ಜಮಖಂಡಿ

ರಾಮಗಿರಿ ಮಹಾರಾಜರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ರಾಮಗಿರಿ ಮಹಾರಾಜರ ವಿರುದ್ಧ ಕಠಿಣ ಕ್ರಮಕ್ಕೆ  ಒತ್ತಾಯಿಸಿ ಪ್ರತಿಭಟನೆ

ಜಮಖಂಡಿ 02: ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಧರ್ಮದ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿರುವ  ಮಹಾರಾಷ್ಟ್ರದ ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ, ವಿವಿಧ ಮುಸ್ಲಿಂಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆಯನ್ನು ನಡೆಸಿದರು. 

ನಗರದ ಎ.ಜಿ.ದೇಸಾಯಿ ಸರ್ಕಲ್‌ನಲ್ಲಿ ವಿವಿಧ ಮುಸ್ಲಿಂ ಪರ ಸಂಘಟನೆಗಳು ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ನಂತರ ಗ್ರೇಡ್2 ತಹಶೀಲ್ದಾರ ಕೆ,ವಾಯ್, ಬಿದರಿ ಅವರಿಗೆ ಮನವಿ ಸಲ್ಲಿಸಿದರು. 

ಮೌಲಾನಾ ಅಲ್ತಾಫಖಾನ ಮದನಿ ಪ್ರತಿಭಟನೆಯನ್ನು ಉದ್ದೇಶ ಮಾತನಾಡಿ, ಪ್ರವಾದಿ ಹಜರತ ಮೊಹಮ್ಮದ್ ಪೈಗಂಬರ ಅವರ ಕುರಿತು ಮಹಾಂತ ರಾಮಗಿರಿ ಮಹಾರಾಜರು ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.  ಅವರ ಕುರಿತಾಗಿ ರಾಮಗಿರಿ ಮಹಾರಾಜ ಅವಹೇಳನಕಾರಿ ಭಾಷಣ ಮಾಡಿದ್ದು, ಈ ಸ್ವಾಮೀಜಿ ಮೇಲೆ ಕಾನೂನು ರೀತಿ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. 

ಭಾರತದ ಸಂವಿಧಾನವು ಎಲ್ಲ ಧರ್ಮದ ಸಮಾಜ ಬಂಧುಗಳಿಗೆ ಸಮಾನ ರೀತಿಯಲ್ಲಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದರೂ, ಮಹಾಂತ ರಾಮಗಿರಿ ಮಹಾರಾಜ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವುದು ಇಸ್ಲಾಂ ಸಮಾಜದ ಬಾಂಧವರಿಗೆ ತೀವ್ರ ನೋವನ್ನುಂಟಾಗುವದಲ್ಲದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಇಂತಹ ಸ್ವಾಮೀಜಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. 

ಪ್ರತಿಭಟನೆಯಲ್ಲಿ ಮೌಲಾನಾ ಇಸಾ ಇನಾಮದಾರ, ಮೌಲಾನಾ ಅನೀಸ ಡಾಂಗೆ, ಮೌಲಾನಾ ಮುಫ್ತಿ ಹಾರೂನ, ಮೌಲಾನಾ ಫಾರೂಕ್, ಮೌಲಾನಾ ಮುಜಮ್ಮೀಲ ಶೇಖ, ಮೌಲಾನಾ ಅಲ್ತಾಫಖಾನ ಮದನಿ, ಮೌಲಾನಾ ಸರ್ಫರಾಜ, ರಾಜೇಸಾಬ ತಾಳಿಕೋಟಿ, ಖೀಜರ ಪೆಂಡಾರಿ, ಖಾಜಾಆಮೀನ ಕಂಕಣಪೀರ, ರಫೀಕ ಕಲಾದಗಿ, ಝಾಕೀರಹುಸೇನ್ ನಧಾಪ, ಅಬ್ದುಲ ಜಮಾದಾರ, ಸಮೀರ ಕಂಗನೋಳ್ಳಿ, ಅನ್ವರ ಮೋಮಿನ, ಮುಬಾರಕ ಅಪರಾದ, ನಸರೋದ್ದಿನ ಜಮಾದಾರ, ಉಸ್ಮಾನಸಾಬ ದಿಲಾವರ, ಮಕ್ಬೂಲ್ ಅಥಣಿಕರ, ಗುಡುಸಾಬ ಹೊನವಾಡ, ರಾಜು ಮಸಳಿ, ಮುಸ್ತಾಕ ಝೆಂಡೆ, ಅಯ್ಯುಬ ಗದಗ, ಅಸ್ಗರಅಲಿ ಝೆಂಡೆ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