ಸೌರಶಕ್ತಿ ಉಪಯೋಗಿಸಿ ಪರಿಸರ ರಕ್ಷಿಸಿ: ಡಾ.ಬಿ.ಕೆ.ಎಸ್.ಮೂತರ್ಿ

ಸೌರಶಕ್ತಿ ಉಪಯೋಗಿಸಿ ಪರಿಸರ ರಕ್ಷಿಸಿ: ಡಾ.ಬಿ.ಕೆ.ಎಸ್.ಮೂತರ್ಿ

ಲೋಕದರ್ಶನ ವರದಿ

ಬಳ್ಳಾರಿ 05:ನಗರದ ಖ್ಯಾತ ವೈದ್ಯರು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆಯ ಹಿರಿಯ ಸದಸ್ಯರಾದ ಡಾ.ಬಿ.ಕೆ.ಎಸ್.ಶ್ರೀನಿವಾಸ ಮೂತರ್ಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ಹಾಗೂ ಸೆಲ್ಕೊ ಫೌಂಡೇಷನ್ನ ಸಹಯೋಗದೊಂದಿಗೆ  ಎಫ್.ಪಿ.ಎ.ಆಯ್ ಬಳ್ಳಾರಿ ಶಾಖೆಯಲ್ಲಿ ಸೌರಶಕ್ತಿಯ ವಿದ್ಯುತ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು. 

ಕಾರ್ಯಕ್ರಮ ಅತಿಥಿಗಳಾಗಿ ಆಗಮಿಸಿದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾದ ಉಮೇಶ ಆರಾದ್ಯ ಸಂಸ್ಥೆಯ ಸೆಕ್ರೆಟರಿ ಜನರಲ್ ಆಗಿರುವ ಡಾ.ಕಲ್ಪನಾ ಆಪ್ಟೆ ಈ ಸೋಲಾರ್ ವಿದ್ಯುತ್ಶಕ್ತಿ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಿರುವುದು ನಮ್ಮ ಎಲ್ಲಾ ಶಾಖೆಗಳಲ್ಲಿಯಾ ಬಳ್ಳಾರಿ ಶಾಖೆಯ ಪ್ರಥಮ ಶಾಖೆಯಾಗಿರುತ್ತದೆ, ಇದರ ಉಪಯೋಗಗಳನ್ನು ಗಮನಿಸಿ ನಾವು ಇತರ ಶಾಖೆಗಳಲ್ಲಿಯೂ ಪ್ರಾರಂಭಿಸಲು ಯೋಜನೆಮಾಡುತ್ತೇವೆ.  ಅದಕ್ಕೆ ಸೆಲ್ಕೊ ಫೌಂಡೇಷನ್ ಇದೇ ರೀತಿ ಸಹಕಾರ ನೀಡಬೇಕಾಗಿ ವಿನಂತಿಸಿಕೊಂಡರು.  

ಸೆಲ್ಕೊ ಫೌಂಡೇಷನ್ ಅಧಿಕಾರಿಗಳಾದ ನಾಗೇಶ್ರಾವ್, ಮಹಾಂತೇಶ, ಪ್ರಕಾಶ್ಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿ ಸೆಲ್ಕೊ ಫೌಂಡೇಶನ್ ಕಡೆಯಿಂದ ಅನೇಕ ಬಡಜನರಿಗೆ ಸಹಾಯ ಮಾಡಿದ್ದೇವೆ ಅದರಿಂದ ಅವರ ಜೀವನ ಮಟ್ಟ ಈಗ ಸುಧಾರಿಸಿದೆ.  ಅಲ್ಲದೇ ಯಾರಾದರೂ ಅವಶ್ಯಕತೆ ಇರುವ ಬಡವರು ಮುಂದೆ ಬಂದರೆ ಅವರಿಗೆ ನಮ್ಮ ಫೌಂಡೇಷನ್ ಸಹಾಯಹಸ್ತ ನೀಡುತ್ತದೆ ಎಂದು ಆಶ್ವಾಸನೆ ನೀಡಿದರು. ಸದರಿ ಕಾರ್ಯಕ್ರಮದಲ್ಲಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ಎಲ್ಲಾ ಶಾಖೆಗಳ ಪರವಾಗಿ, ಡಾ.ಬಿ.ಕೆ.ಶ್ರೀನಿವಾಸ್ ಮೂತರ್ಿಯವರನ್ನು ಅನನ್ಯ 25 ವರ್ಷಗಳ ಅಮೂಲ್ಯ ಸೇವೆಗಾಗಿ ಸನ್ಮಾನಿಸಲಾಯಿತು. 

