ಕಬ್ಬಿನ ದರ ನಿಗದಿ ಮಾಡಲು ಒತ್ತಾಯಿಸಿ ಪ್ರತಿಭಟನೆ
Protest demanding fixing of sugarcane prices
ಜಮಖಂಡಿ 04: ತಾಲ್ಲೂಕಿನ ಸಿದ್ದಾಪೂರ ಗ್ರಾಮದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಗಳು ಕೂಡಲೇ 3500 ಕಬ್ಬಿನ ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ. ಸಕ್ಕರೆ ಕಾರ್ಖಾನೆ ಆವರಣದಲ್ಲಿ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘಟನೆಯ ಪ್ರತಿಭಟನೆಯಲ್ಲಿ ಮೂರು ಕಾರಿನ ವಾಹನದ ಗಾಜನ್ನು ಪುಡ್ಡಿ-ಪುಡ್ಡಿ ಮಾಡಿದ ಘಟನೆ ನಡೆದಿದೆ.
ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ಪ್ರಸಕ್ತಸಾಲಿನ 3500 ದರ ನಿಗದಿ ಮಾಡಿ ಕಾರ್ಖಾನೆ ಪ್ರಾರಂಭ ಮಾಡಬೇಕು, 2021-22ನೇ ಸಾಲಿನ ಟನ್ ಕಬ್ಬಿಗೆ 62 ರೂ ಬಾಕಿ, 2023-24ನೇ ಸಾಲಿನ 114 ರೂ ಕಬ್ಬು ಕಟಾವುದಾರರ ಬಿಲ್, 2024-25ನೇ ಸಾಲಿನ 2ನೇ ಕಂತಿನ ಹಣ 200ರೂಗಳನ್ನು ಕೂಡಲೇ ಪಾವತಿ ಮಾಡಬೇಕು ಎಂದರು.
ಮುಖಂಡ ಮುತ್ತಪ್ಪ ಕೋಮಾರ ಮಾತನಾಡಿ, ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ಸರ್ಕಾರ ಕೂಡಿಕೊಂಡು ರೈತರ ಸಹನೆ ಪರೀಕ್ಷೆ ಮಾಡುತ್ತಿದೆ, ಕೂಡಲೇ ಅದನ್ನು ನಿಲ್ಲಿಸಿ ರೈತರ ಹಿತವನ್ನು ಕಾಪಾಡಬೇಕು, ಕಳೆದ ಒಂದು ವಾರದಿಂದ ರಾಜ್ಯದ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆದರು ಸರ್ಕಾರದ ಸಚಿವರು, ಮುಖ್ಯಮಂತ್ರಿಗಳು ಬಾಯಿ ಬಿಚ್ಚಿ ಮಾತನಾಡುತ್ತಿಲ್ಲ, ಕಾರ್ಖಾನೆಗಳ ಎಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಈರ್ಪ ಹಂಚಿನಾಳ, ಹಣಮಂತಗೌಡ ಸೋರಗಾಂವಿ, ಹಣಮಂತ ನಬಾಬ, ನಾಗಪ್ಪ ಪೂಜಾರಿ ಸೇರಿದಂತೆ ಇತರರು ಇದ್ದರು.
ಪ್ರತಿಭಟಣೆ ಮಾಡಲು ನಮ್ಮದು ಯಾವುದೇ ತೊಂದರೆ ಇಲ್ಲ, ಪ್ರತಿಭಟನೆ ವೇಳೆ ಮೂರು ಕಾರಿನ ವಾಹನದ ಗಾಜನ್ನು ಕಲ್ಲಿನಿಂದ ಒಗೆದು ಒಡೆದಿದ್ದಾರೆ, ಕಳೆದ ವರ್ಷ ಟ್ರ್ಯಾಕ್ಟಗೆ ಬೆಂಕಿ ಹಚ್ಚಿ ನಷ್ಟವನ್ನು ಮಾಡಿದ್ದರು ಕೆಲವರು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಕಾರ್ಖಾನೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 