವಿದ್ಯಾ ಕಡಕೋಳ, ಕಲಾವತಿ ಕೊಣ್ಣೂರ, ಅನುಷಾ ಹುಲ್ಯಾಳ, ಚನ್ನವ್ವ ಗುಲಬಾಳ, ಸವಿತಾ ಸರಗೋಳ, ಸುವರ್ಣ ಸವದಿ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.