ಆಯ್ಕೆಪಟ್ಟಿ ರದ್ದು ಪಡಿಸಲು ಆಗ್ರಹಿಸಿ ಅಲೆಮಾರಿಗಳಿಂದ ಪ್ರತಿಭಟನೆ

ಆಯ್ಕೆಪಟ್ಟಿ ರದ್ದು ಪಡಿಸಲು ಆಗ್ರಹಿಸಿ ಅಲೆಮಾರಿಗಳಿಂದ ಪ್ರತಿಭಟನೆ

ಬಳ್ಳಾರಿ 14: ಲಾಟರಿ ಮೂಲಕ ನಡೆದ ಫಲಾನುಭವಿಗಳ ಆಯ್ಕೆ ನೀತಿಯನ್ನು ಖಂಡಿಸಿ ಅಲೆಮಾರು ಬುಡಕಟ್ಟು ಮಹಾ ಸಭದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಬಳಿ ಪ್ರತಿಭಟನೆ ನಡೆಸಿದರು. ಅಲೆಮಾರಿ ಅಭಿವೃದ್ದಿ ಕೋಶ ಬೆಂಗಳೂರು ಸ್ವಯಂ ಉದ್ಯೋಗಯೋಜೆನೆ ಅಡಿ ಜಿಲ್ಲೆಯಾಧ್ಯಂತ ಸುಮಾರು 960 ಅರ್ಹ ಫಲಾನುಭವಿಗಳು ಅಜರ್ಿಯನ್ನು ಕಳುಹಿಸಿದ್ದು. ಅದರಲ್ಲಿ 300 ಫಲಾನುಭಾವಿಗಳಿಗೆ ಮಾತ್ರ ಆಯ್ಕೆ ಮಾಡಲು ಜಿಲ್ಲಾಧಿಕಾರಿಗಳಿಗೆ ನಿಧರ್ೇಶನ ನೀಡಲಾಗಿದೆ. ಆದರೆ ಡಿ.12ರಂದು ಸಮಾಜಕಲ್ಯಾಣ ಇಲಾಖೆ ಕಛೇರಿಯಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದು ಅವೈಜ್ಞಾನಿಕ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯೆಕ್ತ ಪಡಿಸಿದರು. ಈ ಲಾಟರಿ ಪದ್ದತಿಯಲ್ಲಿ ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧಿಕಾರಿಗಳು ಮತ್ತು ಅನುಷ್ಟಾನ ಸಮಿತಿ ಸದಸ್ಯೆರು ತಮಗೆ ಬೇಕಾಗಿರುವ ಮುಖಂಡರುಗಳ ಮೂಲಕ ಲಾಟರಿ ನಡೆಸಿದ್ದಾರೆ. ಇದರಿಂದ ಅರ್ಹ ಮತ್ತು ನಿರಾಶ್ರಿತ ಅಲೆಮಾರಿಗಳಿಗೆ ಆಯ್ಕೆಯಾಗದೆ ಕೂಡಲೇ ಲಾಟರಿ ಮೂಲಕ ಆಯ್ಕೆ ಮಾಡಿರುವ ಪಟ್ಟಿಯನ್ನು ರದ್ದುಪಡಿಸಬೇಕಂದು ಒತ್ತಾಯಿಸಿದರು. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಂಡು ಲಾಟರಿ ಮೂಲಕ ಆಯ್ಕೆ ಮಾಡಿರುವ ಪಟ್ಟಿಯನ್ನು ರದ್ದು ಮಾಡದಿದ್ದಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳಲಾಗಿತ್ತದೆ ಎಂದು ಪ್ರತಿಭಟನಾ ಕಾರರು ಎಚ್ಚರಿಕೆ ನೀಡಿದರು. ಈ ಪ್ರತಿಭನಟೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಸುಬ್ಬಣ್ಣ, ಪ್ರಧಾನ ಕಾರ್ಯದಶರ್ಿ ಮಹಾದೇವ, ಮುಖಂಡರುಗಳಾದ ಶಿವಕುಮಾರ, ನಾಗೇಶ, ಮಹೇಶ್, ಕರಿಯಪ್ಪ, ಹೊನ್ನುರಪ್ಪ ಸೇರಿದಂತೆ ನೂರಾರು ಜನ ಪ್ರತಿಭಟನಾಕಾರರು ಭಾಗವಹಿಸಿದ್ದರು.

ಸುದ್ದಿ ಓದಿ