ಅಥಣಿ

ಅಥಣಿ ಮತಕ್ಷೇತ್ರದಲ್ಲಿ ಜನಪರ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ: ಚಿದಾನಂದ ಸವದಿ

ಅಥಣಿ ಮತಕ್ಷೇತ್ರದಲ್ಲಿ ಜನಪರ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ: ಚಿದಾನಂದ ಸವದಿ

ಅಥಣಿ 21: ಮಾಜಿ ಉಪ ಮುಖ್ಯಮಂತ್ರಿಗಳು, ಶಾಸಕರಾದ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಅಥಣಿ ಮತಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಜನಪರ ಯೋಜನೆಗಳು ಅನುಷ್ಠಾನ ಗೊಳ್ಳುತ್ತಿವೆ ಎಂದು ಕಾಂಗ್ರೆಸ್ ಪಕ್ಷದ ಯುವ ನಾಯಕ ಚಿದಾನಂದ ಸವದಿ ಹೇಳಿದರು.        

ಅವರು ತಾಲೂಕಿನ ಹುಲಗಬಾಳಿ 30 ಲಕ್ಷ ರೂ.ಗಳ ಚರಂಡಿ ಹಾಗೂ  ಶೇಗುಣಸಿ ಗ್ರಾಮದಲ್ಲಿ 25 ಲಕ್ಷ ರೂ.ಅನುದಾನದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಅನೇಕ ವರ್ಷಗಳಿಂದ ಅಥಣಿ ಪಟ್ಟಣದಲ್ಲಿ  ನನೆಗುದಿಗೆಗೆ ಬಿದ್ದಿದ್ದ ಜೋಡು ಕೆರೆಗಳ ಅಭಿವೃದ್ಧಿಗಾಗಿ 15 ಕೋಟಿ ಮತ್ತು ಭಾಗೀರಥಿ ನಾಲಾ ಅಭಿವೃದ್ಧಿಗಾಗಿ 10 ಕೋಟಿ ಅನುದಾನ ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದರು.         

ಅಥಣಿ ಮತಕ್ಷೇತ್ರದ ಪೂರ್ವಭಾಗದ ತೆಲಸಂಗ, ಹಾಲಳ್ಳಿ, ಕಕಮರಿ, ಕನ್ನಾಳ ಸೇರಿದಂತೆ ಏಳು ಗ್ರಾಮಗಳು ಕರಿ ಮಸೂತಿ ಏತ ನೀರಾವರಿ ಯೋಜನೆಯಿಂದ ವಂಚಿತಗೊಂಡಿದ್ದವು ಹೀಗಾಗಿ ಈ ಗ್ರಾಮಗಳ ವ್ಯಾಪ್ತಿಯನ್ನು ನೀರಾವರಿಗೊಳಿಸುವ ಉದ್ದೇಶದಿಂದ ಸುಮಾರು 1450 ಕೋಟಿ ರೂ.ಗಳ ಅನುದಾನದಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿಯ ಮೊದಲ ಹಂತ ಎರಡು ವರ್ಷಗಳಲ್ಲಿಯೇ ಪೂರ್ಣಗೊಳ್ಳಲಿದೆ ಎಂದ ಅವರು ಶಾಸಕ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಮತ್ತಷ್ಟು ಯೋಜನೆಗಳು ಮುಂದಿನ ಕೆಲವೇ ವರ್ಷಗಳಲ್ಲಿ ಅನುಷ್ಠಾನ ಗೊಳ್ಳುವ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.        

ಈ ಸಂದರ್ಭದಲ್ಲಿ ಧುರೀಣರಾದ ಗ್ರಾಮ ಪಂಚಾಯತ ಅಧ್ಯಕ್ಷ ಸಿದ್ಧಪ್ಪಾ ಕಬ್ಬುರ, ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಧುರೀಣರಾದ ರವಿ ಪಾಟೀಲ, ರಮೇಶ ಪಾಟೀಲ, ಮಲಗೌಡ ಪಾಟೀಲ, ಸುಭಾಸ ಗುಳ್ಳನವರ,  ನಾಗರಾಜ ಕಾಂಬಳೆ, ಸಿದ್ಧಾರೂಡ ಕೆಂಪಿ, ಸಿದ್ದು ಸಾರಾವರಿ, ಶಿವರುದ್ರ ಘೂಳಪ್ಪನವರ, ಶ್ರೀಶೈಲ ನಾಯಿಕ, ಗುತ್ತಿಗೆದಾರರಾದ ಶಿವಪುತ್ರ ನಾಯಿಕ, ಸಿದ್ಧಾರೂಢ ನ್ಯಾಮಗೌಡ, ಪ್ರವೀಣ ಭಜಂತ್ರಿ, ಅಜೀತ ರಂಟಿ, ಅಣ್ಣಪ್ಪಾ ನಾಯಿಕ, ಪ್ರವೀಣ ನಾಯಿಕ ಉಪಸ್ಥಿತರಿದ್ದರು. 


ಸುದ್ದಿ ಓದಿ