ಜನರ ಓಡಾಟಕ್ಕೆ ಮೇಲ್ಸೇತುವೆ ನಿಮರ್ಿಸಲು ಆಗ್ರಹಿಸಿ ಪ್ರತಿಭಟನೆ

ಜನರ ಓಡಾಟಕ್ಕೆ ಮೇಲ್ಸೇತುವೆ ನಿಮರ್ಿಸಲು ಆಗ್ರಹಿಸಿ ಪ್ರತಿಭಟನೆ

ಲೋಕದರ್ಶನ ವರದಿ

ಬಳ್ಳಾರಿ 19:ಎಸ್ಯುಸಿಐಸಿ ಕಮ್ಯೂನಿಸ್ಟ್ ಪಕ್ಷದ ನೇತೃತ್ವದಲ್ಲಿ ಕೌಲ್ಬಜಾರ್ನ ಜನರು 1ನೇ ಗೇಟ್ ಬಳಿ ಜನರ ಓಡಾಟಕ್ಕೆ ಮೇಲ್ಸೇತುವೆ ನಿಮರ್ಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳಾದ ಸತೀಶ್ಕುಮಾರ್ ಅವರಿಗೆ ಹಾಗೂ ಬಳ್ಳಾರಿ ರೈಲ್ವೇ ಮ್ಯಾನೇಜರ್  ಎ.ಆರ್.ಜಿ.ರೆಡ್ಡಿ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಎಸ್ಯುಸಿಐ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಎಮ್.ಎನ್.ಮಂಜುಳಾ ರವರು ಮಾತನಾಡುತ್ತಾ.., "ಬಳ್ಳಾರಿಯ ಕೌಲ್ಬಜಾರ್ನ 1ನೇ ಗೇಟ್ನ ಬಳಿ ವಾಹನಗಳಿಗೆ ಮೇಲ್ಸೇತುವೆ ನಿಮರ್ಿಸಿದ ಮೇಲೆ ಗೇಟ್ ಅನ್ನು ಸಂಪೂರ್ಣವಾಗಿ ಗೋಡೆ ಕಟ್ಟಿದ್ದಾರೆ, ಅದರ ಪಕ್ಕದಲ್ಲಿ ಜನರು ಓಡಾಡಲೆಂದು ಸಣ್ಣದಾದ ಜಾಗ ಬಿಟ್ಟಿದ್ದು ಅದರಲ್ಲಿಯೇ ದಿನನಿತ್ಯ ಅಕ್ಕಪಕ್ಕದ ಶಾಲಾ-ಕಾಲೇಜಿನ ವಿದ್ಯಾಥರ್ಿಗಳು, ಜನರು ಅಳಿಗಳನ್ನು ದಾಟಿ ಓಡಾಡುತ್ತಿದ್ದಾರೆ. ಈ ದಾರಿಯು ಜನರಿಗೆ ಸುರಕ್ಷಿತವಾಗಿಲ್ಲ. ಇಲ್ಲಿಯೇ ಗೂಡ್ಸ್ ಗಾಡಿಗಳು ಬಂದು ಗಂಟೆಗಟ್ಟಲೆ ನಿಲ್ಲುತ್ತವೆ. ಇದರಿಂದ ದಾರಿಯು ಇದ್ದೂ ಇಲ್ಲದಂತಿದೆ.

ಅಲ್ಲದೇ ಈಗಿರುವ ದಾರಿಯಲ್ಲಿ ವಿದ್ಯಾಥರ್ಿನೀಯರು, ಮಹಿಳೆಯರು, ಒಬ್ಬೊಂಟಿಯಾಗಿ ಓಡಾಡಲು ಸುರಕ್ಷಿತವಾಗಿಲ್ಲ. ಅಲ್ಲಿ ವಿದ್ಯಾಥರ್ಿನಿ ಮಹಿಳೆಯರನ್ನು ಗಂಡಸರು ಚುಡಾಯಿಸಿರುವುದನ್ನು ನಾಗರೀಕರು ಕಂಡು ಅವರನ್ನು ಬೈದು ಕಳುಹಿಸಿರುವ ಘಟನೆಗಳು ನಡೆದಿವೆ. ಜನರ ಓಡಾಟಕ್ಕೆ ಮೇಲ್ಸೇತುವೆ ನಿಮರ್ಿಸುವುದು ಸಾವಿರಾರು ಜನರ ಓಡಾಟಕ್ಕೆ ಅನುಕೂಲವಾಗುತ್ತದೆ, ಹಾಗೂ ಮುಖ್ಯವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯುವ ಮುನ್ನ ಎಚ್ಚೆತ್ತುಕೊಳ್ಳುವುದು ಓಳ್ಳೆಯದು. ಆದಕಾರಣ 1ನೇ ಗೇಟ್ ಬಳಿ ಜನರ ಓಡಾಟಕ್ಕೆ ಮೇಲ್ಸೇತುವೆ ತುತರ್ುಕ್ರಮವಾಗಿ ನಿಮರ್ಾಣ ಮಾಡಬೇಕೆಂದು" ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಸ್ಯುಸಿಐ(ಸಿ)ನ ಮುಖಂಡರಾದ ಸುರೇಶ್.ಜಿ, ಹಾಗೂ ನಾಗರಿಕರಾದ ದುರ್ಗಮ್ಮ, ರಾಮಕ್ಕ, ದೇವರಾಜ್, ಶ್ರೀನಿವಾಸ್, ಅಚ್ಚಮ್ಮ, ರಾಜ, ವಿಶ್ವನಾಥ್, ತ್ಯಾಗರಾಜ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


ಸುದ್ದಿ ಓದಿ