ಪರಿಸರವನ್ನು ರಕ್ಷಣೆ ಮಾಡಿದರೆ ಅದು ನಮ್ಮ ಜೀವವನ್ನು ರಕ್ಷಿಸುತ್ತದೆ: ವಾಗಮೋರೆ
ಲೋಕದರ್ಶನ ವರದಿ,
ಜಮಖಂಡಿ : 8: ಪರಿಸರವನ್ನು ರಕ್ಷಣೆ ಮಾಡಿದರೆ ಅದು ನಮ್ಮ ಜೀವವನ್ನು ರಕ್ಷಿಸುತ್ತದೆ. ಪರಿಸರವನ್ನು ರಕ್ಷಣೆ ಮಾಡುವುದು ಇಂದಿನ ದಿನಮಾನದಲ್ಲಿ ಬಹಳ ಮುಖ್ಯವಾಗಿದೆ ಎಂದು ನಗರಸಭೆ ಸದಸ್ಯ ಕುಶಾಲ ವಾಗಮೋರೆ ಹೇಳಿದರು.
ನಗರದ ವಾರ್ಡ ನಂ.30ರ ಲಾಲ್ ಬಹದ್ದೂರ ಶಾಸ್ತ್ರಿ ನಗರದ ಉದ್ಯಾನದ ಸುತ್ತ-ಮುತ್ತಲು ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿ ಮಾತನಾಡಿದರು.
ಪರಿಸವನ್ನು ನಾಶ ಮಾಡಿ. ಮನೆಗಳನ್ನು ಕಟ್ಟುವ ಮೂಲಕ ಇರುವ ಗಿಡ-ಮರಗಳನ್ನು ಹಾಳು ಮಾಡುವ ಪರಿಸ್ಥಿತಿಗೆ ಬಂದಿದೆ. ನಗರ ಎಷ್ಟು ವಿಸ್ತಾರವಾಗಿ ಬೆಳೆಯುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಪರಿಸರವು ನಾಶವಾಗುತ್ತಿದೆ. ಕೇವಲ ಮನೆಗಳನ್ನು ನಿರ್ಮಾಣ ಮಾಡುವುದು ಅಷ್ಟೇ ಅಲ್ಲದೆ. ತಮ್ಮ ಮನೆಯ ಮುಂದೆ ಗಿಡ-ಮರಗಳನ್ನು ಬೆಳೆಸಿ, ಪಾಲನೆ, ಪೋಷಣೆ ಮಾಡಿದರೆ ಮಾತ್ರ ಪರಿಸರವನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಮಾಜಿ ನಗರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಉಕಮನಾಳ, ಜಂಬುಕೇಶ್ವರ ಗಾರ್ಮೆಂಟ್ ಸಂಸ್ಥೆಯ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ ಮಾತನಾಡಿದರು. ವಾರ್ಡ ನಂ, 30 ರಲ್ಲಿ ನೂರಾರು ಸಸಿಗಳನ್ನು ನಡೆವು ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಕಾಶೀಬಾಯಿ ಹೂಗಾರ, ಮಲ್ಲಿಕಾರ್ಜುನ ಮಠದ, ಪ್ರೀಯಾ ಚಿಮ್ಮಡ, ರೂಪಾ ಗೇವಾರಿ, ಲಕ್ಷ್ಮೀ ಭೂಸರಡ್ಡಿ, ವಾಣಿ ಇಂಗಳಗಾವಿಮಠ, ಪೂಜಾ ಬಿದರಿ,ಶಿವಾಜಿ ಸಬಕಾಳೆ, ನಾಗರಾಜ ಭಜಂತ್ರಿ ಸೇರಿದಂತೆ ಅನೇಕರು ಇದ್ದರು.