ಒಟ್ಟು 10 ಲಕ್ಷದ ಮೊತ್ತಿನಲ್ಲಿ ಅರ್ದ ಅಂದರೆ 5 ಲಕ್ಷ ರೂಗಳನ್ನು  ಸೆಲ್ಕೊ ಫೌಂಡೇಷನ್ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಬಳ್ಳಾರಿ ಶಾಖೆಗೆ ಅನುದಾನ ರೂಪದಲ್ಲಿ ನೀಡಿದೆ ಅದಕ್ಕೆ ಬಹು ಆಭಾರಿಯಾದ ಸಂಸ್ಥೆ, ಸೆಲ್ಕೊ ಫೌಂಡೇಷನ್ ಅಧಿಕಾರಿಗಳನ್ನು ಸನ್ಮಾನಿಸಿತು. ಶಾಖೆಯ ಹಿರಿಯ ಸಿಬ್ಬಂದಿ ಸುಶೀಲಾ ನಾಯಕ್ರನ್ನು ಸನ್ಮಾನಿಸುವುದರ ಮೂಲಕ 20 ವರ್ಷಗಳ ಸೇವೆಯನ್ನು ಸ್ಮರಸಿತು.  

ಸಂಸ್ಥೆಯ ಬಳ್ಳಾರಿ ಶಾಖೆಯ ವತಿಯಿಂದ ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನಡೆಸಲಾಗಿತ್ತು ತರಬೇತಿ ಪಡೆದವರಿಗೆ ಈ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಅದ್ಯಕ್ಷೀಯ ಭಾಷಣ ಶಾಖೆಯ ಅಧ್ಯಕ್ಷರಾದ ಎಸ್.ವಿಜಯಸಿಂಹ ಸೆಲ್ಕೊ ಫೌಂಡೇಷನ್ ಕಂಪನಿಗೆ ನಾವು ಬಹಳ ಆಭಾರಿಯಾಗಿದ್ದೇವೆ, ಸೌರಶಕ್ತಿಯ ಉಪಯೋಗ ನಾವು ಪಡೆಯುವುದರ ಜೊತೆಗೆ ಇತರರಿಗೂ ಇದರ ಬಗ್ಗೆ ತಿಳಿಸಿಹೇಳುವ ಕಾರ್ಯವನ್ನು ನಾವು ಮಾಡುತ್ತೇವೆ ಎಂದರು.  

ಅನಿಲ್ಕುಮಾರ ಶಾಖಾಪುರ ಪ್ರಾರ್ಥಸಿದರು ಕಾರ್ಯಕ್ರಮದ ಪ್ರಸ್ತಾವನೆಯನ್ನು ಕಾರ್ಯದಶರ್ಿ ಟಿ.ಜಿ.ವಿಠ್ಠಲ್ ಮಾಡಿದರು, ಸುಜಾತಾ ಪುರಾಣಿಕ ಸ್ವಾಗತಿಸಿದರು, ಮಲ್ಲಿಕಾಜರ್ುನ ವಂದಿಸಿದರು.  ಶಾಖಾಧಿಕಾರಿ ಎಸ್.ವಿಜಯಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು. 

ವಿಶೇಷ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ಪ್ಯಾಟ್ರನ್ ಡಾ.ಎಮ್.ಎನ್.ತಾವರೆಗೆರೆ ಕಾರ್ಯಕ್ರಮಕ್ಕೆ ಶೋಭೆ ತಂದಿದ್ದರು.  ಅಲ್ಲದೇ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ ಡಾ.ಎಸ್.ಕೆ.ಅರುಣ್, ಖಜಾಂಜಿ ಡಾ.ಚಂದನಾ, ಸದಸ್ಯರಾದ ಪ್ರಶಾಂತಿ ಕೇಣಿ, ಭಾಗ್ಯ, ರಾಯಚೂರು ಶಾಖೆಯ ಅದ್ಯಕ್ಷರು, ಹಾಗೂ ಇತರ ಗಣ್ಯರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಸಂಸ್ಥೆಯ ಎಲ್ಲಾ ಸಿಬ್ಬಂದಿಗಳೂ ಹಾಗೂ ಸ್ವಸಹಯ ಸಂಘದ 100 ಜನ ಸದಸ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಷೇಶ ಶೋಭೆ ತಂದಿದ್ದರು.                            


ಸುದ್ದಿ ಓದಿ